ನಟಿ ಪೂನಂ ಪಾಂಡೆ ಅವರೊಂದಿಗೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ನೆಟ್ಟಿಗರು ಪರ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನಟಿಯ ಕೆನ್ನೆಗೆ ಮುತ್ತು ಕೊಡುವುದಕ್ಕೆ ಮುಂದಾಗಿ ಕೆಟ್ಟದಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನೋಡಿದ ಕೆಲವರು ಇದು ಪಬ್ಲಿಸಿಟಿ ಗಿಮಿಕ್ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪೂನಂ ಪಾಂಡೆ ಜೊತೆ ನಾಚಿಕೆಗೇಡಿನ ವರ್ತನೆ: ಇತ್ತೀಚೆಗೆ ಪೂನಂ ಪಾಂಡೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಕೆಂಪು ಬಣ್ಣದ ಗೌನ್ ಮತ್ತು ಬೂದು ಬಣ್ಣದ ಡೆನಿಮ್ ಜಾಕೆಟ್ ಧರಿಸಿದ್ದರು. ಪೂನಂ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಾ ನಗುತ್ತಾ ಮಾತನಾಡುತ್ತಿದ್ದರು. ಆಗ ಅವರ ಅಭಿಮಾನಿಯೊಬ್ಬ ಹಿಂದಿನಿಂದ ಬಂದು ಅವರ ಪಕ್ಕದಲ್ಲಿ ನಿಂತುಕೊಂಡಾಗ ಅವರು ಬೆಚ್ಚಿಬಿದ್ದರು. ಆದರೆ, ಆ ಅಭಿಮಾನಿ ಸೆಲ್ಫಿ ಕೇಳಿದ. ಪೂನಂ ಅದಕ್ಕೆ ಒಪ್ಪಿಕೊಂಡರು. ಆದರೆ, ಆತ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪೂನಂಗೆ ಕಿಸ್ ಮಾಡಲು ಪ್ರಯತ್ನಿಸಿದಾಗ ಪರಿಸ್ಥಿತಿ ಕೈಮೀರಿ ಹೋಯಿತು. ಪೂನಂ ಆತನನ್ನು ತಳ್ಳಿ ಅಲ್ಲಿಂದ ದೂರ ಸರಿದರು. ಅಲ್ಲಿದ್ದವರು ಆ ವ್ಯಕ್ತಿಯನ್ನು ಹಿಡಿದು ಪೂನಂನಿಂದ ದೂರ ಸರಿಸಿದರು.

ಇದನ್ನೂ ಓದಿ: ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಪಾಪವೆಲ್ಲಾ ಹೋಯ್ತು ಎಂದ ಪೂನಂ ಪಾಂಡೆ

ಪೂನಂ ಪಾಂಡೆ ವಿಡಿಯೋ ವೈರಲ್: ಇನ್ನು ನಟಿ ಪೂನಂ ಪಾಂಡೆಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರೊಬ್ಬರು, '50 ರೂಪಾಯಿ ಓವರ್ ಆಕ್ಟಿಂಗ್ ಕಟ್' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಇದೆಲ್ಲಾ ಮಾಡಲು ಎಷ್ಟು ಖರ್ಚಾಯಿತು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಇದು ಸ್ಕ್ರಿಪ್ಟೆಡ್ ಅಲ್ವಾ?' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಅವಳು ಇದನ್ನೇ ಡಿಸರ್ವ್ ಮಾಡ್ತಾಳೆ' ಎಂದು ಬರೆದಿದ್ದಾರೆ. ಇನ್ನೊಬ್ಬರು ಬೈಯುತ್ತಾ, 'ಏನ್ ಮನುಷ್ಯ ಇವನು' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಅವಳು ವೈರಲ್ ಆಗಲು ಇದೆಲ್ಲಾ ಮಾಡುತ್ತಾಳೆ' ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

View post on Instagram

ನಟಿ ಪೂನಂ ಪಾಂಡೆ ಹಿನ್ನೆಲೆ: 33 ವರ್ಷದ ಪೂನಂ ಪಾಂಡೆ ಬಾಲಿವುಡ್ ನಟಿ ಮತ್ತು ಮಾಡೆಲ್. ಅವರು 2013 ರಲ್ಲಿ 'ನಶಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಹಿಂದಿಯಲ್ಲಿ 'ದಿ ಜರ್ನಿ ಆಫ್ ಕರ್ಮ', 'ಆ ಗಯಾ ಹೀರೋ', ಭೋಜ್‌ಪುರಿಯ 'ಅದಾಲತ್', ತೆಲುಗಿನ 'ಮಾಲಿನಿ ಅಂಡ್ ಕಂಪನಿ' ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಟಿವಿಯಲ್ಲಿ 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 4', 'ಸೂಪರ್‌ಕಾಪ್ಸ್ ವರ್ಸಸ್ ಸೂಪರ್ ವಿಲನ್ಸ್' ಮತ್ತು 'ಲಾಕ್‌ಅಪ್ ಇಂಡಿಯಾ' ನಂತಹ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಧಾನಿಯ ಹೊಗಳಿದ್ರೆ ಭಕ್ತರು, ಹೆಮ್ಮೆಯ ಹಿಂದೂ ಅಂದ್ರೆ ಅಂಧಭಕ್ತರು: ನಟಿ ಪ್ರೀತಿ ಜಿಂಟಾ ಹೇಳಿದ್ದೇನು ಕೇಳಿ..