ಬಾಲಿವುಡ್ ಬಿಗ್ ಬಿ, ಅಮಿತಾಭ್ ಬಚ್ಚನ್ ಅವರಿಗೆ ಇಂದು (ಅಕ್ಟೋಬರ್ 11) ಹುಟ್ಟುಹಬ್ಬದ ಸಂಭ್ರಮ.

ಬಾಲಿವುಡ್ ಬಿಗ್ ಬಿ, ಅಮಿತಾಭ್ ಬಚ್ಚನ್ ಅವರಿಗೆ ಇಂದು (ಅಕ್ಟೋಬರ್ 11) ಹುಟ್ಟುಹಬ್ಬದ ಸಂಭ್ರಮ. 80ನೇ ವರ್ಷಕ್ಕೆ ಕಾಲಿಟ್ಟಿರುವ ನಟ ಅಮಿತಾಭ್ ಅವರಿಗೆ ಅಭಿಮಾನಿಗಳು, ಚಿತ್ರರಂಗ ಹಾಗೂ ರಾಜಕೀಯ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಿಗ್ ಬಿ ಅವರಿಗೆ ದೇಶದ ಮೂಲೆ ಮೂಲೆಯಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ. 

ಅಮಿತಾಭ್ ಬಚ್ಚನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರೀತಿಯ ವಿಶ್ ಮಾಡಿದ್ದಾರೆ. ಭಾರತದ ಅತ್ಯಂತ ಗಮನಾರ್ಹ ಚಲನಚಿತ್ರ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ. 'ಅಮಿತಾಭ್ ಬಚ್ಚನ್ ಅವರಿಗೆ 80ನೇ ವರ್ಷದ ಜನ್ಮದಿನದ ಶುಭಾಶಯಗಳು. ಅವರು ಭಾರತದ ಅತ್ಯಂತ ಗಮನಾರ್ಹ ಚಲನಚಿತ್ರ ವ್ಯಕ್ತಿಗಳಲ್ಲಿ ಒಬ್ಬರು. ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ ಮತ್ತು ರಂಜಿಸಿದ್ದಾರೆ. ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ' ಎಂದು ಟ್ವೀಟ್ ಮಾಡಿದ್ದಾರೆ. 

ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಕೂಡ ಭಾವುಕ ವಿಶ್ ಮಾಡಿದ್ದಾರೆ. ಗ್ರ್ಯಾಂಡ್ ಓಲ್ಡ್ ಮ್ಯಾನ್ ಎಂದು ಬರೆದು ಬಾಲ್ಯದ ಫೋಟೋ ಶೇರ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಮುದ್ದು ಮಗಳು ಶ್ವೇತಾ ಅವರ ಕೈ ಹಿಡಿದು ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ನು ಮೊಮ್ಮಗಳು ನವ್ಯಾ ನವೇಲಿ ನಂದಾ ಕೂಡ ಪ್ರೀತಿಯ ವಿಶ್ ಮಾಡಿದ್ದಾರೆ. 

ಈ ಕಾರಣದಿಂದ 22 ಚಿತ್ರಗಳಲ್ಲಿ ಅಮಿತಾಬ್‌ಗೆ ವಿಜಯ್ ಎಂಬ ಹೆಸರಿಡಲಾಗಿದೆ

ಅಮಿತಾಭ್ ಬಚ್ಚನ್ ಸದ್ಯ ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಕೌನ್ ಬನೇಗಾ ಕರೋಡ್ ಪತಿ 14 ನಲ್ಲಿ ನಿರತರಾಗಿದ್ದಾರೆ. ಜೊತೆಗೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಬಿಗ್ ಬಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರಗಳ ಮೂಲಕ ್ಭಿಮಾನಿಗಳ ಮುಂದೆ ಬರ್ತಿದ್ದಾರೆ. ಭಾರಿ ಬೇಡಿಕೆಯ ನಟನಾಗಿ ಉಳಿದಿದ್ದಾರೆ. ಅಮಿತಾಭ್ ಜೊತೆ ಸಿನಿಮಾ ಮಾಡಲು ಅನೇಕ ನಿರ್ದೇಶಕರು, ನಿರ್ಮಾಪಕರು ಕಾಯುತ್ತಿದ್ದಾರೆ.

Scroll to load tweet…

ರೇಖಾ ಜೊತೆಯ ಅಮಿತಾಭ್ ಬಚ್ಚನ್ ಸಂಬಂಧದ ರಹಸ್ಯ ಬಯಲಾಗಿದ್ದು ಹೀಗೆ

ಬಿಗ್ ಕೊನೆಯದಾಗಿ ಗುಡ್ ಬೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.