ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗಾಗಿ ಸಹೋದರಿ ಶ್ವೇತಾ ಸಿಂಗ್ ಕೃತಿ ನಡೆಸಿದ ಗ್ಲೋಬಲ್ ಪ್ರೇಯರ್‌ನಲ್ಲಿ 101 ದೇಶದ ಜನರು ಭಾಗಿಯಾಗಿದ್ದಾರೆ. ತಮ್ಮ ಸಹೋದರನಿಗೆ ಸಿಕ್ಕಿದ ಬೆಂಬಲದಿಂದ ಶ್ವೇತಾ ಭಾವುಕರಾಗಿದ್ದಾರೆ.

ಗಣೇಶ ಚತುರ್ಥಿ ಸಂದರ್ಭ ಜಾಗತಿಕ ಪ್ರಾರ್ಥನೆ ನಡೆದಿತ್ತು. ಇದಕ್ಕು ಮೊದಲೇ ಶ್ವೇತಾ ಇನ್‌ಸ್ಟಾಗ್ರಾಂ ಮೂಲಕ ಎಲ್ಲರೂ ಇದರಲ್ಲಿ ಭಾಗವಹಿಸಿ ಬೆಂಬಲಿಸಬೇಕಾಗಿ ಕೇಳಿಕೊಂಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರೀ ಬೆಂಬಲ ವ್ಯಕ್ತವಾಗಿದೆ.

ಸುಶಾಂತ್ ಸಾವಿನ ಪ್ರಮುಖ ಸಾಕ್ಷಿ ಸಿದ್ಧಾರ್ಥ್ ಪಿಥನಿ ವಿಚಾರಣೆ

ಪ್ರೇಯರ್ ಫೋಟೋ ಪೋಸ್ಟ್ ಮಾಡಿದ ಶ್ವೇತಾ ತುಂಬಾ ಪಾಸಿಟಿವ್ ಫೀಲ್ ಅಗುತ್ತಿದೆ. 101 ದೇಶದ ಜನ ಭಾಗಿಯಾಗಿದ್ದಾರೆ. ಅವರು ಹಿಂದೂ, ಮುಸ್ಲೀಂ, ಕ್ರಶ್ಚಿಯನ್ ಯಾರೇ ಆಗಿರಲಿ. ಅವರೆಲ್ಲರೂ ಸುಶಾಂತ್‌ಗಾಗಿ ಗಾಯತ್ರಿ ಮಂತ್ರ ಜಪಿಸಿದ್ದಾರೆ ಎಂದು ಬರೆದಿದ್ದಾರೆ.

ಸುಶಾಂತ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಡಿಯೋ ಪೋಸ್ಟ್ ಮಾಡಿದ ಸುಶಾಂತ್ ಸಹೋದರಿ ಶ್ವೇತಾ, ಸಿಬಿಐ ತನಿಖೆ ಬೆಂಬಲಿಸುವಂತೆ ಕೇಳಿಕೊಂಡಿದ್ದರು.

ಹಲೋ, ನಾನು ಸುಶಾಂತ್ ಸಹೋದರಿ ಶ್ವೇತಾ. ಎಲ್ಲರೂ ಸಿಬಿಐ ತನಿಖೆಗೆ ಬೆಂಬಲ ಸೂಚಿಸಬೇಕು. ನಾವು ಸತ್ಯ ತಿಳಿಯಬೇಕಿದೆ. ಸುಶಾಂತ್‌ಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಾವ್ಯಾವತ್ತೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ನಮಗೆ ಸತ್ಯ ತಿಳಿಯುವ ಹಕ್ಕಿದೆ ಎಂದಿದ್ದಾರೆ. ಸುಶಾಂತ್‌ನ ಮಾಜಿ ಗೆಳತಿ ಅಂಕಿತಾ ಲೋಖಂಡೆಯೂ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿ ಸಿಬಿಐ ಫಾರ್ ಎಸ್‌ಎಸ್‌ಆರ್‌ ಎಂದು ಹೇಳಿದ್ದರು.