ಮಾಡೆಲ್‌ಗಳು, ನಟಿಯರು ಈಗೀಗ ಬ್ರಾ ಹಾಕ್ಕೊಳದೇ ಸಾರ್ವಜನಿಕವಾಗಿ ಓಡಾಡ್ತಿದ್ದಾರೆ. ಬ್ರಾ ಲೆಸ್‌ ಆಗಿ ಕಾಣಿಸಿಕೊಳ್ಳೋದು ಸದ್ಯದ ಟ್ರೆಂಡ್‌ ಆಗಿದೆ. ಆದರೆ ಅದಕ್ಕೊಂದು ದಿಟ್ಟತನವಂತೂ ಬೇಕೇ ಬೇಕು. ಹಾಗೆ ಎದೆಗಾರಿಕೆ ಪ್ರದರ್ಶಿಸಿದ ನಟಿಯರ ಬಗ್ಗೆ ಡೀಟೇಲ್ಸ್ ಇಲ್ಲಿದೆ. 

1. ಪಾಯಲ್ ರಜಪೂತ್ (Payal Rajaputh) 
ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಪಾಯಲ್ ರಜಪೂತ್ ಮೊದಲಿಂದಲೂ ತನ್ನ ಹಾಟ್ ಫೋಟೋ ಶೂಟ್‌ಗಳಿಂದ ಸುದ್ದಿಯಲ್ಲಿದ್ದವರು. ಕಳೆದ ವಾರವಷ್ಟೇ ಬ್ರಾಲೆಸ್ ಆಗಿ ಪ್ರಚೋದಕ ಭಂಗಿಯಲ್ಲಿ ಈ ನಟಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬಹಳ ಮಂದಿ ಈ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಟ್ರೋಲ್‌ಗಳ ಮೂಲಕ ಟೀಕೆಗೂ ಇದು ತುತ್ತಾಗಿತ್ತು. ಇದೀಗ ಪಾಯಲ್‌ ಸಿಟ್ಟಿನಲ್ಲಿ ಟ್ರೋಲಿಗರ ವಿರುದ್ಧ ಆವಾಜ್‌ ಹಾಕಿದ್ದಾರೆ. ನೀವು ಹೀಗೆಲ್ಲ ಕೆಟ್ಟದಾಗಿ ಕಮೆಂಟ್ ಮಾಡ್ತಾ, ಟ್ರೋಲ್ ಮಾಡ್ತಾ ಇದ್ರೆ ಅಮ್ಮ ಸಿನಿಮಾ ಫೀಲ್ಡ್ಅನ್ನೇ ಬಿಟ್ಟು ಬಿಡಿಸ್ತಾರಷ್ಟೇ. ಈಗ ನೀವು ಮಾಡಿರೋ ಘನ ಕಾರ್ಯದಿಂದ ಅಮ್ಮನ ಕೈಯಲ್ಲಿ ಸಾಕಷ್ಟು ಉಗಿಸಿಕೊಂಡಿದ್ದೀನಿ. ನಿಮ್ಮ ಕೀಳು ಮನಸ್ಥಿತಿಗೆ ನನ್ನ ಕೆರಿಯರ್ ಹಾಳು ಮಾಡಬೇಡಿ ಅಂತೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರೋಲ್ ಮಾಡುವವರು ಹೀನ ಮನಸ್ಸಿನವರು, ಅವರಿಂದಾಗಿ ನಮ್ಮಮ್ಮ ಚಿಂತೆ ಪಡುವಂತಾಗಿದೆ. ಆದರೆ ನಾನು ಇದಕ್ಕೆಲ್ಲ ಬಗ್ಗೋಳಲ್ಲ, ನಾನು ಬೇಕಾದಂತೆ ಬದುಕ್ತೀನಿ ಅಂದಿದ್ದಾರೆ. ತೆಲುಗಿನ ಬಹು ಬೇಡಿಕೆಯ ನಟಿಯಾಗಿರುವ ಪಾಯಲ್ ಆರ್ ಎಕ್ಸ್ 100, ಆರ್ ಡಿ ಎಕ್ಸ್ ಲವ್ ಮೊದಲಾದ ಸಿನಿಮಾಗಳಲ್ಲೂ ಹಾಟ್ ಲುಕ್ ಮೂಲಕ ಗಮನ ಸೆಳೆದಿದ್ದರು.

Samantha on divorce: ಸಾಯೋ ಮನಸ್ಥಿತಿಗೆ ತಲುಪಿದ್ದ ಸಮಂತಾ, ನಟಿ ಹೇಳಿದ್ದಿಷ್ಟು

2. ದೀಪಿಕಾ ಪಡುಕೋಣೆ (Deepika Padukone) 
ಮದುವೆ ಆದಕೂಡ್ಲೇ ನಟಿಯರು ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡರೆ ಅಕ್ಷಮ್ಯ ಅನ್ನೋ ಮನಸ್ಥಿತಿ ಕೆಲವರದ್ದು. ಹಾಗಿದ್ರೆ ಮದುವೆಗೂ ಮುಂಚೆ ನಮ್ಮನ್ನು ಎಷ್ಟೇ ಕೀಳಾಗಿ ನೋಡಿದ್ರೂ ಪರ್ವಾಗಿಲ್ವಾ ಅಂತ ಈ ಬಗ್ಗೆ ನೇರವಾಗಿ ಪ್ರಶ್ನೆ ಮಾಡಿರೋದು ದೀಪಿಕಾ ಪಡುಕೋಣೆ. ನಟಿಯರು, ಮಾಡೆಲ್‌ಗಳು ಟ್ರೆಂಡ್‌ನಲ್ಲಿರುವ ಉಡುಗೆ ಹಾಕಿಕೊಳ್ಳಲೇ ಬೇಕಾಗುತ್ತೆ. ಅದು ನಮ್ಮ ವೃತ್ತಿಯ ಅನಿವಾರ್ಯತೆ ಅನ್ನೋ ದೀಪಿಕಾ ಸದ್ಯ ಟ್ರೆಂಡ್‌ನಂತೆ ಬ್ರಾ ಲೆಸ್‌ ಆಗಿ ಪಬ್ಲಿಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆಗ ಫೋಟೋಗೆ ಫೋಸ್‌ ಕೊಡುವಾಗಲೂ ಅವರಲ್ಲಿ ಯಾವುದೇ ಅಳುಕಿರೋದಿಲ್ಲ. ಬ್ರಾಲೆಸ್‌ ಆಗಿಯೂ ತಾನು ಕಂಫರ್ಟ್ ಆಗಿದ್ದೀನಿ ಅಂತ ದೀಪಿಕಾ ಈ ಮೂಲಕ ತೋರಿಸಿಕೊಳ್ತಾರೆ. 

3. ಇಷಾ ಗುಪ್ತಾ (Isha guptha)
ಫೆಮಿನಾ ಮಿಸ್‌ ಇಂಡಿಯಾ ಕಾಂಟೆಸ್ಟ್‌ನ ವಿನ್ನರ್ ಇಶಾ ಗುಪ್ತಾ ಶುರುವಿನಿಂದಲೂ ತನ್ನ ಹಾಟ್‌ ಲುಕ್‌ನಿಂದ ಗಮನ ಸೆಳೆದವರು. ಬ್ರಾಲೆಸ್‌ ಆಗಿ ಕಾಣಿಸಿಕೊಳ್ಳೋದು ಅವರಿಗೆ ಒಂದು ಮ್ಯಾಟರೇ ಅಲ್ಲ. ಜನ್ನತ್‌ ೨ ಕ್ರೈಮ್ ಥ್ರಿಲ್ಲರ್‌ ಮೂಲಕ ಗುರುತಿಸಿಕೊಂಡಿರುವ ಈ ಚೆಲುವೆ ಕೆಲವು ಸಮಯದ ಹಿಂದೆ ಇನ್‌ಸ್ಟಾದಲ್ಲಿ ಟಾಪ್‌ ಲೆಸ್ ಫೋಟೋ ಹಾಕ್ಕೊಂಡಿದ್ದರು. ಅದು ಜೈಪುರ್‌ನ ಒಂದು ರೆಸಾರ್ಟ್ ನಲ್ಲಿ ನಡೆದ ಫೋಟೋ ಶೂಟ್. ಬರೀ ಬ್ಲೂ ಡೆನಿಮ್ ತೊಟ್ಟು ಉಳಿದಂತೆ ಬೆತ್ತಲಾಗಿರುವ ಹಿಂಭಾಗದ ಫೋಟೋವದು. ಲಕ್ಷಾಂತರ ಜನ ಫೋಟೋವನ್ನು ಮೆಚ್ಚಿದ್ದರು. ಈಕೆ ಕೆಲವು ವರ್ಷಗಳಿಂದಲೇ ಬ್ರಾ ಲೆಸ್‌ ಆಗಿ ಕಾಣಿಸಿಕೊಳ್ತಿದ್ದಾರೆ. ಆ ಬಗ್ಗೆ ಕಿಂಚಿತ್ ಸಂಕೋಚವೂ ಈಕೆಗಿಲ್ಲ. 

Jacqueline Fernandes in Trouble: ಅರೆಸ್ಟ್ ಆಗಲಿದ್ದಾರಾ ನಟಿ ? ನೆರವಿಗೆ ಬರ್ತಾರಾ ಸಲ್ಮಾನ್ ಖಾನ್ ?

4. ಜಾಕ್ವೆಲಿನ್ ಫೆರ್ನಾಂಡಿಸ್ (Jaquelin Fernades) 
ಕೆಲವು ತಿಂಗಳ ಹಿಂದೆ ಬ್ರಾ ಲೆಸ್ ಆಗಿ ನಾರ್ಮಲ್ ಟೀ ಶರ್ಟ್ ಧರಿಸಿ ಜಾಕ್ವೆಲಿನ್ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಪಾಪರಾಜಿಗಳು ಅಡ್ಡಗಟ್ಟಿ ಫೋಟೋ ಕ್ಲಿಕ್ಕಿಸುತ್ತಿದ್ದರೂ ಈ ಬ್ಯೂಟಿ ಕೇರ್ ಮಾಡಿಲ್ಲ. ತನ್ನ ಪಾಡಿಗೆ ತಾನು ನಡೆದು ಹೋಗ್ತಾ ಇದ್ರು. ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಕೊಂಚವೂ ಹೆದರದ ಈ ಶ್ರೀಲಂಕಾದ ಸುಂದರಿಗೆ ಸದ್ಯಕ್ಕೆ ಬಾಯ್‌ಫ್ರೆಂಡ್‌ ಸಲ್ಮಾನ್‌ ಖಾನ್ ಶ್ರೀರಕ್ಷೆ ಇದೆ. ಆದರೆ ಈಕೆಯ ಆಸ್ತಿ ಮೇಲೆ ಇಡಿ ಕಣ್ಣಿಟ್ಟಿರುವ ಕಾರಣ ದೇಶ ಬಿಟ್ಟು ಆಚೆಗೆಲ್ಲೂ ಹೋಗುವಂತಿಲ್ಲವಂತೆ. 

5. ಕಿಯಾರಾ ಅಡ್ವಾನಿ (Kiara Advani)
ಅರಳುಗಣ್ಣಿನ ಈ ಚೆಲುವೆ ಕ್ಯಾಲೆಂಡರ್‌ಗಾಗಿ ಫೋಟೋ ಶೂಟ್ ಮಾಡಿಸಿದಾಗ ಬ್ರಾಲೆಸ್‌ ಆಗಿ ಬಂದಿದ್ದರು. ಹಸಿರೆಲೆಯನ್ನು ತುಂಬಿದೆದೆಗೆ ಅಡ್ಡ ಹಿಡಿದು ಫೋಟೋಗೆ ಫೋಸ್ ಕೊಟ್ಟ ಈಕೆಯ ಮೈಮೇಲೆ ಬ್ರಾ ಬಿಡಿ, ಬೇರ್ಯಾವ ಬಟ್ಟೆಯೂ ಇರಲಿಲ್ಲ. ಹಾಗೆಂದು ಈ ಫೋಟೋ ಬೋಲ್ಡ್‌ನೆಸ್‌ನಿಂದ ಗಮನ ಸೆಳೆಯಿತೇ ಹೊರತು ಅಶ್ಲೀಲತೆಯ ಅಂಶ ಇರಲಿಲ್ಲ. 

ಬಾಲಿವುಡ್‌ನ ಮೊಸ್ಟ್ ಫೇಮಸ್‌ ನಟಿಯರು ಇವರು!