Asianet Suvarna News Asianet Suvarna News

ಎದೆಹಾಲಿಗಾಗಿ ಹಠ ಮಾಡಿದ್ದಕ್ಕೆ ನಾಲ್ಕು ದಿನದ ಶಿಶುವನ್ನು ಸಾಯಿಸಲು ಹೋಗಿದ್ದೆ! ನಟಿಯ ಶಾಕಿಂಗ್​ ಹೇಳಿಕೆ

ಎದೆಹಾಲಿಗಾಗಿ ಹಠ ಮಾಡಿದ್ದಕ್ಕೆ  ನಾಲ್ಕು ದಿನದ ಶಿಶುವನ್ನು ಸಾಯಿಸಲು ಹೋಗಿದ್ದೆ ಎನ್ನುತ್ತಲೇ ಹೀಗೇಕೆ ಆಗುತ್ತದೆ ಎಂದು ಪಾಕ್​ ನಟಿ ಹೇಳಿದ್ದಾರೆ. ಅಷ್ಟಕ್ಕೂ ಆಗುವುದೇನು? 
 

Pakistani actress Sarwat Gilani discusses severe postpartum depression Self care tips for new mothers suc
Author
First Published Jul 3, 2024, 4:16 PM IST

ನಾಲ್ಕು ದಿನಗಳ ಕಂದಮ್ಮ ಎದೆಹಾಲಿಗಾಗಿ ಹಠ ಮಾಡಿದಾಗ ಈ ನಟಿ ಸಿಟ್ಟಿನಿಂದ ಅದನ್ನು ಸಾಯಿಸಲು ಹೋಗಿದ್ದರಂತೆ! ಇಂಥದ್ದೊಂದು ಆಘಾತಕಾರಿ ವಿಷಯವನ್ನು ಬಹಿರಂಗಗೊಳಿಸಿದ್ದಾರೆ ಪಾಕಿಸ್ತಾನಿ ನಟಿ ಸರ್ವತ್ ಗಿಲಾನಿ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದು ಇದೀಗ ಭಾರಿ ವೈರಲ್​ ಆಗುತ್ತಿದ್ದು, ನಟಿಯ ಹೇಳಿಕೆಗೆ ಹಲವಾರು ಮಂದಿ ಪ್ರತಿಕ್ರಿಯೆ ತೋರುತ್ತಿದ್ದಾರೆ. ಅಷ್ಟಕ್ಕೂ ನಟಿ ಸರ್ವತ್​ ಅವರು ಪಾಕ್​ನ ಖ್ಯಾತ ನಟಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ 'ಜಾಯ್ಲ್ಯಾಂಡ್' ಚಲನಚಿತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಇದೀಗ ಮಗುವಿನ ಕುರಿತು ಶಾಕಿಂಗ್​ ಹೇಳಿಕೆಯೊಂದನ್ನು ಅವರು ನೀಡುವ ಮೂಲಕ ಹಲ್​ಚಲ್​ ಸೃಷ್ಟಿಸಿದ್ದಾರೆ.

ಅಷ್ಟಕ್ಕೂ ಹೀಗೇಕೆ ಆಯಿತು ಎಂಬ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಗರ್ಭಧಾರಣೆಯ ಸಂದರ್ಭದಲ್ಲಿ ಮತ್ತು ಪ್ರಸವ ನಂತರದಲ್ಲಿ ಕೆಲವು ಹೆಣ್ಣುಮಕ್ಕಳಿಗೆ ವಿಚಿತ್ರ ವಿಚಿತ್ರ ಸಮಸ್ಯೆಗಳು ಕಾಡಲು ಶುರುವಾಗುವುದು ಇದೆ. ಗರ್ಭ ಧರಿಸಿದ ಸಂದರ್ಭದಲ್ಲಿ ಇಡೀ ದೇಹದಲ್ಲಿ ಬದಲಾವಣೆ ಆಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಸಮಯದಲ್ಲಿ ಸಮಸ್ಯೆ ಕಾಡಬಹುದು. ಹಲವರಲ್ಲಿ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಇನ್ನು ಕೆಲವರು ಗರ್ಭಾವಸ್ಥೆಯಲ್ಲಿ ಸರಿಯಾಗಿದ್ದು, ಪ್ರಸವದ ಬಳಿಕ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬಹುದು. ಇದೇ ಕಾರಣಕ್ಕೆ ಪ್ರಸವ ಎನ್ನುವುದು ಹೆಣ್ಣಿಗೆ ಇನ್ನೊಂದು ಜನ್ಮ ಎನ್ನುವುದು. ಅದೇ ರೀತಿ ನಟಿ ಸರ್ವತ್ ಗಿಲಾನಿ ಅವರಿಗೂ ಆಗಿತ್ತಂತೆ.

ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು...

ಅದರ ಬಗ್ಗೆ ಈಗ ಅವರು ಹೇಳಿಕೊಂಡಿದ್ದಾರೆ.   ಗರ್ಭಿಣಿಯಾಗಿದ್ದ ಸಮಯದಲ್ಲಿ ತುಂಬಾ ಖುಷಿಯಾಗಿಯೇ ಇದ್ದೆ. ಪ್ರಸವದ ಸಮಯದಲ್ಲಿಯೂ ಸಮಸ್ಯೆಯಾಗಿರಲಿಲ್ಲ. ಆದರೆ ಆ ಬಳಿಕ ಅದೇನಾಯಿತೋ ಗೊತ್ತಿಲ್ಲ. ಆರೋಗ್ಯದಲ್ಲಿ ಏರುಪೇರಾಯಿತು. ಇದನ್ನು   ಪ್ರಸವಾನಂತರದ ಖಿನ್ನತೆ ಎನ್ನುತ್ತಾರೆ ಎನ್ನುವ ಮೂಲಕ ಇದರ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದಾರೆ ನಟಿ. ಪ್ರಸವದ ಬಳಿಕ ಖಿನ್ನತೆ ಏನು ಎಂದು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ. ಆದರೆ ಮಗು ಹುಟ್ಟಿದ ಬಳಿಕ ನನಗೆ ತೀವ್ರ ಸಮಸ್ಯೆ ಕಾಡಿತು. ಗಂಭೀರವಾದ ಶಸ್ತ್ರಚಿಕಿತ್ಸೆ ಬಳಿಕ ಮಗುವಿಗೆ ಜನ್ಮ ನೀಡಿದ್ದೆ. ಮಗಳನ್ನು ನನ್ನಿಂದ ಬೇರೆ ಇಡಲಾಗಿತ್ತು. ಮಗು ಹುಟ್ಟಿದ  ನಾಲ್ಕನೇ ದಿನಕ್ಕೆ ನನ್ನ ಬಳಿ ಕರೆದುಕೊಂಡು ಬರಲಾಯಿತು. ಆಗ ಮಗು ಎದೆಹಾಲಿಗೆ ಹಠ ಮಾಡಿದಾಗ ಅದನ್ನು ಸಾಯಿಸಲು ಹೋಗಿದ್ದೆ ಎಂದಿದ್ದಾರೆ.

ನಾಲ್ಕು ದಿನ ನಾನು ಮತ್ತು ಮಗು ಪ್ರತ್ಯೇಕವಾಗಿದ್ದುದರಿಂದ ಅದು ಇಬ್ಬರಿಗೂ ಕಷ್ಟವಾಗಿತ್ತು.  ನನಗೆ ಖಿನ್ನತೆ ಕಾಡತೊಡಗಿತ್ತು. ಅವಳು ಹಾಲು ಕೇಳಿದಾಗ ಕೊಲ್ಲಲು ಬಯಸಿದ್ದೆ. ಅದು ನನ್ನ ಬಳಿ ಬಂದಾಗಲೆಲ್ಲಾ ಇದೇ ರೀತಿಯ ಹಿಂಸೆ ಆಗುತ್ತಿತ್ತು. ನನ್ನ ಒತ್ತಡವನ್ನು ಕಡಿಮೆ ಮಾಡಲು ನಾನು ಮಗುವನ್ನು ಕೊಲ್ಲುವುದೇ ಒಳ್ಳೆಯದು ಎನ್ನಿಸಿತು. ಆ ಬಳಿಕ ಅದು ಪ್ರಸವಾನಂತರ ಖಿನ್ನತೆಯ ಸಮಸ್ಯೆ ಎಂದು ಅರಿವಾಯಿತು ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ಈ ಸಮಸ್ಯೆಯಿಂದ ಬಳಲುವ ಮಹಿಳೆಯರಿಗೆ ಕಿವಿಮಾತನ್ನೂ ಹೇಳಿದ್ದಾರೆ. ಕೆಲವರಿಗೆ ಈ ರೀತಿ ಆಗಬಹುದು. ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ.  ಈ ಭಾವನೆಗಳು ಶಾಶ್ವತವಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.  ಮಾನಸಿಕ ಸ್ಥಿಮಿತ ಇಲ್ಲಿ ಮುಖ್ಯವಾಗುತ್ತದೆ ಎಂದಿದ್ದಾರೆ. 

ಸೆಕ್ಸ್​ ಸೀನ್​ಗಳಿಗೆ ಮೂಡ್​ ಕ್ರಿಯೇಟ್​ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್‌ ವರ್ಮಾ ಓಪನ್ ಮಾತು

ಪ್ರಸವಾನಂತರದ ಖಿನ್ನತೆಯ ಬಗ್ಗೆ ಜಾಗೃತಿ ಮೂಡಿಸುವ ವೀಡಿಯೊವನ್ನು ಸರ್ವತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಬರೆದಿದ್ದಾರೆ, "ಪ್ರಸವಾನಂತರದ ಖಿನ್ನತೆಯು ನಿಜ, ಅದನ್ನು ನಿರ್ಲಕ್ಷಿಸಬೇಡಿ, ಅದರ ಬಗ್ಗೆ ಓದಿ, ಮಹಿಳೆಯರು, ಹೆಣ್ಣುಮಕ್ಕಳು, ಸಹೋದರಿಯರು ಮತ್ತು ಹೆಂಡತಿಯರ ಬಗ್ಗೆ ಸಹಾನುಭೂತಿ ಹೊಂದಿರಿ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಹೋರಾಟವನ್ನು ಶಕ್ತಿಯಾಗಿ ಪರಿವರ್ತಿಸ ಎಂದಿದ್ದಾರೆ.  ಅಂದಹಾಗೆ, ಸರ್ವತ್ ಗಿಲಾನಿ 2014 ರಲ್ಲಿ ನಟ ಮತ್ತು ಹೆಸರಾಂತ ಪ್ಲಾಸ್ಟಿಕ್ ಸರ್ಜನ್ ಫಹಾದ್ ಮಿರ್ಜಾ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ. ಅವರ ಹಿರಿಯ ಮಗ ರೋಹನ್ ಮಿರ್ಜಾ, 2015 ರಲ್ಲಿ ಜನಿಸಿದರು; ಅವರ ಕಿರಿಯ ಮಗ, ಅರಿಜ್ ಮುಹಮ್ಮದ್ ಮಿರ್ಜಾ, 2017 ರಲ್ಲಿ ಜನಿಸಿದರು; ಮತ್ತು ಅವರ ಮಗಳು, ಡಿಸೆಂಬರ್ 2023 ರಲ್ಲಿ ಜನಿಸಿದರು.

Latest Videos
Follow Us:
Download App:
  • android
  • ios