ಫಿಲ್ಮ್‌ಪೇರ್ OTT ಪ್ರಶಸ್ತಿ ಫುಲ್ ಲಿಸ್ಟ್, ದಿಲ್ಜಿತ್ ದೋಸಾಂಜ್‌ಗೆ ಉತ್ತಮ ನಟ, ಕರೀನಾ ಉತ್ತಮ ನಟಿ!

ಬಹುನಿರೀಕ್ಷಿತ ಒಟಿಟಿ ಪ್ರಶಸ್ತಿ ಪ್ರಕಟಗೊಂಡಿದೆ. ಮುಂಬೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗಿದೆ.  ಗಾಯಕ ಹಾಗೂ ನಟ ದಿಲ್ಜಿತ್ ದೋಲಾಂಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಕರೀನಾ ಕಪೂರ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಒಟಿಟಿ ಫಿಲ್ಮ್‌ಫೇರ್ ಅವಾರ್ಡ್ಸ್ ಫುಲ್ ಲಿಸ್ಟ್ ಇಲ್ಲಿದೆ.
 

OTT filmfare awards list 2024 Diljit Dosanjh bags best actor Kareena kapoor wins actress award ckm

ಮುಂಬೈ(ಡಿ.2) ಬಹುನಿರೀಕ್ಷಿತ 5ನೇ ಆವೃತ್ತಿ ಫಿಲ್ಮ್‌ಪೇರ್ ಒಟಿಟಿ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ಮುಂಬೈನಲ್ಲಿ ನಡೆದಿದೆ.ನಟ-ನಟಿಯರು, ನಿರ್ದೇಶಕರು ಸೇರಿದಂತೆ ಒಟಿಟಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು, ಸಿಬ್ಬಂದಿಗಳು  ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವೆಬ್ ಸೀರಿಸ್ ಹಾಗೂ ಸಿನಿಮಾ ಸೇರಿದಂತೆ ಒಟ್ಟು 39 ಕೆಟಗರಿಯಲ್ಲಿ ನಾಮಿನೇಶನ್ ಮಾಡಲಾಗಿತ್ತು. ಗಾಯಕ ಹಾಗೂ ನಟ ದಿಲ್ಜಿಜ್ ದೋಸಾಂಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಕರೀನಾ ಕಪೂರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಒಟಿಟಿ ಸಿನಿಮಾ ಕೆಟಗರಿಯಲ್ಲಿ ದಿಲ್ಜಿತ್ ದೋಸಾಂಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅಮರ್‌ಸಿಂಗ್ ಚಮ್ಕಿಲಾ ಚಿತ್ರಕ್ಕೆ ಈ ಪ್ರಶಸ್ತಿ ಪಡೆದಿದ್ದರೆ. ಜಾನೆ ಜಾನ್ ಚಿತ್ರದ ನಟನೆಗಾಗಿ ಕರೀನಾ ಕಪೂರ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಅಮರ್ ಸಿಂಗ್ ಚಮ್ಕಿಲಾ ಒಟಿಟಿ ಸಿನಿಮಾ ಉತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.   ಇದೇ ಚಿತ್ರ ನಿರ್ದೇಶಿಸಿದ ಇಮ್ತಿಯಾಜ್ ಅಲಿ ಅತ್ಯುತ್ತಮ ಒಟಿಟಿ ಸಿನಿಮಾ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಾಂತಾರಗೆ ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಬೆಸ್ಟ್ ನಟ; ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ!

ವೆಬ್ ಸೀರಿಸ್ ಕೆಟಗರಿಯಲ್ಲಿ  ದಿ ರೈಲ್ವೇ ಮೆನ್ ಅತ್ಯುತ್ತಮ ವೆಬ್ ಸೀರಿಸ್ ಚಿತ್ರ ಅನ್ನೋ ಪ್ರಶಸ್ತಿ ಪಡೆದುಕೊಂಡಿದೆ. ಕಾಲಾ ಪಾನಿ ವೆಬ್ ಸೀರಿಸಿ ನಿರ್ದೇಶಿಸಿದ ಸಮೀರ್ ಸಕ್ಸೆನಾ ಹಾಗೂ ಅಮಿತ್ ಗೋಲಾನಿ ಅತ್ಯುತ್ತಮ ವೆಬ್ ಸೀರಿಸ್ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ವೆಬ್ ಸೀರಿಸ್ ಕಾಮಿಡಿ ವಿಭಾಗದಲ್ಲಿ ರಾಜ್ ಕುಮಾರ್ ರಾವ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗನ್ಸ್ ಆ್ಯಂಡ್ ಗುಲಾಬ್ ಚಿತ್ರದ ಅಭಿನಯಕ್ಕೆ ರಾಜ್‌ಕುಮಾರ್ ರಾವ್ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ವೆಸ್ ಸೀರಿಸ್ ಡ್ರಾಮಾ ವಿಭಾಗದಲ್ಲಿ ಉತ್ತನ ನಟ ಪ್ರಶಸ್ತಿಯನ್ನು ಗಗನ್ ದೇವ್ ಅಯ್ಯರ್ ಪಡೆದಿದ್ದಾರೆ. ಸ್ಕಾಮ್ 2003 ದಿ ತೆಲಗಿ ಸ್ಟೋರಿ ಸೀರಿಸ್ ಅಭಿನಯಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಇನ್ನು ವೆಬ್ ಸೀರಿಸ್ ಅತ್ಯುತ್ತಮ ಕಾಮಿಡಿ ನಟಿ ಪ್ರಶಸ್ತಿಯನ್ನು ಗೀತಾಂಜಲಿ ಕುಲಕರ್ಣಿ ಪಡೆದಿದ್ದಾರೆ. ಗುಲ್ಲಕ್ ಸೀಸನ್ 4 ವೆಬ್ ಸೀರಿಸ್‌ ಅಭಿನಯಕ್ಕೆ ಈ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಅತ್ಯುತ್ತಮ ವೆಬ್ ಸೀರಿಸ್ ನಟಿ ಡ್ರಾಮಾ ವಿಭಾಗದಲ್ಲಿ  ಮನೀಶಾ ಕೋಯಿರಾಲಾ ಪಡೆದುಕೊಂಡಿದ್ದಾರೆ. ಹೀರಾಮಂಡಿ, ದಿ ಡೈಮಂಡ್ ಬಜಾರ್ ವೆಬ್ ಸೀರಿಸ್‌ ಅಭಿನಯಕ್ಕೆ ಈ ಪ್ರಶಸ್ತಿ ಪಡೆದಿದ್ದಾರೆ. 

ಪಂಚಾಯತ್ ಸೀಸನ್ 3 ವೆಬ್ ಸೀರಿಸ್‌ನಲ್ಲಿ ಪೋಷಕ ನಟ ಕಾಮಿಡಿ ಪಾತ್ರದಲ್ಲಿ ಮಿಂಚಿದ ಫೈಸಲ್ ಮಲಿಕ್ ವೆಬ್ ಸೀರಿಸ್ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಮಹಿಳಾ ಉತ್ತಮ ಪೋಷಕ ನಟ ಡ್ರಾಮ ವೆಬ್ ಸೀರಿಸ್ ಪ್ರಶಸ್ತಿಯನ್ನು ಆರ್ ಮಾಧನವನ್ ಪಡೆದುಕೊಂಡಿದ್ದಾರೆ. ದಿ ರೈಲ್ವೇ ಮೆನ್ ವೆಬ್ ಸೀರಿಸ್ ಅಭಿನಯಕ್ಕೆ ಆರ್ ಮಾಧವನ್ ಈ ಪ್ರಶಸ್ತಿ ಪಡೆದಿದ್ದಾರೆ.

ಒಟಿಟಿ ಸಿನಿಮಾ ವಿಭಾಗದಲ್ಲಿ ಪೋಷಕರ ನಟ ಪ್ರಶಸ್ತಿಯನ್ನು ಜೈದೀಪ್ ಅಹ್ಲವಾಟ್ ಪಡೆದಿದ್ದಾರೆ. ಮಹಾರಾಜ್ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನು ವಮಿಕಾ ಗಬ್ಬಿ ಪಡೆದಿದ್ದಾರೆ. ಕುಫಿಯಾ ಒಟಿಟಿ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಒಟಿಟಿ ಸಿನಿಮಾದ ಬೆಸ್ಟ್ ಡೈಲಾಗ್ ಪ್ರಶಸ್ತಿಯನ್ನು ಅಮರ್ ಸಿಂಗ್ ಚಮ್ಕಿಲಾ ಚಿತ್ರ ಡೈಲಾಗ್ ರೈಟರ್ಸ್ ಇಮ್ತಿಯಾಜ್ ಅಲಿ ಹಾಗೂ ಸಾಜಿದ್ ಆಲಿ ಪಡೆದಿದ್ದಾರೆ. 

ಒಟಿಟಿ ಸಿನಿಮಾ ಸ್ಕ್ರೀನ್ ಪ್ಲೇ ಪ್ರಶಸ್ತಿ ಅಮರ್ ಸಿಂಗ್ ಚಮ್ಕಿಲಾ ಚಿತ್ರ ಪಡೆದುಕೊಂಡಿದೆ. ಉತ್ತಮ ಕೊರಿಯೋಗ್ರಾಫರ್ ಪ್ರಶಸ್ತಿ ಕೂಡ ಅಮರ್ ಸಿಂಗ್ ಚಮ್ಕಿಲಾ ಚಿತ್ರದ ಸೈಲ್‌ವೆಸ್ಟರ್ ಫೊನ್ಸೆಕಾ ಪಡೆದಿದ್ದಾರೆ.  

Latest Videos
Follow Us:
Download App:
  • android
  • ios