Asianet Suvarna News Asianet Suvarna News

OSCAR ಪಡೆದದ್ದೇ ತಪ್ಪಾಗೋಯ್ತು: ಪ್ರಶಸ್ತಿ ಪಡೆದ ಭಾರತೀಯಳ ನೋವಿನ ಕಥೆ!

ಇಂದು ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆಯುತ್ತಲೇ ಇಡೀ ದೇಶ ಸಂಭ್ರಮಿಸುತ್ತಿದೆ. ಆದರೆ ಈ ಅವಾರ್ಡ್​ ಪಡೆದ ಮೊಟ್ಟಮೊದಲ ಮಹಿಳೆಯ ನೋವು ಮಾತ್ರ ಯಾರಿಗೂ ಬೇಡ. ಏನದು ಕಥೆ?
 

Oscar 2023 Bhanu Athiya first indian got this awards but its create lots of controversies have a look
Author
First Published Mar 13, 2023, 4:49 PM IST | Last Updated Mar 13, 2023, 4:49 PM IST

ಈ ಬಾರಿಯ ಆಸ್ಕರ್​ ಪ್ರಶಸ್ತಿ ಸಮಾರಂಭ ಭಾರತೀಯರ ಪಾಲಿಗೆ ಬಲು ಮಹತ್ವದ್ದಾಗಿದೆ. ಒಂದೆಡೆ ತೆಲುಗು ಚಿತ್ರ ಆರ್​ಆರ್​ಆರ್​ನ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದ್ದರೆ, ಇನ್ನೊಂದೆಡೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಆಸ್ಕರ್​ ವೇದಿಕೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು, ಭಾರತದ ಗೌರವ ಹೆಚ್ಚಿಸಿದ್ದಾರೆ. ಇದೀಗ ಇಡೀ ಚಿತ್ರರಂಗ ಇವರಿಬ್ಬರನ್ನೂ ಶ್ಲಾಘಿಸುತ್ತಿದೆ. ಆರ್​ಆರ್​ಆರ್​ ತಂಡವಂತೂ ಹೆಮ್ಮೆಯಿಂದ ಬೀಗುತ್ತಿದ್ದರೆ, ಭಾರತದ ಹೆಣ್ಣುಮಗಳೊಬ್ಬಳು ಆಸ್ಕರ್​ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಭಾರತವೂ ಬೀಗುತ್ತಿದೆ. ಇದು ಈಗಿನ ಸ್ಥಿತಿ. ಆದರೆ ಹಿಂದೊಮ್ಮೆ ಭಾರತೀಯ ಮಹಿಳೆಯೊಬ್ಬಳು ಆಸ್ಕರ್​ ಪ್ರಶಸ್ತಿ ಗೆದ್ದಾಗ ಆಕೆ ಅನುಭವಿಸಿದ್ದ ನೋವು ಅಷ್ಟಿಷ್ಟಲ್ಲ! ಹೌದು. ಇದು ನಿಜ. ಆಸ್ಕರ್​ನಂಥ ಪ್ರಶಸ್ತಿ ಬರುವುದು ಸಿನಿರಂಗದ ಪ್ರತಿಯೊಬ್ಬರ ಕನಸು. ಆ ಪ್ರಶಸ್ತಿ ಈಗಿನ ದಿನಗಳಲ್ಲಿ ಬಂದರೆ, ಇಡೀ ವಿಶ್ವವೇ ಅವರನ್ನು ಕೊಂಡಾಡುತ್ತದೆ. ಅದರಲ್ಲಿಯೂ ಮಹಿಳೆಯೊಬ್ಬಳಿಗೆ ಈ ಪ್ರಶಸ್ತಿ ದಕ್ಕಿದರಂತೂ ಆ ಹೆಣ್ಣುಮಗಳಿಗೆ ಅಭಿನಂದನೆಗಳ ಸುರಿಮಳೆಯೇ ಬರುತ್ತದೆ. ಆದರೆ ಇಲ್ಲಿ ಹೇಳಹೊರಟಿರುವ ಮಹಿಳೆ ಮಾತ್ರ ಆಸ್ಕರ್​ ಪ್ರಶಸ್ತಿ ಪಡೆದುದಕ್ಕೆ ಸಾಕಷ್ಟು ಟೀಕೆಗೆ ಒಳಗಾಗಬೇಕಾಯಿತು.

ಈಕೆಯ  ಹೆಸರು ಭಾನು ಆಥಿಯಾ (Bhanu Athiya). ವಸ್ತ್ರ ವಿನ್ಯಾಸಕಿ. 2020ರ ಅಕ್ಟೋಬರ್​ 16ರಂದು 91ನೇ ವಯಸ್ಸಿನಲ್ಲಿ ನಿಧನರಾದ ಭಾನು ಆಥೈವಾ, ಆಸ್ಕರ್​ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ. 1982 ರ ಚಲನಚಿತ್ರ ಗಾಂಧಿ ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಭಾನು ಅವರಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿತ್ತು. ಕೊಲ್ಹಾಪುರದಲ್ಲಿ ಜನಿಸಿದ ಭಾನು ಅಥೈಯಾ, ಗುರು ದತ್ ಅವರ 1956 ರ ಸೂಪರ್ ಹಿಟ್ ಸಿ.ಐ.ಡಿ. ಚಿತ್ರದೊಂದಿಗೆ ಬಾಲಿವುಡ್​ನಲ್ಲಿ  ಕಾಸ್ಟ್ಯೂಮ್ ಡಿಸೈನರ್ ಆಗಿ ವೃತ್ತಿಜೀವನವನ್ನು  ಪ್ರಾರಂಭಿಸಿದರು. ಜಾನ್ ಮೊಲ್ಲೊ ಅವರೊಂದಿಗೆ ರಿಚರ್ಡ್ ಅಟೆನ್‌ಬರೋ ಅವರ 'ಗಾಂಧಿ' ಚಿತ್ರದಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ (Costume Desiging) ಅಕಾಡೆಮಿ ಪ್ರಶಸ್ತಿ ಗೆದ್ದರು. ಐದು ದಶಕಗಳ ವೃತ್ತಿ ಜೀವನದಲ್ಲಿ ಭಾನು ಅವರು 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗುಲ್ಜಾರ್ ಅವರ ಲೆಕಿನ್ (1990) ಮತ್ತು ಅಶುತೋಷ್ ಗೋವಾರಿಕರ್ (2001) ನಿರ್ದೇಶಿಸಿದ ಲಗಾನ್ ಚಿತ್ರಕ್ಕಾಗಿ ಅವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ.

Natu Natu ಎನ್ನುತ್ತ ದೀಪಿಕಾ ಭಾವುಕ: ಸೋಷಿಯಲ್ ಮೀಡಿಯಾ ತುಂಬಾ ಹಾಡಿನದ್ದೇ ಗುಂಗು

1982ರ ಗಾಂಧಿ ಚಿತ್ರಕ್ಕಾಗಿ ಭಾನು ಅಥೈಯಾ 1983 ರಲ್ಲಿ ಆಸ್ಕರ್ ಪಡೆದರು. ಅವರು ಈ ಪ್ರಶಸ್ತಿಯನ್ನು ಬ್ರಿಟಿಷ್ ಡಿಸೈನರ್ ಜಾನ್ ಮಾಲೋ ಅವರೊಂದಿಗೆ ಹಂಚಿಕೊಂಡರು, ಆದಾಗ್ಯೂ, ಭಾನು ಸ್ವೀಕರಿಸಿದ ಆಸ್ಕರ್ ಬಗ್ಗೆ ಸಾಕಷ್ಟು ಟೀಕೆಗಳು ಶುರುವಾಗಿದ್ದವು.  ಗಾಂಧಿ (Gandhi) ಚಿತ್ರಕ್ಕಾಗಿ ಅತ್ಯುತ್ತಮ ವೇಷಭೂಷಣ ವಿನ್ಯಾಸಕ್ಕಾಗಿ ಭಾನು ಅಥೈಯಾ ಪ್ರಶಸ್ತಿಯನ್ನು ಪಡೆದಿದ್ದರು,  ಇಷ್ಟು ಮಾತ್ರವಲ್ಲದೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಸೇರಿದಂತೆ 8 ಆಸ್ಕರ್ ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿದೆ. ಭಾನು ಅಥೈಯಾ ಅವರಿಗೆ ಆಸ್ಕರ್ ಪ್ರಶಸ್ತಿ ನೀಡಿದಾಗ ಹಾಲಿವುಡ್‌ನಲ್ಲಿ ಅವರನ್ನು ತೀವ್ರವಾಗಿ ಟೀಕಿಸಿತ್ತು. ಅದಕ್ಕೆ ಕಾರಣ  ಭಾನು ಅವರ ವಸ್ತ್ರವಿನ್ಯಾಸದಲ್ಲಿ ಆಸ್ಕರ್‌ನಂತಹ ಪ್ರಶಸ್ತಿಯನ್ನು ನೀಡುವುದರಲ್ಲಿ ಏನು ವಿಶೇಷವಿದೆ ಎಂದು. ಇದಕ್ಕಾಗಿ ಅಗಾಧ ನೋವನ್ನು ಅನುಭವಿಸಿದ್ದರು ಭಾನು. ಹಾಲಿವುಡ್ ವಿಮರ್ಶಕರು ಈ ಪ್ರಶಸ್ತಿಗೆ ಅಕ್ಷರಶಃ ಧಿಕ್ಕಾರವನ್ನೇ ಹೇಳಿದ್ದರು. ನಂತರ ಭಾರತದಲ್ಲಿಯೂ ಕೆಲವರು ಇವರ ವಿರುದ್ಧ ಅಪಸ್ವರ ಎತ್ತಿದ್ದರು ಎನ್ನಲಾಗಿದೆ. 

2012 ರಲ್ಲಿ ಸಂದರ್ಶನವೊಂದರಲ್ಲಿ, ಭಾನು ಅಥೈಯಾ ಭಾರಿ ವಿವಾದದ ನಂತರ ತಮ್ಮ ಆಸ್ಕರ್ ಟ್ರೋಫಿಯನ್ನು ಹಿಂದಿರುಗಿಸುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಅಷ್ಟು ಅವರಿಗೆ ಅದು ಹಿಂಸೆ ಕೊಟ್ಟಿತ್ತು.  ತಾನು ಆಸ್ಕರ್ ಕಚೇರಿಗೆ ಹೋಗುವ ಮನಸ್ಸು ಮಾಡಿದ್ದೇನೆ ಅವರು ಹೇಳಿದ್ದರು. ತಮ್ಮ ಪ್ರಶಸ್ತಿ ಕಳುವಾಗಬಹುದು ಎಂಬ ಭಯವನ್ನೂ ವ್ಯಕ್ತಪಡಿಸಿದ್ದ ಅವರು, ನಂತರ  ತಮ್ಮ ಆಸ್ಕರ್ ಪ್ರಶಸ್ತಿಯನ್ನು  ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್​ನಲ್ಲಿ ಇಟ್ಟಿದ್ದರು. ಅಂದಹಾಗೆ, ಭಾನು ಅಥೈಯಾ ಅವರು ರೇಷ್ಮಾ ಔರ್ ಶೇರಾ, ಗಂಗಾ -ಜಮುನಾ (Ganga Jamuna), ವಕ್ತ್, ತೀಸ್ರಿ ಮಂಜಿಲ್, ಅನಾಮಿಕಾ, ಕರ್ಜ್, ಬ್ರಹ್ಮಚಾರಿ, ದಿ ಬರ್ನಿಂಗ್ ಟ್ರೈನ್, ಸತ್ಯಂ ಶಿವಂ ಸುಂದರಂ, ಗೈಡ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಚಾಂದಿನಿ, ಲಗಾನ್, ಸ್ವದೇಸ್, ಪ್ಯಾಸಾ ಮುಂತಾದ ಹಲವು ಚಿತ್ರಗಳಲ್ಲಿ ವಸ್ತ್ರ ವಿನ್ಯಾಸ. ಭಾನು ಈಗ ಈ ಲೋಕದಲ್ಲಿಲ್ಲ. 15 ಅಕ್ಟೋಬರ್ 2020 ರಂದು, 91 ನೇ ವಯಸ್ಸಿನಲ್ಲಿ, ಅವರು ಜಗತ್ತಿಗೆ ವಿದಾಯ ಹೇಳಿದರು.

Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್​?

Latest Videos
Follow Us:
Download App:
  • android
  • ios