ಸೆಲೆಬ್ರಿಟಿ ಮಕ್ಕಳ ಸ್ನೇಹಿತ ಓರಿ, ತಮ್ಮ ಸ್ಪರ್ಶದಿಂದ ಮಹಿಳೆಯೊಬ್ಬರು ಗರ್ಭಿಣಿಯಾದರು ಎಂದು ಹೇಳಿದ್ದಾರೆ. ಎಂಟು ವರ್ಷಗಳಿಂದ ಮಕ್ಕಳಿಲ್ಲದ ಮಹಿಳೆಗೆ ತಮ್ಮ ಸ್ಪರ್ಶದಿಂದ ಮೂರೇ ತಿಂಗಳಲ್ಲಿ ಫಲ ಸಿಕ್ಕಿತು ಎಂದು ಓರಿ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಓರಿ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುವುದು, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಫೋಟೋಗಳಿಗೆ ಪೋಸ್ ಕೊಡುವುದು ಅವರ ವೃತ್ತಿ.

ಸೆಲೆಬ್ರಿಟಿ ಮಕ್ಕಳ (Celebrity kids) ಬೆಸ್ಟ್ ಫ್ರೆಂಡ್ ಒರ್ಹಾನ್ ಅವತಾರ್ಮಾನಿ ಅಲಿಯಾಸ್ ಓರಿ (Orhan Avtarmani alias Ori). ಇವರು ಎಲ್ಲಿ ಮುಟ್ಟಿದ್ರೂ ಹೀರೋಯಿನ್ಸ್ ಸಹಿಸಿಕೊಳ್ತಾರೆ. ಅವರ ಒಂದು ಟಚ್ಗೆ ಲಕ್ಷಾಂತರ ರೂಪಾಯಿ ನೀಡೋಕೆ ಸಿದ್ಧರಿರ್ತಾರೆ. ಯಾವ್ದೇ ಪಾರ್ಟಿ ಇರ್ಲಿ ಅದಕ್ಕೆ ಓರಿ ವಿಶೇಷ ಅತಿಥಿಯಾಗಿ ಎಂಟ್ರಿ ಕೊಡ್ತಾರೆ. ಓರಿ ಟಚ್ ಮಾಡಿದ್ರೆ ಅದೃಷ್ಟ ಬದಲಾಗುತ್ತೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳ ಫೆವರೆಟ್ ಓರಿ. ಸದಾ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುವ ಓರಿ ಈಗ ಮತ್ತೊಂದು ಅಚ್ಚರಿ ವಿಷ್ಯ ಹೊರಗೆ ಹಾಕಿದ್ದಾರೆ. ಓರಿ ಈ ಮಾತಿನ ನಂತ್ರ ಅವ್ರ ಮನೆ ಮುಂದೆ ಸೆಲೆಬ್ರಿಟಿಗಳು ಮಾತ್ರವಲ್ಲ ಸಾಮಾನ್ಯರು ಕ್ಯೂ ನಿಲ್ಲೋ ಸಾಧ್ಯತೆ ಇದೆ. ಅಷ್ಟಕ್ಕೂ ಓರಿ ಹೇಳಿದ್ದೇನು ಅಂದ್ರಾ?

ಓರಿ ಒಂದೇ ಒಂದು ಟಚ್‌ ಗೆ ಮಹಿಳೆ ಗರ್ಭ ಧರಿಸಿದ್ದಾಳಂತೆ. ಎಬಿಸಿ ನ್ಯೂಸ್ ಜೊತೆ ಮಾತನಾಡಿದ ಓರಿ, ನಾನು ಒಬ್ಬರನ್ನು ಟಚ್ ಮಾಡಿದ್ದೆ. ಆತನ ಪತ್ನಿ ಎಂಟು ವರ್ಷಗಳ ನಂತ್ರ ಗರ್ಭ ಧರಿಸಿದ್ರು ಎಂದಿದ್ದಾರೆ. ಎಂಟು ವರ್ಷಗಳಿಂದ ಮಕ್ಕಳಾಗದ ಮಹಿಳೆಯ ಪತಿಯನ್ನು ಓರಿ ಟಚ್ ಮಾಡಿದ್ದಾರೆ. ಅವರ ಮಾಂತ್ರಿಕ ಶಕ್ತಿಯಿಂದ ಮೂರೇ ತಿಂಗಳಲ್ಲಿ ಮಹಿಳೆ ಗರ್ಭ ಧರಿಸಿದ್ದಾಳೆ. ಮೂರು ತಿಂಗಳ ನಂತ್ರ ವಾಪಸ್ ಬಂದ ಮಹಿಳೆ ಪತಿ ಈ ಖುಷಿ ವಿಷ್ಯವನ್ನು ಓರಿಗೆ ಹೇಳಿದ್ದಾರೆ, 

ಸಲ್ಮಾನ್ ಖಾನ್‌ಗಾಗಿ ಬರೆದ ಸಿನಿಮಾ ಕಥೆಗೆ ಅಲ್ಲು ಅರ್ಜುನ್ ಹೀರೋ ಮಾಡಿದ ಡೈರೆಕ್ಟರ್ ಅಟ್ಲೀ..!

aashii_singh ಹೆಸರಿನ ಇನ್ಸ್ಟಾ ಖಾತೆಯಲ್ಲಿ ಓರಿಯ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ಓರಿ, ಅನೇಕರು ನನ್ನನ್ನು ಮತ್ತೆ ಟಚ್ ಮಾಡುವಂತೆ ಕೇಳಿಕೊಂಡು ಬರ್ತಾರೆ. ನಾನು ಒಂದು ದಿನ ವ್ಯಕ್ತಿಯನ್ನು ಟಚ್ ಮಾಡಿದ್ದೆ. ಆತ ಮೂರು ತಿಂಗಳ ನಂತ್ರ ವಾಪಸ್ ಬಂದು, ನನ್ನ ಪತ್ನಿ ಗರ್ಭಿಣಿ ಎಂದ. ಎಂಟು ವರ್ಷದಿಂದ ಆಕೆಗೆ ಮಕ್ಕಳಾಗಿರಲಿಲ್ಲವಂತೆ. ನಾನು ಟಚ್ ಮಾಡ್ದೆ ಆಕೆ ಗರ್ಭಿಣಿಯಾದ್ಲು ಎಂದು ಓರಿ ಹೇಳಿದ್ದಾರೆ. ಇದು ಕಾಕತಾಳೀಯವಾಗಿರಬಹುದು ಅಥವಾ ಇಲ್ಲದಿರಬಹುದು, ಆದ್ರೆ ಆಕೆ ಗರ್ಭಿಣಿಯಾಗಿದ್ದು ಸತ್ಯ. ನಾನೆಲ್ಲೂ ನನ್ನನ್ನು ಮುಟ್ಟಿದ್ರೆ ಅದೃಷ್ಟ ಬರುತ್ತೆ, ಯಂಗ್‌ ಆಗಿ ಕಾಣ್ತೀರಿ, ಯಶಸ್ಸು ಸಿಗುತ್ತೆ ಎಂದಿಲ್ಲ. ಅದು ಜನರ ನಂಬಿಕೆ. ಅವರು ಬರ್ತಾರೆ, ಟಚ್‌ ಮಾಡುವಂತೆ ಕೇಳ್ತಾರೆ ಎಂದಿದ್ದಾರೆ. ಓರಿ ಈ ವಿಡಿಯೋ ವೈರಲ್ ಆಗಿದೆ. ಜನರು ಕಮೆಂಟ್ ಶುರು ಮಾಡಿದ್ದಾರೆ. ಓರಿ, ಹುರುಳಿಲ್ಲದೆ ಮಾತನಾಡ್ತಿದ್ದಾರೆ, ನನ್ನ ಟಚ್ನಿಂದ ಆಯ್ತು ಅನ್ನೋದು ಮೂರ್ಖತನ ಎಂದು ಜನರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಎಲ್ಲ ಬಾಬಾರನ್ನು ಓರಿ ಮೀರಿಸ್ತಾರೆ ಎಂದು ಕಾಲೆಳೆದಿದ್ದಾರೆ. ಟ್ರಾನ್ಸ್ಜೆಂಡರ್ ಗಳಿಗೆ ವಿಶೇಷ ಶಕ್ತಿ ಇದೆ. ಅವರು ಮಕ್ಕಳನ್ನು ಆಶೀರ್ವದಿಸುತ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಒಟ್ಟಿನಲ್ಲಿ ಓರಿ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗದ್ದಲ್ಲ ಸೃಷ್ಟಿಸಿದೆ.

ಭಾರತೀಯ ಸಿನಿಮಾದಲ್ಲಿ ಯಾವ ನಟನೂ ಮಾಡದ ಸಾಧನೆ ಮಾಡಿದ ಪ್ರದೀಪ್ ರಂಗನಾಥನ್!

ಸಿನಿಮಾ ಮಾಡಿಲ್ಲ, ಹಾಡು ಹೇಳೋದಿಲ್ಲ, ಕಷ್ಟಪಟ್ಟು ದುಡಿಯದೇ 10 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ್ದಾರೆ ಓರಿ. ಸೆಲೆಬ್ರಿಟಿಗಳ ಜೊತೆ ಫೋಟೋ ಫೋಸ್, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋದೇ ಓರಿ ಕೆಲಸ. ಒಂದೊಂದು ಕಾರ್ಯಕ್ರಮಕ್ಕೆ 8 -10 ಲಕ್ಷ ಪಡೆಯುವ ಓರಿ ಎಲ್ಲರಿಗೆ ಇಷ್ಟ. ಸೆಲ್ಫಿಗಾಗಿ ಜನರು ಮುಗಿ ಬೀಳ್ತಾರೆ. ಮುಂಬೈ ನಿವಾಸಿ ಓರಿ, ಶಾಲೆಯಿಂದ್ಲೂ ಹಣ ಮಾಡ್ಬೇಕು ಎನ್ನುವ ಆಸೆ ಹೊಂದಿದ್ದರು. ಅದೇಗ ಈಡೇರಿದೆ. ಶಾರುಕ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳು ಓರಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ತಾರೆ. ಅಂಬಾನಿ ಫ್ಯಾಮಿಲಿ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ರಾಧಿಕಾ ಜೊತೆ ಕ್ರಿಸ್ಮಸ್ ಆಚರಿಸಿದ್ದ ಓರಿ, ಅನಂತ್ ಅಂಬಾನಿ ಮದುವೆಯಲ್ಲಿಯೂ ಕಾಣಿಸಿಕೊಂಡಿದ್ದರು. ಫ್ಯಾಷನ್ ವಿಷ್ಯದಲ್ಲೂ ಓರಿ ಹಿಂದಿಲ್ಲ. ಅವರ ನಾನಾ ಡ್ರೆಸ್, ಚಪ್ಪಲಿ, ಸ್ಟೈಲ್ ಇಂಟರ್ನೆಟ್ನಲ್ಲಿ ಬಿಸಿ ಹೆಚ್ಚಿಸುತ್ತದೆ. 

View post on Instagram