ಮಾಜಿ ಪತ್ನಿ ಹುಟ್ಟುಹಬ್ಬಕ್ಕೆ ಗರ್ಲ್​ಫ್ರೆಂಡ್​ ಜೊತೆ ಹೃತಿಕ್​ ಪ್ರತ್ಯಕ್ಷ! ಹೊಟ್ಟೆ ಉರಿಸಿಕೊಂಡದ್ದು ಅವಳಾ, ಇವಳಾ ಕೇಳಿದ ಫ್ಯಾನ್

ಮಾಜಿ ಪತ್ನಿ ಸುಸ್ಸಾನೇ ಖಾನ್​ ಹುಟ್ಟುಹಬ್ಬಕ್ಕೆ ಗರ್ಲ್​ಫ್ರೆಂಡ್​ ಸಾಬಾ ಜೊತೆ ಬಂದ ಹೃತಿಕ್ ರೋಷನ್​: ನೆಟ್ಟಿಗರಿಂದ ಥಹರೇವಾರಿ ಪ್ರಶ್ನೆ .
 

On Sussanne Khans 49th Birthday Ex Husband Hrithik Roshan with GF Saba Azad suc

ಸಿನಿಮಾ ರಂಗದಲ್ಲಿ ಅಕ್ರಮ ಸಂಬಂಧ, ವಿಚ್ಛೇದನ, ಡೇಟಿಂಗ್​, ಮದುವೆಯಾಗಿರುವಾಗಲೇ ಇನ್ನೊಬ್ಬಳ ಜೊತೆ ಇರುವುದು ಎಲ್ಲವೂ ಮಾಮೂಲೇ. ತಾರಾ ಜೋಡಿಗಳು ಹಲವು ವರ್ಷ ದಾಂಪತ್ಯ ಜೀವನ ನಡೆಸಿರುವುದು ಬಹಳ ಕಡಿಮೆ ಎಂದೇ ಹೇಳಬಹುದು. ಆದರೂ ಒಂದು ಕುತೂಹಲದ ವಿಷಯವೆಂದರೆ, ಹಲವರು ವರ್ಷ ಡೇಟಿಂಗ್​ ಮಾಡುತ್ತಾ ಸಂಬಂಧದಲ್ಲಿ ಇರುವ ಈ ಜೋಡಿಗಳ ಮಧ್ಯೆ ಮದುವೆಯಾಗುತ್ತಿದ್ದಂತೆಯೇ ಬಿರುಕು ಮೂಡಿ ವಿಚ್ಛೇದನ ಪಡೆಯುವುದು ಮಾಮೂಲು. ಆದರೆ ಅದೇ ವೇಳೆ ವಿಚ್ಛೇದನ ಪಡೆದು ಇನ್ನೊಬ್ಬರ ಜೊತೆ ಸಂಬಂಧದಲ್ಲಿ ಇರುವಾಗಲೇ ಮಾಜಿ ಪತಿ-ಪತ್ನಿಯ ಮೇಲೆ ಪ್ರೀತಿ ಮೂಡುವುದು ಕೂಡ ಮಾಮೂಲು ಎನಿಸಿದೆ. ಮಲೈಕಾ ಅರೋರಾ, ಅರ್ಜುನ್​ ಕಪೂರ್​ ಜೊತೆ ಸಂಬಂಧದಲ್ಲಿದ್ದರೂ ಮಾಜಿ ಪತಿ ಅರ್ಬಾಜ್​ ಖಾನ್​ಗೆ ಹೀಗೆ ಮಾಡುವುದು ಇದೆ. ಆಮೀರ್​ ಖಾನ್​ ಮಗಳ ಮದುವೆಯಲ್ಲಿ ತಮ್ಮ ಇಬ್ಬರೂ ಮಾಜಿ ಪತ್ನಿಯರ ಮೇಲೆ ಪ್ರೀತಿಯನ್ನೇ ಹರಿಸಿದ್ದರು. ಹೀಗೆ ಹಲವು ಜೋಡಿಗಳಿದ್ದು, ಇದೀಗ ಈ ಪೈಕಿ ಹೃತಿಕ್​ ರೋಷನ್​ ಮತ್ತು  ಸುಸ್ಸಾನೇ ಖಾನ್​ ಸೇರಿದ್ದಾರೆ.

ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಆದರೆ ವಿಚಿತ್ರ ಎಂದರೆ ಡಿವೋರ್ಸ್​ ಆದ ಮೇಲೂ ಪಕ್ಕದಲ್ಲಿಯೇ ಗರ್ಲ್​ಫ್ರೆಂಡ್​ ಇದ್ದರೂ ಮಾಜಿ ಪತ್ನಿಯ ಮೇಲೆ ಹೃತಿಕ್​  ರೋಷನ್​ಗೆ ಪ್ರೀತಿ ಉಕ್ಕುವುದು ಇದೆ. ಇದಕ್ಕೆ ಇದಾಗಲೇ ಹಲವಾರು ಉದಾಹರಣೆಗಳು ಆಗಿವೆ. ಇದೀಗ ಸುಸ್ಸಾನೆ ಖಾನ್​ ಅವರ ಹುಟ್ಟುಹಬ್ಬಕ್ಕೆ ಗರ್ಲ್​ಫ್ರೆಂಡ್​ ಜೊತೆ ಹೃತಿಕ್​ ರೋಷನ್​ ಹೋಗಿದ್ದು, ಇದೀಗ ಭಾರಿ ವೈರಲ್​ ಆಗುತ್ತಿದೆ. ಮಾಜಿ ಪತ್ನಿಯ ಹೊಟ್ಟೆ ಉರಿಸಲು ಹೋಗಿದ್ದಾ, ಅಥ್ವಾ ಗರ್ಲ್​ಫ್ರೆಂಡ್​ಗೆ ಹೊಟ್ಟೆ ಉರಿಸಲಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ನಿನ್ನೆ ಅಂದ್ರೆ ಭಾನುವಾರ ಸುಸ್ಸಾನೇ ಅವರು 49ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಲವು ಸೆಲೆಬ್ರಿಟಿಗಳು ಬಂದಿದ್ದರು. ಹೃತಿಕ್​ ಮತ್ತು ಸಬಾ ಹೋಗಿ ವಿಷ್​ ಮಾಡಿದ್ದಾರೆ. 

ಟಬು ಮದ್ವೆಯಾಗದೇ ಇರೋದಕ್ಕೆ ಅಜಯ್​ ದೇವಗನ್​ ಕಾರಣನಾ? ಸಂದರ್ಶನದಲ್ಲಿ ಇಬ್ಬರೂ ಹೇಳಿದ್ದೇನು?

ಅಷ್ಟಕ್ಕೂ, ಇವರಿಬ್ಬರ ವಿಚಾರ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.  ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ತೆಗೆದುಕೊಂಡಿರೋ ನಟ,  ಅರ್ಜೆಂಟೀನಾದಲ್ಲಿ ಗರ್ಲ್​ಫ್ರೆಂಡ್​ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಕೆಲ ತಿಂಗಳ ಹಿಂದೆ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದರು. ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್​ ಎಂಜಾಯ್​ ಮಾಡುತ್ತಿದ್ದು, ಅವರ ಫೋಟೋ ವೈರಲ್​ ಆಗುತ್ತಿವೆ.
 
 ಕೆಲ ತಿಂಗಳ ಹಿಂದೆ, ಹೃತಿಕ್ ರೋಷನ್ ಅವರು ತಮ್ಮ  ಚಿತ್ರದ ಟ್ರೈಲರ್​ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಅಲ್ಲಿ ಅವರ ಮಾಜಿ ಪತ್ನಿ ಸುಸ್ಸಾನೇ ಖಾನ್ ಕೂಡ ಇದ್ದರು.  ಈ ವಿಡಿಯೋದಲ್ಲಿ ಹೃತಿಕ್ ರೋಷನ್ ಮತ್ತು ಸುಸ್ಸಾನೇ ಖಾನ್ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಸ್ಸಾನೇ ಬಂದದ್ದು ಏಕೆ  ಏಕೆ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತು. ಅದೂ ಅಲ್ಲದೇ,  ಹೃತಿಕ್ ರೋಷನ್ ಕಾರ್ಯಕ್ರಮಕ್ಕೆ ಬಂದ ತಕ್ಷಣ, ಅವರು ಸುಸ್ಸಾನೇ  ಖಾನ್ ಅವರನ್ನು ತಬ್ಬಿಕೊಂಡಿದ್ದರು.  ಇಬ್ಬರೂ ಪರಸ್ಪರ ಪ್ರೀತಿಯಿಂದ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.   ಸಿನಿಮಾ ತಾರೆಯರಿಗೆ ಡಿವೋರ್ಸ್​ ಆದ್ಮೇಲೆ  ಲವ್​ ಜಾಸ್ತಿಯಾಗೋದ್ಯಾಕೆ ಎಂದು ಹಲವರು ಪ್ರಶ್ನಿಸಿದ್ದರು. 

ಬೋಟಾಕ್ಸ್ ಸರ್ಜರಿಯಿಂದ ಆಲಿಯಾಗೆ ಪಾರ್ಶ್ವವಾಯು- ಮುಖ ಸೊಟ್ಟಗೆ? ನಟಿ ಹೇಳಿದ್ದೇನು?
 

Latest Videos
Follow Us:
Download App:
  • android
  • ios