Asianet Suvarna News Asianet Suvarna News

ತನ್ನನ್ನು ತಾನು ಮುದುಕ ಎಂದ ಸಲ್ಮಾನ್: ಈ ಸಿಟ್ಟಿಗೇನು ಕಾರಣ ?

  • ತನ್ನನ್ನು ತಾನು ಮುದುಕ ಎಂದು ಕರೆದ ಸಲ್ಮಾನ್ ಖಾನ್
  • ಬಾಲಿವುಡ್ ನಟ ಇಷ್ಟೊಂದು ಸಿಟ್ಟಾಗಿದ್ಯಾಕೆ ?
On Bigg Boss 15 Salman Khan calls out Afsana Malik for ageist comment against Shamita Shetty dpl
Author
Bangalore, First Published Oct 16, 2021, 4:41 PM IST
  • Facebook
  • Twitter
  • Whatsapp

ಬಿಗ್‌ಬಾಸ್(Biggboss) ಸೀಸನ್ 15 ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್(Salman Khan) ಇತ್ತೀಚೆಗೆ ವೇದಿಕೆಯಲ್ಲಿ ತಮ್ಮನ್ನು ತಾವು ಮುದುಕು ಎಂದು ಕರೆದಿದ್ದಾರೆ. ಸಿಕ್ಕಾಪಟ್ಟೆ ಸಿಟ್ಟಾಗಿದ್ದ ಸಲ್ಮಾನ್‌ಗೆ ಕೋಪ ಬರಿಸಿದ್ಯಾರು ? ನಡೆದಿದ್ದೇನು ?

ಬಿಗ್ ಬಾಸ್ 15 ಹೋಸ್ಟ್ ಸಲ್ಮಾನ್ ಖಾನ್ ಶನಿವಾರದ ವಾರಾಂತ್ಯದ ಎಪಿಸೋಡ್‌ನಲ್ಲಿ ಸ್ಪರ್ಧಿಗಳ ಜೊತೆ ಮಾತನಾಡಲಿದ್ದಾರೆ. ಈ ಬಾರಿ ಅವರ ಹಿಟ್ ಲಿಸ್ಟ್‌ನಲ್ಲಿ ಸ್ಪರ್ಧಿ ಅಫ್ಸಾನಾ ಖಾನ್ ಇದ್ದಾರೆ. ಅಫ್ಸಾನಾ ವಾರವಿಡೀ ಮನೆಯೊಳಗೆ ಅವಾಂತರವನ್ನು ಹೆಚ್ಚಿಸುತ್ತಾ, ದೈಹಿಕವಾಗಿಯೂ ಜಗಳವಾಡುತ್ತಾ, ಚಪ್ಪಲಿ ಎಸೆಯುತ್ತ, ಬಟ್ಟೆಗಳನ್ನು ಹರಿದು ಹಾಕುತ್ತಾ ಮತ್ತು ಶಮಿತಾ ಶೆಟ್ಟಿಯವರನ್ನು ವಯಸ್ಸಿಗಾಗಿ ಟೀಕಿಸುತ್ತಾ ಭಾರೀ ಸುದ್ದಿಯಾಗಿದ್ದರು.

Biggboss15: ವೇದಿಕೆಯಲ್ಲಿ ಸಲ್ಮಾನ್ ಜೊತೆ 'ಮನಿಕೆ ಮಗೆ ಹಿತೆ' ಸುಂದರಿ Yohani

ಸಲ್ಮಾನ್ ಅಫ್ಸಾನಾಳನ್ನು 'ಸೀಸನ್ ನ ಸೂಪರ್ ಸ್ಟಾರ್' ಎಂದು ಪರಿಚಯಿಸುವುದರೊಂದಿಗೆ ಕಾರ್ಯಕ್ರಮದ ಹೊಸ ಪ್ರೋಮೋ ಆರಂಭವಾಗುತ್ತದೆ. ನೀವು ಹೇಳಿದ್ದನ್ನೆಲ್ಲಾ ನಾನು ನಿಮಗೆ ಹೇಳುತ್ತೇನೆ. ಶಮಿತಾ ಮುದುಕಿ, ಮನೆಯಲ್ಲಿ ಕುಳಿತುಕೊಳ್ಳುವ ಸಮಯ. ಚೀಪ್. ಯಾರು ಚೀಪ್ ಎಂದು ನೀವು ನಿರ್ಧರಿಸುತ್ತೀರಾ? ಎಂದು ಸಲ್ಮಾನ್ ಪ್ರಶ್ನಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by ColorsTV (@colorstv)

ಅಫ್ಸಾನಾ ಸಲ್ಮಾನಾಗೆ ನೀವು ನನಗೆ ಹಿರಿಯರು ಎಂದು ಉತ್ತರಿಸಿದಳು. ಆದರೆ, ಸಲ್ಮಾನ್ ಅವಳ ಮಾತನ್ನು ಅರ್ಧಕ್ಕೆ ಕತ್ತರಿಸಿ ಅಲ್ಲಲ್ಲ. ನಾನು ಮುದುಕಎಂದಿದ್ದಾರೆ. ಅಫ್ಸಾನಾ ನಂತರ ಅವಳು ಸಿಟ್ಟಿನಲ್ಲಿ ತಿಳಿಯದೆ ಹೇಳಿದರು ಎಂದಾಗ ನೀವು ಸಿಟ್ಟು ಬಂದರೆ ಅನಿಸಿದ್ದೆಲ್ಲಾ ಕೇಳುತ್ತೀರಾ ಎಂದಿದ್ದಾರೆ. ನೀವು ಕೆಟ್ಟದಾಗಿ ಜಗಳ ಮಾಡುವುದಲ್ಲದೆ ದೈಹಿಕವಾಗಿಯೂ ಹಲ್ಲೆ ಮಾಡುತ್ತೀರಿ ಎಂದಿದ್ದಾರೆ ಸಲ್ಮಾನ್.

ಬಿಗ್ ಬಾಸ್ ಮಾಜಿ ಸ್ಪರ್ಧಿ ಗೌಹಾರ್ ಖಾನ್ ಕೂಡ ಶುಕ್ರವಾರ ಅಫ್ಸಾನಾ ಮತ್ತು ಶಮಿತಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜನರು ತಮ್ಮ ಆಲೋಚನಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆಯೇ? ಹುಡುಗರೇ ಜಾಗರೂಕರಾಗಿರಿ ಮತ್ತು ನೀವು ಅಕ್ಷರಶಃ ಅತ್ಯಂತ ಅಪಾಯಕಾರಿ ಕೆಲಸ ಮಾಡುತ್ತಿದ್ದೀರಿ ಎಂದಿದ್ದಾರೆ.

ಧಾರಾವಾಹಿಯಲ್ಲಿ, ಅಫ್ಸಾನಾ ಖಾನ್ ಕೂಡ ಅಕಾಶಾ ಸಿಂಗ್ ಜೊತೆ ಕೆಟ್ಟದಾಗಿ ಜಗಳವಾಡಿದ್ದಾರೆ. ಆಕೆಯ ಬಟ್ಟೆಗಳನ್ನು ಹರಿದು ಹಾಕಿದರು. ಆಕೆಯ ವರ್ತನೆಗೆ ಆಕಾಶ ವಿರೋಧಿಸಿದಾಗ, ಅಫ್ಸಾನಾ ಕ್ಷಮೆ ಕೇಳಲು ನಿರಾಕರಿಸಿದ್ದಾಳೆ.

Follow Us:
Download App:
  • android
  • ios