Asianet Suvarna News Asianet Suvarna News

ಹೊಸ ಮೈಲುಗಲ್ಲು ತಲುಪಿದ ದಿಲ್‌ಬರ್ ಸಾಂಗ್: ನೋರಾ ಖುಷ್

ಹೊಸ ದಾಖಲೆ ನಿರ್ಮಿಸಿದ ದಿಲ್‌ಬರ್ ಹಾಡು | ದಿಲ್‌ಬರ್ ಮೂಲಕ ಯೂಟ್ಯೂಬ್‌ನಲ್ಲಿ ಕೋಟಿಗೂ ಹೆಚ್ಚು ಹಿಟ್ಸ್ ಗಳಿಸಿದ ಆಫ್ರಿಯಾ, ಅರಬ್‌ನ ಮೊದಲ ಮಹಿಳಾ ಕಲಾವಿದೆ

Nora Fatehi is the first African Arab female to hit one billion on YouTube with Dilbar dpl
Author
Bangalore, First Published Mar 8, 2021, 10:58 PM IST

ಬಾಲಿವುಡ್ ನಟಿ, ಡ್ಯಾನ್ಸರ್ ನೋರಾ ಫತೇಹಿ ದಿಲ್ಬರ್ ಡ್ಯಾನ್ಸ್ ವಿಡಿಯೋಗೆ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಖುಷಿಯಲ್ಲಿದ್ದಾರೆ. ನಟಿ ಮುಂಬೈನ ಟಿ ಸಿರೀಸ್ ಆಫೀಸ್ನಲ್ಲಿ ಈ ಖುಷಿಯನ್ನು ಸಂಭ್ರಮಿಸಿದ್ದಾರೆ.

ಈ ಮೂಲಕ ನೋರಾ ಯೂಟ್ಯೂಬ್ನಲ್ಲಿ 1 ಬಿಲಿಯನ್ ವ್ಯೂಸ್ ಪಡೆದ ಮೊದಲ ಆಫ್ರಿಕನ್ ಅರಬ್ ಮಹಿಳಾ ಕಲಾವಿದೆಯಾಗಿ ಮೂಡಿಬಂದಿದ್ದಾರೆ. ಸಂಭ್ರಮಾಚರಣೆ ವಿಡಿಯೋ ಮತ್ತು ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

ದಿಲ್ಬರ್ ಹಾಡಿನ ಕುರಿತು:

ದಿಲ್ಬರ್ ವಿಡಿಯೋ ಸಾಂಗ್ನಲ್ಲಿ ನೋರಾ ಫತೇಹಿ ಪರ್ಫಾರ್ಮೆನ್ಸ್ ಎನ್ನಾ ದಾಖಲೆಗಳನ್ನು ಧೂಳಿಪಟ ಮಾಡಿದೆ. ಈ ಸಾಂಗ್ ರಿಲೀಸ್ ಆಗಿ ಬರೀ 24 ಗಂಟೆಯಲ್ಲಿ 21 ಮಿಲಿಯನ್ ವ್ಯೂಸ್ ದಾಟಿತ್ತು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆವಾಗ ಹಸಿರು ಸೀರೆಯಲ್ಲಿ ನೋರಾ...

ಇದು ಭಾರತದಲ್ಲಿ ಅತ್ಯಧಿಕ ರೆಸ್ಪಾನ್ಸ್ ಪಡೆದ ಮೊದಲ ಹಿಂದಿ ಸಾಂಗ್. ಈ ಹಾಡು ಸತ್ಯಮೇವ ಜಯತೆ 2018ರ ಸಿನಿಮಾದ ಸಾಂಗ್. ಬೆಲ್ಲಿ ಮೂವ್ಸ್ ಮೂಲಕ ಈ ಹಾಡಿನಲ್ಲಿ ಮೋಡಿ ಮಾಡಿದ್ದರು ನೋರಾ. ಈ ಹಾಡನ್ನು ತನಿಷ್ಕ್ ಬಗ್ಚಿ ಕಂಪೋಸ್ ಮಾಡಿದ್ದು, ನೇಹಾ ಕಕ್ಕರ್, ಅಸೀಸ್ ಕೌರ್ ಮತ್ತು ಧ್ವನಿ ಭಾನುಶಾಲಿ ಹಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Nora Fatehi (@norafatehi)

 
 
 
 
 
 
 
 
 
 
 
 
 
 
 

A post shared by Nora Fatehi (@norafatehi)

Follow Us:
Download App:
  • android
  • ios