ನಟಿ ನಿಕ್ಕಿ ಗರ್ಲಾನಿ ಆಗಾಗ ಪ್ರಾಣಿಗಳ ಕುರಿತ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಇದರ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಬಹಳಷ್ಟು ಸಲ ತಮ್ಮ ಪ್ರೀತಿಯ ಪೆಟ್ ಡಾಗ್ ಜೊತೆ ಫೋಟೋ ಶೇರ್ ಮಾಡುತ್ತಿರುತ್ತಾರೆ.

ನಟಿಯ ಫಿಲ್ಮ್ ಸೆಟ್‌ನಲ್ಲಿ ಕೋತಿಗಳ ಜೊತೆ ಫನ್ ಮಾಡ್ತಿರೋ ವಿಡಿಯೋವೊಂದನ್ನು ನಿಕ್ಕಿ ಶೇರ್ ಮಾಡಿಕೊಂಡಿದ್ದಾರೆ. ಸೆಟ್‌ಗೆ ಬಂದ ಅತಿಥಿಗಳನ್ನು ಮಾತನಾಡಿಸೋ, ಅವುಗಳ ಜೊತೆ ಫನ್ ಮಾಡೋ ವಿಡಿಯೋ ಅಪ್ ಮಾಡಿದ್ದಾರೆ.

ಜೈಲಿನಿಂದ ಹೊರ ಬಂದ ಸಂಜನಾ ಗಲ್ರಾನಿ ಈಗ ಎಲ್ಲಿದ್ದಾರೆ ನೋಡಿ?

ನಮ್ಮ ಬಿಸ್ಕತ್‌ಗಳನ್ನಷ್ಟೇ ನೋಡ್ಕೊಳ್ತೀವಿ. ಅಲ್ಲಿ ಇಲ್ಲಿ ಸುಮ್ನೆ ಏನೋ ಮಾತಾಡ್ತೀವಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ. ಕೋತಿಗಳಿಗೆ ಬಿಸ್ಕತ್ ಕೊಟ್ಟು ಕೈ ಕುಲುಕಿ, ಮಾತನಾಡಿ ಖುಷಿ ಖುಷಿಯಾಗಿ ಕೋತಿಗಳ ಕಂಪನಿ ಎಂಜಾಯ್ ಮಾಡಿದ್ದಾರೆ ನಿಕ್ಕಿ.

ಕೆಲವು ತಿಂಗಳ ಹಿಂದಷ್ಟೇ ಕೊರೋನಾ ಪಾಸಿಟಿವ್ ಬಂದಿದ್ದು, ನಟಿ ಸದ್ಯ ಆರಾಮವಾಗಿದ್ದಾರೆ. ಮಾಲಿವುಡ್‌ನಲ್ಲಿ ನಿಕ್ಕಿ ಗರ್ಲಾನಿ ಬ್ಯುಸಿ ಇದ್ದಾರೆ. ದಿಲೀಪ್ ಸೇರಿ ಹಲವು ನಟರೊಂದಿಗೆ ಈಕೆ ತೆರೆ ಹಂಚಿಕೊಂಡಿದ್ದಾರೆ.