ತೆಲಗು ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಡಿಸೆಂಬರ್ 9, 2020ರಲ್ಲಿ ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಬದುಕಿಗೆ  ಕಾಲಿಟ್ಟರು. ಪತಿ ಜೊತೆ ಮಾಲ್ಡೀವ್ಸ್‌, ಫ್ಯಾಮಿಲಿ ಜೊತೆ ಟೆಂಪಲ್‌ರನ್‌ನಲ್ಲಿ ಬ್ಯುಸಿಯಾಗಿರುವ ನಿಹಾರಿಕಾ, ಸೈಲೆಂಟ್‌ ಆಗಿ ಪ್ರಾಜೆಕ್ಟ್‌ವೊಂದಕ್ಕೆ ಸಹಿ ಮಾಡಿದ್ದಾರೆ.  ಇದಕ್ಕೆ ಪತಿ ಕೂಡ ಸಾಥ್ ಕೊಟ್ಟಿದ್ದಾರೆ.

ಬಾಗಿಲಿಗೆ ಆನೆ ತೋರಣ; ನಿಹಾರಿಕಾ ಮದುವೆ ವಿಶೇಷತೆಗಳೇನು ಗೊತ್ತಾ? 

ಹೌದು! ನಿಹಾರಿಕಾ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸರಳವಾಗಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಹಾರಿಕಾ ಮದುವೆ ನಂತರ ಮಾಡುತ್ತಿರುವ ಮೊದಲ ಪ್ರಾಜೆಕ್ಟ್ ಇದಾದ ಕಾರಣ ಚೈತನ್ಯ ಫುಲ್ ಸಪೋರ್ಟ್ ನೀಡಿದ್ದಾರೆ. 'ಓಕೆ ಕೆಲಸ ಆರಂಭಿಸೋಣ. ತುಂಬಾ ಸಂತೋಷವಾಗುತ್ತಿದೆ ಈ ಪ್ರಾಜೆಕ್ಟ್‌ಗೆ ಸಹಿ ಮಾಡಲು,' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ.

ವೆಬ್‌ ಸೀರಿಸ್‌ ಚಿತ್ರೀಕರಣ ಆರಂಭವಾಗಿದ್ದು, ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 'ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ವರ್ಲ್ಡ್‌ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೊಂದು ಹೊಸ ಕಾನ್ಸೆಪ್ಟ್. ಲೀಡ್‌ ರೋಲ್ ಯಾರಿಗೆ ಎಂದು ನಿರ್ಧರಿಸುವಾಗ ನನಗೆ ಮೊದಲು ಜ್ಞಾಪಕ ಬಂದಿದ್ದು ನಿಹಾರಿಕಾ. ಕಥೆ ಹಿಡಿದು ಹೋದೆ, ಆಕೆ ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡರು,' ಎಂದು ನಿರ್ದೇಶಕಿ ಕಮ್ ನಿರ್ಮಾಪಕಿಯಾಗಿರುವ ಭಾನು ಸೀರಿಸ್‌  ಹೇಳಿದ್ದಾರೆ.

ನಿಹಾರಿಕಾ- ಚೈತನ್ಯ ಮದುವೆ ಫೋಟೋ; ಹೇಗಿತ್ತು 'ಮೆಗಾ' ಸಂಭ್ರಮ? 

ನಿಹಾರಿಕಾ ಇಷ್ಟು ಬೇಗ ಪರ್ಸನಲ್‌ ಲೈಫ್‌ನಿಂದ ಪ್ರೊಫೆಷನ್ ಬಗ್ಗೆ ಗಮನ ಹರಿಸಿರುವುದಕ್ಕೆ ಹಾಗೂ ಮತ್ತೆ ನಟಿಯಾಗಿ ಕಮ್‌ಬ್ಯಾಕ್ ಮಾಡಿರುವುದಕ್ಕೆ ಅಭಿಮಾನಿಗಳು ಕಮೆಂಟ್‌ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.