ಅತ್ತೆ ಜೊತೆಗೇ ಆಲಿಯಾ ಭಟ್ ಕೆಲಸ ಅತ್ತೆ ಸೊಸೆಯ ಕೆಲಸ ಹೇಗಿದೆ ನೋಡಿ

ಬಾಲಿವುಡ್ ಕ್ಯೂಟ್ ಜೋಡಿ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ ವಿವಾಹವಾಗಲಿದ್ದಾರೆ. ಈ ನಡುವೆ ಅವರ ಭವ್ಯ ಬಂಗಲೆಯ ಕೆಲಸವೊಂದು ನಡೆಯುತ್ತಿದೆ. ಆಗಾಗ ಆಲಿಯಾ ಅಲ್ಲಿಗೆ ಬಂದು ಕೆಲಸವನ್ನು ಪರಿಶೀಲಿಸಿ ಹೋಗ್ತಾರೆ. ಈ ಬಾರಿ ಭಾವಿ ಅತ್ತೆ ನೀತೂ ಕಪೂರ್ ಜೊತೆಗೆ ಕೆಲಸವನ್ನು ವೀಕ್ಷಿಸಿದ್ದಾರೆ. ಅತ್ತೆ-ಸೊಸೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಲಿಯಾ ಭಟ್ ಮತ್ತು ನೀತು ಕಪೂರ್ ಬುಧವಾರ ಮುಂಬೈನ ಬಾಂದ್ರಾದಲ್ಲಿರುವ ಕೃಷ್ಣ ರಾಜ್ ಬಂಗಲೆಯ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಬಂಗಲೆ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸುತ್ತಿರುವುದು ಕಂಡುಬಂದಿದೆ.

ಫೆಬ್ರವರಿಯಲ್ಲೂ, ಆಲಿಯಾ ಭಟ್ ರಣಬೀರ್ ಕಪೂರ್ ಜೊತೆ ಬಾಂದ್ರಾದಲ್ಲಿನ ನಿರ್ಮಾಣ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದರು. ಬಂಗಲೆ ರಣಬೀರ್ ಅವರ ಹೊಸ ನಿವಾಸವಾಗಲಿದೆ. ಈ ಮನೆ ಕಪೂರ್‌ಗಳಿಗೆ ಹಲವು ವಿಧಗಳಲ್ಲಿ ವಿಶೇಷವಾಗಿದೆ. ಏಕೆಂದರೆ ರಿಷಿ ಕಪೂರ್ ನಿಧನರಾಗುವ ಮುನ್ನ, ಹಿರಿಯ ನಟ ಆಗಾಗ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸುತ್ತಿದ್ದರು.

ಡೈಲಿ ಸ್ಕಿನ್ ಕೇರ್ ರೊಟೀನ್ ತಿಳಿಸಿದ ಆಲಿಯಾ ಭಟ್

ರಣಬೀರ್ ಮತ್ತು ಆಲಿಯಾ ಅವರು ವಿವಾಹವಾದ ನಂತರ ಕೃಷ್ಣ ರಾಜ್ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ತಿಂಗಳ ಹಿಂದೆ ರಣಬೀರ್ ತನ್ನ ಮದುವೆಯ ಯೋಜನೆಗಳ ಬಗ್ಗೆ ಮಾತನಾಡಿದಾಗ ಏನನ್ನಾದರೂ ಹೇಳುವ ಮೂಲಕ ನಾನು ಅದನ್ನು ಅಪಹಾಸ್ಯ ಮಾಡಲು ಬಯಸುವುದಿಲ್ಲ. ನನ್ನ ಜೀವನದಲ್ಲಿ ಬಹಳ ಬೇಗನೆ ಆ ಗುರಿಯನ್ನು ಗುರುತಿಸಲು ನಾನು ಬಯಸುತ್ತೇನೆ ಎಂದು ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರ ಸಂದರ್ಶನದಲ್ಲಿ ಹೇಳಿದ್ದರು.

View post on Instagram

ಜುಲೈನಲ್ಲಿ ರಣಬೀರ್ ಸಹೋದರಿ ರಿಧಿಮಾ ಕಪೂರ್ ಸಹಾನಿ ಕೂಡ ತನ್ನ ಸಹೋದರನ ವಿವಾಹದ ಬಗ್ಗೆ ಮತ್ತು ಆಕೆಯ ತಾಯಿ ರಣಬೀರ್ ಪತ್ನಿಯನ್ನು ರಾಣಿಯಂತೆ ಹೇಗೆ ನೋಡಿಕೊಳ್ಳುತ್ತಾರೆ ಎಂದು ಮಾತನಾಡಿದ್ದರು. ಸಂದರ್ಶನವೊಂದರಲ್ಲಿ, ರಿಧಿಮಾ ಅಮ್ಮ ಒಂದು ಫ್ಯಾಬ್ ಅತ್ತೆಯಾಗಲಿದ್ರೆದಾರೆ. ಸಂಪೂರ್ಣವಾಗಿ ಕೂಲ್. ಅವಳು ತನ್ನ ಸೊಸೆಗೆ ಎಲ್ಲವನ್ನೂ ನೀಡುತ್ತಾಳೆ. ಏನನ್ನೂ ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.