ವಾರದ ಹಿಂದೆಯಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ವಿಚಾರವಾಗಿ ವಿಚಾರಣೆ ಮಾಡಿದ್ರು. ಇದೀಗ ಟನಿ ದೀಪಿಕಾಳ ವಿಚಾರಣೆ ಮಾಡಿದ ಎನ್‌ಸಿಬಿ ಅಧಿಕಾರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ

ಎನ್‌ಸಿಬಿ ಉಪ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಡ್ರಗ್ಸ್ ವಿಚಾರವಾಗಿ ವಿಚಾರಣೆ ಮಾಡಿದ ಎನ್‌ಸಿಬಿ ದೀಪಿಕಾ ಪಡುಕೋಣೆಯನ್ನು ವಿಚಾರಣೆ ಮಾಡಿತ್ತು.

ಕೊರೋನಾ ಸಂಕಷ್ಟ: ಬಡ ಹೆಣ್ಮಕ್ಕಳ ಶಿಕ್ಷಣ ಖರ್ಚು ನೋಡ್ಕೊಳ್ತಿದ್ದಾರೆ ನಟಿ ಅಮೈರಾ

ವಾಟ್ಸಾಪ್ ಚಾಟ್‌ ಆಧಾರದಲ್ಲಿ ದೀಪಿಕಾ ಪಡುಕೋಣೆಯ ವಿಚಾರಣೆ ಮಾಡಿದ್ದು, ಕೆಪಿಎಸ್ ಮಲ್ಹೋತ್ರಾ ಅವರೇ ನಟಿಯ ವಿಚಾರಣೆ ಮಾಡಿದ್ದರು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್‌ನಲ್ಲಿ ಮುಂಬೈನ ಬಾಂದ್ರಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ನಂತರದಲ್ಲಿ ಡ್ರಗ್ಸ್ ವಿಚಾರವಾಗಿ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ನಂತರ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್‌ನನ್ನು ವಿಚಾರಣೆ ಮಾಡಲಾಗಿತ್ತು.

ಬಾಲಿವುಡ್‌ನಲ್ಲಿ ಡ್ರಗ್ಸ್‌ ಸಮಸ್ಯೆ ಇರೋದು ನಿಜ: ಅಕ್ಷಯ್

ವಿಚಾರಣೆ ಸಂದರ್ಭ ದೀಪಿಕಾ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದೂ ಹೇಳಿದ್ದರು. ಹಾಗೆಯೇ ಮಾಲ್ ಎಂದು ಸಿಗರೇಟ್‌ನ್ನು ಹೇಳಿದ್ದು ಎಂದು ವಾಟ್ಸಾಪ್ ಚಾಟ್ ಬಗ್ಗೆ ಸ್ಪಷ್ಟನೆ ನೀಡಿದ್ದರು.