ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಮತ್ತು ಬಾಲಿವುಡ್‌ ಡ್ರಗ್‌ ಸಮಸ್ಯೆ ಬಗ್ಗೆ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿರುವ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌

ನವದೆಹಲಿ: ಮಾದಕ ವಸ್ತು ಸೇವನೆ ಎಲ್ಲ ಕ್ಷೇತ್ರಗಳಂತೆ ಸಿನಿಮಾ ಜಗತ್ತಿನ ದೊಡ್ಡ ಸಮಸ್ಯೆ. ಹಾಗಂತ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ.

ಹ್ಯಾಪಿ ಬರ್ತ್‌ಡೇ ನಿತಾರಾ: ಮಗಳನ್ನು ಮುರಕಲು ಗುಡಿಸಲಿಗೆ ಕರೆದೊಯ್ತಾರೆ ಅಕ್ಷಯ್..! 

ಈ ಬಗ್ಗೆ ಟ್ವೀಟರ್‌ನಲ್ಲಿ 4 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿರುವ ಅಕ್ಷಯ್‌ ಕುಮಾರ್‌. ಬಾಲಿವುಡ್‌ನ ಸುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. 

Scroll to load tweet…

‘ಇದು ಕೇವಲ ಸಿನಿಮಾ ಇಂಡಸ್ಟ್ರಿ ಅಲ್ಲ, ಭಾರತದ ಸಂಸ್ಕೃತಿ, ಮೌಲ್ಯಗಳನ್ನು ಜಗತ್ತಿನ ಮೂಲೆಮೂಲೆಗೂ ತಲುಪಿಸುವ ಮಾಧ್ಯಮ. ಸಿನಿಮಾ ಈ ದೇಶದ ಜನರ ಭಾವನೆ. ಆದರೆ ಸುಶಾಂತ್‌ ಸಿಂಗ್‌ ಹಠಾತ್‌ ಸಾವಿನ ಬಳಿಕ ಸಿನಿಮಾ ಜಗತ್ತಿನ ಹಲವು ನೋವಿನ ವಿಷಯಗಳು ಬಹಿರಂಗವಾಗುತ್ತಿವೆ. ಡ್ರಗ್ಸ್‌ ಪ್ರಕರಣ ಬಯಲಿಗೆ ಬಂದಿದೆ. ನಿಜಕ್ಕೂ ಡ್ರಗ್ಸ್‌ ಒಂದು ಸಮಸ್ಯೆ. ಹಾಗಂತ ಬಾಲಿವುಡ್‌ನ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದಲ್ಲ. ಡ್ರಗ್ಸ್‌ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಏನೇನು ಕ್ರಮ ಕೈಗೊಳ್ಳಬಹುದೋ ತೆಗೆದುಕೊಳ್ಳಲಿ. ಈ ತನಿಖೆಗೆ ಬಾಲಿವುಡ್‌ನ ಎಲ್ಲರೂ ಸಹಕರಿಸಲಿ’ ಎಂದು ಹೇಳಿದ್ದಾರೆ.

"