ನಯನತಾರಾ ಅವರ ವೈಯಕ್ತಿಕ ಜೀವನವು ಯಾವಾಗಲೂ ಫ್ಯಾನ್ಸ್‌ಗೆ ಇಂಟ್ರೆಸ್ಟಿಂಗ್ ವಿಚಾರ. ನಯನ್ ಮತ್ತು ಆಕೆಯ ಗೆಳೆಯ-ನಿರ್ದೇಶಕ ವಿಘ್ನೇಶ್ ಶಿವನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.

ವಿಘ್ನೇಶ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ ಅವರ ಚಿತ್ರದಲ್ಲಿ ನಯನತಾರಾ ತನ್ನ ಎಡಗೈಗೆ ಉಂಗುರವನ್ನು ಧರಿಸಿರುವುದು ಇದಕ್ಕೆ ಕಾರಣ.

ನೆಟ್ರಿಕಣ್‌ನಲ್ಲಿ ನಯನತಾರಾ ನೋ ಮೇಕಪ್ ಲುಕ್‌ಗೆ ಫ್ಯಾನ್ಸ್ ಫಿದಾ...

ಅವರು, “ವಿರಾಲೋಡು ಉಯಿರ್ ಕೂಡಾ ಕೊರ್ತು…” (‘ಹೃದಯಗಳು ಬೆರಳುಗಳಿಂದ ಕೈ ಸೇರುತ್ತವೆ’ )ಎಂದು ಕ್ಯಾಪ್ಶನ್ ಕೊಡಲಾಗಿದೆ. ವಿಘ್ನೇಶ್ ಅವರ ಎದೆಯ ಮೇಲೆ ಉಂಗುರ ಧರಿಸಿರುವ ನಯನತಾರಾ ಅವರ ಈ ಫೊಟೋ ವೈರಲ್ ಆಗುತ್ತಿದೆ.

ನೆಟ್ಟಿಗರು ಅವರಿಬ್ಬರೂ ನಿಜವಾಗಿಯೂ ನಿಶ್ಚಿತಾರ್ಥವಾಗಿದ್ದಾರೆಯೇ ಅಥವಾ ಅದು ಕೇವಲ ಒಂದು ಫೋಟೋನಾ ಎಂದು ತಿಳಿಯುವ ಕುತೂಹಲದಲ್ಲಿದ್ದಾರೆ.

ನಯನತಾರಾ ಅಭಿನಯದ ಕೊಳಮಾವು ಕೋಕಿಲ ರಿಮೇಕ್..! ಹಿಂದಿಯಲ್ಲಿ ಜಾಹ್ನವಿ

ಫ್ಯಾನ್ಸ್ ಅಂತೂ ನಿಶ್ಚಿತಾರ್ಥದ ಬಗ್ಗೆ ನಯನ್ ಅಥವಾ ವಿಘ್ನೇಶ್ ಅವರ ಯಾವುದೇ ಹೇಳಿಕೆ ಇಲ್ಲದೆಯೇ ಕಾಮೆಂಟ್ ಮತ್ತು ಶುಭಾಶಯಗಳು ಹೇಲುತ್ತಿದ್ದಾರೆ.

ವಿಘ್ನೇಶ್ ಅವರು ‘ಕಾಥುವಾಕುಲ ರೆಂಡು ಕಾದಲ್’ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ನಯನ್, ವಿಜಯ್ ಸೇತುಪತಿ ಮತ್ತು ಸಮಂತಾ ಅಕ್ಕಿನೇನಿ ನಟಿಸಿದ್ದಾರೆ.