ಕೊರೋನಾ ಲಸಿಕೆ ಪಡೆದ ಕಾಲಿವುಡ್ ಜೋಡಿ ಮೊದಲ ಡೋಸ್ ಪಡೆದ ನಯನತಾರಾ - ವಿಘ್ನೇಶ್ ಶಿವನ್

ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ಅವರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಅವರು ಇತ್ತೀಚೆಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಚಲನಚಿತ್ರ ತಾರೆಯರು COVID19 ಲಸಿಕೆ ಬಗ್ಗೆ ಲಸಿಕೆ ಪಡೆಯುವ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ವಿಘ್ನೇಶ್ ಶಿವನ್ ಅವರು ಮತ್ತು ನಯನತಾರಾ ಲಸಿಕೆ ಪಡೆಯುವ ಫೋಟೋಗಳನ್ನು ನಿರ್ದೇಶಕ ಇನ್‌ಸ್ಟಾಗ್ರಾಂ ಮೂಲಕ ಶೇರ್ ಮಾಡಿದ್ದಾರೆ. ದಯವಿಟ್ಟು ಲಸಿಕೆ ಪಡೆಯಿರಿ ಸುರಕ್ಷಿತವಾಗಿರಿ, ಮನೆಯೊಳಗೆ ಇರಿ #idhuvumKadandhuPogum ಎಂದು ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.

ಸಂಪುಟದಿಂದ ಶೈಲಜಾ ಹೊರಕ್ಕೆ: ನಮ್ಮ ಟೀಚರನ್ನು ಮತ್ತೆ ಕರೆತನ್ನಿ ಎಂದ ಸೆಲೆಬ್ರಿಟಿಗಳು

ನಯನತಾರಾ ನಾಯಕಿನಾಗಿ ನಟಿಸಿರುವ ವಿಘ್ನೇಶ್ ಶಿವನ್ ಅವರ ನಿರ್ಮಾಣ ಸಿನಿಮಾ ನೇತ್ರಿಕನ್ ಶೀಘ್ರದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

View post on Instagram

ವಿಘ್ನೇಶ್ ಅವರು ವಿಜಯ ಸೇತುಪತಿ, ನಯನತಾರಾ, ಮತ್ತು ಸಮಂತಾ ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾತುವಾಕುಲ ರೆಂಡು ಕಾಡಲ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಮತ್ತು ನಿರ್ದೇಶಿಸುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯ ಮುರಿಯೋಣ #ANCares #IndiaFightsCorona...