ಸೌತ್ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara and Vignesh Shivan) ಮದುವೆ ಸಂಭ್ರಮದಲ್ಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ಇದ್ದ ಈ ಜೋಡಿ ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದೆ.

ಸೌತ್ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara and Vignesh Shivan) ಮದುವೆ ಸಂಭ್ರಮದಲ್ಲಿದ್ದಾರೆ. ಇಬ್ಬರ ಮದುವೆ ವಿಚಾರ ವರ್ಷಗಳಿಂದ ಸದ್ದು ಮಾಡುತ್ತಿತ್ತು. ಆದರೀಗ ಇಬ್ಬರು ಹಸೆಮಣೆ ಏರುತ್ತಿರುವುದು ಖಚಿತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ಇದ್ದ ಈ ಜೋಡಿ ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಿಘ್ನೇಶ್ ಶಿವನ್ ಜೊತೆ ಡೇಟಿಂಗ್‌ನಲ್ಲಿದ್ದ ನಯನತಾರಾ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಯಾವಾಗಲೂ ಎದುರಾಗುತ್ತಿತ್ತು. ಕೊನೆಗೂ ತಾರಾ ಜೋಡಿ ಮದುವೆಯಾಗುತ್ತಿದೆ.

ನಯನತಾರಾ ಮತ್ತು ವಿಘ್ನೇನ್ ಶಿವನ್ ಜೋಡಿ ಜೂನ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಮದುವೆ ಸಂಭ್ರಮದಲ್ಲಿರುವ ಈ ಜೋಡಿ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ನಟಿ ನಾಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿದ್ದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಅನೇಕ ಗಣ್ಯರಿಗೆ ನಯನತಾರಾ ಮತ್ತು ವಿಘ್ನೇಶ್ ಮದುವೆ ಆಮಂತ್ರಣ ತಲುಪಿದೆ. ಸಿನಿ ಮತ್ತು ರಾಜಕೀಯ ಗಣ್ಯರಿಗನ್ನು ಈ ತಾರಾ ಜೋಡಿ ಮದುವೆಗೆ ಆಹ್ವಾನಿಸಿದ್ದಾರೆ.

ನಯನತಾರಾ ಮದುವೆಗೆ ಕಾಲಿವುಡ್ ಸ್ಟಾರ್ ನಟರಾದ ಅಜಿತ್, ರಜನಿಕಾಂತ್, ಸೂರ್ಯ, ಕಮಲ್ ಹಾಸನ್, ಕಾರ್ತಿ, ವಿಜಯ್ ಸೇತುಪತಿ ಸೇರಿದಂತೆ ಅನೇಕ ಹಾಜರಾಗುವ ಸಾಧ್ಯತೆ ಇದೆ. ಇನ್ನು ಟಾಲಿವುಡ್ ಸ್ಟಾರ್ ಚಿರಂಜೀವಿ ಸೇರಿದಂತೆ ಇನ್ನು ಅನೇಕ ಗಣ್ಯರಿಗೆ ಆಮಂತ್ರಣ ನೀಡಿದ್ದು ಮದುವೆಗೆ ಹಾಜರಾಗುವ ಸಾಧ್ಯತೆ ಇದೆ. ನಟಿ ನಯನತಾರಾ ಅನೇಕ ಭಾಷೆಯಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಇದೀಗ ಹಿಂದಿಯಲ್ಲಿ ನಟಿಸುತ್ತಿದ್ದಾರೆ. ಬಹುಭಾಷಾ ನಟಿ ನಯನತಾರಾ ಮದುವೆಗೆ ಬೇರೆ ಬೇರೆ ಭಾಷೆಯ ಕಲಾವಿದರು ಹಾಜರಾಗಲಿದ್ದಾರೆ ಎನ್ನುವ ನಿರೀಕ್ಷೆ ಇದೆ.

ನಯನತಾರಾಗೆ ಕೈ ತುತ್ತು ಕೊಟ್ಟ ಭಾವಿಪತಿ ವಿಘ್ನೇಶ್‌; ವಿಡಿಯೋ ವೈರಲ್!

ಮಹಾಬಲಿಪುರಂನಲ್ಲಿ ಮದುವೆ?

ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಆಗುತ್ತಿರುವುದು ಖಚಿತವಾಗಿದೆ. ಅದೂ ಜೂನ್ 9ಕ್ಕೆ ಎನ್ನುವುದು ಅಧಿಕೃತವಾಗಿದೆ ಆದರೆ ಯಾವ ಸ್ಥಳದಲ್ಲಿ ಎನ್ನುವ ಮಾಹಿತಿ ಇನ್ನು ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ತಮಿಳುನಾಡಿನ ಮಹಾಬಲಿಪುರಂನಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್?

ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ. ನೆಟ್‌ಫ್ಲಿಕ್ಸ್‌ ಇಬ್ಬರ ಮದುವೆ ಸಮಾರಂಭವನ್ನು ಶೂಟ್ ಮಾಡಿ ಸ್ಟ್ರೀಮಿಂಗ್ ಮಾಡಲು ಪ್ಲಾನ್ ಮಾಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದಹಾಗೆ ಮೊದಲು ಬಾಲಿವುಡ್ ಸ್ಟಾರ್ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಹಕ್ಕನ್ನು ಅಮೆಜಾನ್ ಖರೀದಿ ಮಾಡಿತ್ತು. ಇದೀಗ ನಯನತಾರಾ ಮದುವೆ ಸರದಿ.

MS Dhoni ತಮಿಳು ಚಿತ್ರರಂಗಕ್ಕೆ ; Nayanthara ನಾಯಕಿ?

ನಯನತಾರಾ ಸದ್ಯ ಗಾಡ್ ಫಾದರ್, ಓ2, ಗೋಲ್ಡ್ ಕನೆಕ್ಟ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಾರುಖ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಶಾರುಖ್, ನಯನತಾರಾ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ.