Asianet Suvarna News Asianet Suvarna News

ಹೆಚ್ಚಿದ ತೂಕ, ಬಾಡಿ ಶೇಮಿಂಗ್; ಟ್ರೋಲಿಗರಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣ ತಿರುಗೇಟು

ದೇಹದ ತೂಕ ಹೆಚ್ಚಾಗಿರುವುದರಿಂದ ಸೂರರೈ ಪೊಟ್ರು ನಟಿಯನ್ನು ಅನೇಕರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಅಪರ್ಣ ಅನಾರೋಗ್ಯದ ಕಾರಣ ತೂಕ ಹೆಚ್ಚಾಗುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ. 

national Award winning actress aparna balamurali gives it back to the trollers on body shaming sgk
Author
First Published Sep 16, 2022, 12:50 PM IST

ದಕ್ಷಿಣ ಭಾರತದ ಖ್ಯಾತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣ ಬಾಲಮುರಳಿ ಬಾಡಿ ಶೇಮಿಂಗ್ ವಿಚಾರಕ್ಕೆ ಸುದ್ದಿಯಲ್ಲಿತ್ತಿದ್ದಾರೆ. ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದ ಅಪರ್ಣ ಅದೇ ಸಿನಿಮಾದ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಮುಡಿಗೇರಿಸಿಕೊಂಡರು. ಸಹಜ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಅಪರ್ಣ ಬಾಲಮುರಳಿ ಇತ್ತೀಚಿಗಷ್ಟೆ ಕೊಂಚ ದಪ್ಪ ಆಗಿದ್ದಾರೆ. ನಟಿಯರು ಅಂದಕ್ಷಣ ತೆಳ್ಳಗೆ, ಬಳಕೊ ಬಳ್ಳಿ ಹಾಗೆ ಇರಬೇಕು ಎನ್ನುವುದು ಅನೇಕರ ಅಭಿಪ್ರಾಯ. ಆದರೆ ಅಪರ್ಣ ಬಾಹ್ಯ ಸೌಂದರ್ಯಕ್ಕಿಂತ ಪ್ರತಿಭೆ ಮುಖ್ಯ ಎನ್ನುತ್ತಾರೆ. ದೇಹದ ತೂಕ ಹೆಚ್ಚಾಗಿರುವುದರಿಂದ  ಸೂರರೈ ಪೊಟ್ರು ನಟಿಯನ್ನು ಅನೇಕರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.   

ಅಪರ್ಣ ಸದ್ಯ ಆಕಾಶಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಹೊಸ ಪೋಸ್ಟರ್‌ಗೆ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಪ್ರತಿಭೆಗೂ ಆಕೆಯ ನೋಟಕ್ಕೂ ಸಂಬಂಧವಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ತೂಕ ಹೆಚ್ಚಾಗಿದ್ದೆ ಟ್ರೋಲ್ ಮಾಡುವವರಿಗೆ ಅಪರ್ಣ ತಿರುಗೇಟು ನೀಡಿದ್ದಾರೆ. ಅನಾರೋಗ್ಯದ ಕಾರಣ ದಪ್ಪ ಆಗುತ್ತಿರುವುದಾಗಿ ಅಪರ್ಣ ಬಹಿರಂಗ ಪಡಿಸಿದರು. 

ತೂಕ ಹೆಚ್ಚಾಗಿದ್ದರಿಂದ ತಾಯಿ ಪಾತ್ರ ಮಾಡಿ ಎಂದು ಅನೇಕರು ಆಫರ್ ಮಾಡಿದರು. ಆದರೆ ಅಂತ ಪಾತ್ರಗಳನ್ನು ಮಾಡಲು ನನಗಿನ್ನು ವಯಸ್ಸಾಗಿಲ್ಲ ಎಂದು ಹೇಳಿದ್ದಾರೆ. ಜನರು ತನ್ನನ್ನು ಈಗ ಯಾವ ಪಾತ್ರ ಮಾಡುತ್ತಿದ್ದೀನೋ ಹಾಗೆ ಸ್ವೀಕರಿಸುತ್ತಿದ್ದಾರೆ ಎಂದು ಅಪರ್ಣ ನೇರವಾಗಿ ಹೇಳಿದರು. ಇನ್ನು ಇದೇ ಸಮಯದಲ್ಲಿ ನಟಿಯರು ಯಾವಾಗಲು ತೆಳ್ಳಗೆ ಇರಬೇಕು ಎನ್ನುವುದು ಮಾತದಂಡವಲ್ಲ ಎಂದು ಹೇಳುವ ಮೂಲಕ ಬಾಡಿ ಶೇಮಿಂಗ್‌ಗೆ ತಿರುಗೇಟು ನೀಡಿದರು. 

ಗೋಪಿನಾಥ್‌ ಬಯೋಪಿಕ್ 'ಸೂರರೈ ಪೋಟ್ರು' ಚಿತ್ರದ ಬೊಮ್ಮಿ ಯಾರು ಗೊತ್ತಾ?

ನಟಿ ಅಪರ್ಣ ಸೂರರೈ ಪೊಟ್ರು ಸಿನಿಮಾದಲ್ಲಿ ನಟ ಸೂರ್ಯ ಅವರ ಪತ್ನಿಯಾಗಿ ನಟಿಸಿದ್ದರು. ಈ ಸಿನಿಮಾ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಿರತವಾಗಿತ್ತು. ಅಪರ್ಣಾ ಸುಂದರಿ( ಬೊಮ್ಮಿ) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಅಭಿನಯದ ಮೂಲಕ ಅಪರ್ಣ ಎಲ್ಲರ ಹೃದಯ ಗೆದ್ದಿದ್ದರು. ಈ ಸಿನಿಮಾ ಮೂಲಕ ಅಪರ್ಣ ಸಿಕ್ಕಾಪಟ್ಟೆ ಫೇಮಸ್ ಆದರು. ಕೇರಳ ಮೂಲದ ನಟಿ  ಅಪರ್ಣ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ್ದಾರೆ. 

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಉತ್ತಮ ನಟ ಸೂರ್ಯ, ಅಜಯ್ ದೇವಗನ್- ನಟಿ ಅಪರ್ಣಾ ಬಾಲಮುರಳಿ

ಅಪರ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ಸೂರರೈ ಪೊಟ್ರೊ ಸಿನಿಮಾ ಬಳಿಕ ಬೇಡಿಕೆ ಹೆಚ್ಚಿಸಿಕೊಂಡಿರುವ ಅಪರ್ಣ ಸದ್ಯ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ಉತ್ತರಮ್, ಆಕಾಶಂ, ಪದ್ಮಿನಿ, ಕಾಪ ಸೇರಿದಂತೆ ಏನಕ ಸಿನಿಮಾಗಳು ಅಪರ್ಣ ಬಳಿ ಇವೆ. ತನ್ನ ಕೆಲಸದ ಕಡೆ ಹೆಚ್ಚು ಗಮನ ಕೊಟ್ಟಿರುವ ಅಪರ್ಣ ಟ್ರೋಲಿಗರ ಬಗ್ಗೆ ತೆಲೆಕೆಡಿಸಿಕೊಂಡಿಲ್ಲ.        

Follow Us:
Download App:
  • android
  • ios