ತೆರೆಮೇಲೆ ರತನ್ ಟಾಟಾ ಬಯೋಪಿಕ್; ರಾಷ್ಟ್ರ ಪ್ರಶಸ್ತಿ ವಿಜೇತ ಡೈರೆಕ್ಟರ್ ಆಕ್ಷನ್ ಕಟ್

ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬಯೋಪಿಕ್ ತೆರೆಮೇಲೆ ಬರಲು ಸಿದ್ಧವಾಗಿದೆ. ಟಾಟಾ ಬಯೋಪಿಕ್‌ಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಆಕ್ಷನ್ ಕಚಟ್ ಹೇಳುತ್ತಿದ್ದಾರೆ. 

National Award winner Sudha Kongara likely to direct Ratan Tata biopic sgk

ಈಗಾಗಲೇ ಅನೇಕ ಬಯೋಪಿಕ್‌ಗಳು ಬಂದಿವೆ. ಇನ್ನೂ ಅನೇಕ ಬಯೋಪಿಕ್‌ಗಳು ತಯಾರಾಗುತ್ತಿವೆ. ಕೆಲವು ಬಯೋಪಿಕ್ ಸೂಪರ್ ಹಿಟ್ ಆದರೆ ಇನ್ನು ಕೆಲವು ಪ್ರೇಕ್ಷಕರ ಹೃದಯ ಗೆಲ್ಲಲು ವಿಫಲವಾಗಿವೆ. ಸಿನಿಮಾ, ಕ್ರೀಡೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರ ಜೀವನ ಈಗಾಗಲೇ ತೆರೆಮೇಲೆ ಬಂದಿದೆ. ಇದೀಗ ಮತ್ತೊಂದು ಬಯೋಪಿಕ್ ವಿಚಾರ ಸದ್ದು ಮಾಡುತ್ತಿದೆ. ಅದು ಮತ್ಯಾರು ಅಲ್ಲ ಖ್ಯಾತ ಉದ್ಯಮಿ ರತನ್ ಟಾಟಾ ಬಯೋಪಿಕ್. ರತನ್ ಟಾಟಾ ಅವರ ಸ್ಫೂರ್ತಿದಾಯಕ ಜೀವನ ತೆರೆಮೇಲೆ ತರುವ ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ವಿಶೇಷ ಎಂದರೆ ರತನ್ ಟಾಟಾ ಬಯೋಪಿಕ್‌ಗೆ ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ತಮಿಳಿನ ಖ್ಯಾತ ನಿರ್ದೇಶಕಿ, ಸೂರರೈ ಪೊಟ್ರು ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸುಧಾ ನಿರ್ದೇಶನದಲ್ಲಿ ರತನ್ ಟಾಟಾ ಬಯೋಪಿಕ್ ಬರ್ತಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.  ಸೂರರೈ ಪೊಟ್ರು ಸಿನಿಮಾಗೆ ಅತ್ಯುತ್ತಮ ನಿರ್ದೇಶಕಿ ರಾಷ್ಟ್ರ ಪ್ರಶಸ್ತಿ ಗೆದ್ದ ಬೀಗಿದ್ದರು ಸುಧಾ.ಇದೀಗ ರತನ್ ಟಾಟಾ ಅವರ ಬಯೋಪಿಕ್ ಗೆ ಸಿದ್ಧತೆ ನಡೆಸುತ್ತಿದ್ದಾರಂತೆ.

 National Award winner Sudha Kongara likely to direct Ratan Tata biopic sgk
 
ಮೂಲಗಳ ಪ್ರಕಾರ ಸುಧಾ ಅವರು ಈಗಾಗಲೇ ಸಂಶೋಧನೆ ಮಾಡುತ್ತಿದ್ದು ಕೊನೆಯ ಹಂತದಲ್ಲಿದೆ ಎನ್ನಲಾಗಿದೆ. ರತನ್ ಟಾಟಾ ದೇಶದ ಅತ್ಯಂತ ಗೌರವಾನ್ವಿತ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಬೆಳ್ಳಿ ಪರದೆಯ ಮೇಲೆ ಅವರ ಕಥೆಯನ್ನು ಹೇಳಲು ಸುಧಾ ಅವರು ತುಂಬಾ ಎಕ್ಸಾಯಿಟ್ ಆಗಿದ್ದಾರೆ. ಟಾಟಾ ಅವರ ಜೀವನ ಮತ್ತು ಸಾರ್ವಜನಿಕವಾಗಿ ತಿಳಿಯದಿರದ ಅನೇಕ ಘಟನೆಗಳನ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ತರುವುದಾಗಿ ಸುಧಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಹೊಂಬಾಳೆ ಫಿಲ್ಮ್ಸ್ ಜೊತೆ ಕೀರ್ತಿ ಸುರೇಶ್ ಸಿನಿಮಾ; ಡೈರೆಕ್ಟರ್ ಇವರೇ

ರತನ್ ಟಾಟಾ ಅವರ ಜೀವನ ಭಾರತೀಯರಿಗೆ ಸ್ಫೂರ್ತಿದಾಯಕವಾಗಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಎಲ್ಲಾ ತಯಾರಿಯ ಬಳಿಕ ಮುಂದಿನ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ  ಸಾಧ್ಯತೆ ಇದೆ. ಮೂಲಗಳ ಪ್ರಕಾರ ರತನ್ ಟಾಟಾ ಆಗಿ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಅಥವಾ ತಮಿಳು ಸ್ಟಾರ್ ಸೂರ್ಯ ಮಿಂಚಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಈ ಬಗ್ಗೆ ರತನ್ ಟಾಟಾ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ರತನ್ ಟಾಟಾ ಬಯೋಪಿಕ್ ಸುಧಾ ಕೊಂಗಾರ ನಿರ್ದೇಶನದಲ್ಲಿ ಬರ್ತಿದೆ ಎನ್ನುವ ಸುದ್ದಿಯೇ ಅಭಿಮಾನಿಳಿಗೆ ಖುಷಿ ನೀಡಿದೆ. 

ಮಹಿಳಾ ನಿರ್ದೇಶಕಿ ಸುಧಾ ಕೊಂಗರ ಜೊತೆ ಹೊಸ ಚಿತ್ರ ಅನೌನ್ಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌!

ಇನ್ನು ಸುಧಾ ಕೊಂಗಾರ ಬಗ್ಗೆ ಹೇಳುವುದಾದರೆ ಆಂಧ್ರ ಅಂದಗಾಡು ಸಿನಿಮಾ ಮೂಲಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟರು. ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಸೂರರೈ ಪೊಟ್ರು ಸಿನಿಮಾ ಕೂಡ ಬಯೋಪಕ್ ಆಗಿದ್ದು ದೊಡ್ಡ ಮಟ್ಟದ ಸಕ್ಸಸ್ ಕಂಡಿತು. ಕರ್ನಾಟಕ ಮೂಲದ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಜಿಆರ್ ಗೊಪಿನಾಥ್ ಅವರ ಜೀವನಚರಿತ್ರೆಯಾಗಿದೆ. ಸದ್ಯ ಅದೇ ಸಿನಿಮಾವನ್ನು ಹಿಂದಿಕೆ ರಿಮೇಕ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಧಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಹೊಂಬಾಳೆ ಫಿಲ್ಮ್ ಜೊತೆಯೂ ಸುಧಾ ಸಿನಿಮಾ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios