10 ವರ್ಷಗಳಿಂದ ಮೋಹನ ಬಾಬು ಕುಟುಂಬದ ಜೊತೆ ಕೆಲಸ ಮಾಡುತ್ತಿದ್ದ ಹೇರ್‌ಡ್ರೆಸ್ಸರ್‌ ವಿರುದ್ಧ ದೂರು. ಅಸಲಿ ಕಥೆ ತೆರೆದಿಟ್ಟ ನಾಗಸೀನು....

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟ ಮೋಹನ್ ಬಾಬು ಮತ್ತು ಅವರ ಕುಟುಂಬ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲೂ ತುಂಬಾನೇ ಆ್ಯಕ್ಟಿವ್ ಆಗಿದ್ದಾರೆ. ಆದರೆ ನಡೆಯುತ್ತಿರುವ ಗಾಸಿಪ್ ಬಗ್ಗೆ ಬ್ರೇಕಿಂಗ್ ನ್ಯೂಸ್‌ಗಳ ಬಗ್ಗೆ ರಿಯಾಕ್ಟ್ ಮಾಡಿಲ್ಲ. ಮಾ ಚುನಾವಣೆ ಕಾಂಟ್ರೋವರ್ಸಿ, ಚಿತ್ರರಂಗದ ಹಿರಿಯರು ಸೇರಿಕೊಂಡ ಸಭೆಗೆ ಮೋಹನ್ ಬಾಬು ನೋ ಎಂಟ್ರಿ, ಮೋಹನ್ ಬಾಬು ಸನ್ ಆಫ್ ಇಂಡಿಯಾ ಸಿನಿಮಾ ಕಲೆಕ್ಷನ್... ಹೀಗೆ ಒಂದೊಂದೇ ಕಾರಣಗಳು ಸೇರಿಕೊಳ್ಳುತ್ತಿವೆ. ಈಗ ಅವರ ಹೇರ್‌ ಡ್ರೆಸ್ಸರ್‌ ಸುದ್ದಿಯಲ್ಲಿದ್ದಾರೆ...

ಏನಿದು ಘಟನೆ?:
ಕಳೆದ 10 ವರ್ಷಗಳಿಂದ ಮೋಹನ್ ಬಾಬು ಕುಟುಂಬಕ್ಕೆ ಹೇರ್‌ ಡ್ರೆಸ್ಸರ್‌ ಆಗಿ ನಾಗಸೀನು ಕೆಲಸ ಮಾಡುತ್ತಿದ್ದಾರೆ. ನಾಗಸೀನು ಕೆಲಸ ನಮಗೆ ಇಷ್ಟ. ಅವರು ನಮ್ಮ ಕುಟುಂಬದವರು ಎಂದು ಅನೇಕ ಬಾರಿ ಸಂದರ್ಶನದಲ್ಲಿ ಮೋಹನ್ ಬಾಬು ಅವರೇ ಹೇಳಿ ಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ವಿಷ್ಣು ಮಂಚು ಪೊಲೀಸ್‌ ಠಾಣೆಯಲ್ಲಿ ನಾಗಸೀನು ವಿರುದ್ಧ ದೂರು ನೀಡಿದ್ದಾರೆ. ನಾವು ಬಳಸುತ್ತಿದ್ದ ಹೇರ್‌ ಸ್ಟೈಲಿಂಗ್ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಅದು ಒಟ್ಟು ಬೆಲೆ 5 ಲಕ್ಷ ಆಗುತ್ತದೆ ಎಂದು ಹೇಳಿದ್ದಾರೆ. ವಿಚಾರಣೆ ಮಾಡಲು ಪೊಲೀಸರು ನಾಗಸೀನು ಅವರನ್ನು ಕರೆಸಿದಾಗ, ಅವರು ಮಾಧ್ಯಮಗಳನ್ನು ಕರೆಯಿಸಿ ಸ್ಪಷ್ಟನೆ ಕೊಟ್ಟಿದ್ದಾರೆ, ನಡೆದ ಅಸಲಿ ಘಟನೆ ಬಗ್ಗೆ ಹೇಳಿದ್ದಾರೆ. 

ನಟ ಮೋಹನ್ ಬಾಬುಗೆ ಆಗಂತುಕರಿಂದ ಕೊಲೆ ಬೆದರಿಕೆ; ಆತಂಕದಲ್ಲಿ ಕುಟುಂಬ!

ಮೋಹನ್ ಬಾಬು ನಟನೆಯ ಸನ್ ಆಫ್ ಇಂಡಿಯಾ (Son of India) ಸಿನಿಮಾ ಕೆಲಕ್ಷನ್‌ಗಳು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ದೊಡ್ಡ ಟ್ರೋಲ್ (Troll) ಆಗುತ್ತಿದೆ. ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಇದು ದೊಡ್ಡ ಲಾಸ್ ಎಂದು ಚರ್ಚೆ ಆಗುತ್ತಿದೆ, ಹೀಗೆ ಖಾಸಗಿ ಸಂದರ್ಶನದಲ್ಲಿ (Private Interview) ಹೇರ್‌ ಡ್ರೆಸ್ಸರ್‌ನ ನಾಗಸೀನು ಅವರನ್ನು ಸಿನಿಮಾ ಬಗ್ಗೆ ಕೇಳಿದ್ದಾರೆ. ಮೋಹನ್ ಬಾಬು ಪರವಾಗಿ ಮಾತನಾಡಿಲ್ಲ ಹೊಗಳಿಲ್ಲ ಎಂದು ಆತನನ್ನು ಮನೆಗೆ ಕರೆಸಿ ಎಲ್ಲಾ ಕೆಲಸದವರು ಮುಂದೆ ಮಂಡಿಯೂರಿ ಕ್ಷಮೆ (Apology) ಕೇಳುವಂತೆ ಮಾಡಿದ್ದಾರೆ. ಕ್ಷಮೆ ಕೇಳಲು ನಾಗಸೀನು ನಿರಾಕರಿಸಿದಕ್ಕೆ ವಿಷ್ಣು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. 

ನಾಗಸೀನು ಯಾಕೆ ಕ್ಷಮೆ ಕೇಳಿಲ್ಲ:
ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಯಾಕೆ ಕ್ಷಮೆ ಕೇಳಿ ಕಾಂಟ್ರೋವರ್ಸಿ ಆಗಬಾರದು ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಮೋಹನ್ ಬಾಬು ಮತ್ತು ವಿಷ್ಣು ಬಳಸಿರುವ ಪದಗಳನ್ನು ಹೇಳುವುದಕ್ಕೆ ಆಗಲಿ ಬರೆಯುವುದಕ್ಕೆ ಆಗೋಲ್ಲ ಎಂದಿದ್ದಾರೆ. ತಂದೆ ಮಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ತಾಯಿಯ ಬಗ್ಗೆಯೂ ಅಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ, ಎಂದು ನಾಗಸೀನು ಹೇಳಿದ್ದಾರೆ. ಜಾತಿ ನಿಂದನೆ ಮಾಡಿರುವುದಕ್ಕೆ ಮೋಹನ್ ಮತ್ತು ವಿಷ್ಣು ವಿರುದ್ಧ ಪೊಲೀಸ್‌ ಕಂಪ್ಲೇಂಟ್ ಆಗಿದೆ. 

ಪ್ರಕಾಶ್ ರಾಜ್ ಪರ ನಿಂತ ಶ್ರೀನಿಜಾಗೆ ಚಪ್ಪಲಿಯಲ್ಲಿ ಹೊಡೆತೇನೆ ಎಂದ ಮೋಹನ್ ಬಾಬು ಬೆಂಬಲಿಗರು

ಒಬ್ಬರ ಮೇಲೆ ಒಬ್ಬರು ದೂರು ನೀಡಿದ ನಂತರ ಘಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಜಾತಿನಿಂದನೆ ಮಾಡಿರುವುದಕ್ಕೆ ಅತ್ತ ತೆಲಂಗಾಣ ಮತ್ತು ಇತ್ತ ಆಂಧ್ರ ಪ್ರದೇಶದಲ್ಲಿನ ಸವಿತಾ ಸಮಾಜ ಮೋಹನ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದೆ. ಇಡೀ ಸವಿತಾ ಸಮಾಜವೇ ಬೀದಿಗಿಳಿದು ಹೋರಾಟ ಮಾಡುತ್ತಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ನಗರಗಳಲ್ಲಿ ಹೋರಾಟ ಜೋರಾಗಿ ನಡೆಯುತ್ತಿದೆ. ಸಮುದಾಯದ ಮುಖಂಡರು ಕರ್ನೂಲ್‌ನಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಜಾತಿ ಹೆಸರಿನಲ್ಲಿ ಮಾನಸಿಕವಾಗಿ ಹಿಂಸೆ ನೀಡಿ ಅವಮಾನ ಮಾಡಲಾಗಿದೆ ಎಂದಿದ್ದಾರೆ. ನಾಗಸೀನು ಅವರಿಗೆ ಕ್ಷಮೆ ಕೇಳಬೇಕು. ಹಾಗೂ ಜಾತಿ ನಿಂದನೆ ಮಾಡಿರುವುದಕ್ಕೆ ಎಲ್ಲರ ಮುಂದೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.