ಅರ್ಜುನ್ ಕಪೂರ್ ಅವರು ತಮ್ಮ ಅಜ್ಜಿಯರಿಗಾಗಿ ಸರ್ದಾರ್ ಕಾ ಗ್ರಾಂಡ್‌ಸನ್ ಸಿನಿಮಾ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಒಂದು ಕಥೆಯೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ಹೇಳಲು ಸಾಧ್ಯ ಎಂದು ಅವರು ಹೇಳಿದ್ದಾರೆ. 

"ಸರ್ದಾರ್ ಕಾ ಗ್ರಾಂಡ್‌ಸನ್" ಅಜ್ಜಿಯ ಕೊನೆಯ ಆಸೆಯ ಕುರಿತಾದ ಕಥೆ. ನೀನಾ ಗುಪ್ತಾ, ರಕುಲ್ಪ್ರೀತ್ ಸಿಂಗ್, ಕನ್ಲ್ವಾಜಿತ್ ಸಿಂಗ್, ಜಾನ್ ಅಬ್ರಹಾಂ, ಅದಿತಿ ರಾವ್ ಹೈಡಾರಿ ಮತ್ತು ಕುಮುದ್ ಮಿಶ್ರಾ ಅವರೂ ಈ ಸಿನಿಮಾದಲ್ಲಿದ್ದಾರೆ.

ಇದ್ದಕ್ಕಿದ್ದಂತೆ ದೇಹ ತೂಕ ಇಳಿಸಿಕೊಂಡ ನಟಿ ಸೋನಾಕ್ಷಿ; ಹೇಗೆ ಗೊತ್ತಾ?

"ನನ್ನ ಅಜ್ಜಿ (ತಾಯಿಯ ಅಮ್ಮ) ಸಾಯುವವರೆಗೂ ನನ್ನ ಎಕೌಂಟ್ಸ್ ನೋಡಿಕೊಳ್ಳುತ್ತಿದ್ದರು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿದ್ದಾಗಲೂ ನನ್ನೊಂದಿಗೆ ಮಾತನಾಡುತ್ತಿದ್ದಳು. ಅವಳು ತೀರಿಕೊಂಡಾಗಿನ ದಿನದವರೆಗೂ ನನ್ನ ಹಣಕಾಸನ್ನು ನಿರ್ವಹಿಸುತ್ತಿದ್ದಳು. ಅಜ್ಜಿಗಿಂತ ಮೊದಲು ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಹಾಗಾಗಿ, ನಾನು ನನ್ನ ಅಜ್ಜಿಗೆ ಹತ್ತಿರವಾಗಿದ್ದೆ. ಅವಳು ಸ್ವತಃ ನಿರ್ಮಾಪಕಿಯಾಗಿದ್ದಳು ಎಂದಿದ್ದಾರೆ ಅರ್ಜುನ್