ಐಎಂಡಿಬಿ 2023ಯ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ ರಿಲೀಸ್ ಮಾಡಿದ್ದು ಕನ್ನಡ ಏಕೈಕ ಸಿನಿಮಾ ಜಾಗ ಪಡೆದುಕೊಂಡಿದೆ.
2023ರ ಬಹುನಿರೀಕ್ಷಿತ ಚಿತ್ರಗಳು ಯಾವುದು, ಯಾವ ಭಾಷೆಯ ಸಿನಿಮಾಗಳು ಭಾರಿ ಕುತೂಹಲ ಮೂಡಿಸಿವೆ ಎನ್ನುವ ಬಗ್ಗೆ ಐಎಂಡಿಬಿ ಲಿಸ್ಟ್ ರಿಲೀಸ್ ಮಾಡಿದೆ. ತಿಂಗಳಿಗೆ 200 ದಶಲಕ್ಷಕ್ಕೂ ಹೆಚ್ಚು ಬಾರಿ ಐಎಂಡಿಬಿ ತಾಣಕ್ಕೆ ಭೇಟಿ ನೀಡಿದ ಬಳಕೆದಾರರ ವೀಕ್ಷಣೆ ಆಧರಿಸಿ ಈ ಪಟ್ಟಿ ರಿಲೀಸ್ ಮಾಡಲಾಗಿದೆ. ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ಐಎಂಡಿಬಿ ಇಂದು 2023ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಂದಹಾಗೆ IMDb ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಕನ್ನಡ ಏಕೈಕ ಸಿನಿಮಾ ಜಾಗ ಪಡೆದು ಕೊಂಡಿದೆ. ಹೌದು ಈ ವರ್ಷದ ನಿರೀಕ್ಷೆಯ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾವಿದೆ. ಉಳಿದಂತೆ 10 ಸಿನಿಮಾಗಳು ಹಿಂದಿ ಭಾಷೆಯದಾಗಿದ್ದರೆ ಇನ್ನೂ 10 ಸಿನಿಮಾಗಳು ಸೌತ್ ಸಿನಿಮಾಗಳಾಗಿವೆ.
ಐಎಂಡಿಬಿಯ 2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳು
ಮೊದಲ ಸ್ಥಾನದಲ್ಲಿ ಶಾರುಖ್ ನಟನಯ ಪಠಾಣ್ ಸಿನಿಮಾವಿದೆ. 2ನೇ ಸ್ಥಾನದಲ್ಲಿ ಪುಷ್ಫ-2, 3ನೇ ಸ್ಥಾನದಲ್ಲಿ ಜವಾನ್, ಬಳಿಕ ಕ್ರಮವಾಗಿ ಆದಿಪುರುಷ್, ಸಲಾರ್, ವಾರಿಸು, ಕಬ್ಜಾ, ದಳಪತಿ 67, ದಿ ಆರ್ಚಿಸ್, ಡಂಕಿ, ಟೈಗರ್ 3, ಕಿಸಿ ಕ ಭಾಯ್ ಕಿಸಿ ಕಿ ಜಾನ್, ಅನಿಮಲ್, ಏಜೆಂಟ್, ಇಂಡಿಯನ್ 2, ವಾಡಿವಾಸಲ್, ಶೆಹಜಾದ, ಬಡೇ ಮಿಯಾ ಛೋಟೆ ಮಿಯಾ ಹಾಗೂ ಭೋಲಾ ಸಿನಿಮಾಗಳಿವೆ.
● ಮೂರು ವರ್ಷಗಳ ಬಳಿಕ ಬಾಲಿವುಡ್ ಚೇತರಿಸಿಕೊಳ್ಳುತ್ತಿದ್ದು, ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿರುವ ಪಠಾಣ್, ಜವಾನ್ ಮತ್ತು ಡಂಕಿ ಚಿತ್ರಗಳು ತೆರೆಗೆ ಬರುತ್ತಿವೆ. ಈ ವರ್ಷ ಈ ಮೂರು ಸಿನಿಮಾಗಳು ರಿಲೀಸ್ ಆಗುತ್ತಿದ್ದು ಭಾರಿ ನಿರೀಕ್ಷೆ ಮೂಸಿವೆ. ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಕೂಡ 2023ರಲ್ಲಿ ಜೋಯಾ ಅಖ್ತರ್ ಅವರ ದಿ ಆರ್ಚಿಸ್ ಚಿತ್ರದ ಮೂಲಕ ನಟಿಯಾಗಿ ಪದರ್ಪಾಣೆ ಮಾಡುತ್ತಿದ್ದಾರೆ. ಈ ಚಿತ್ರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
● ಸಲ್ಮಾನ್ ಖಾನ್ ನಟನೆಯ 2 ಚಿತ್ರಗಳು, ಕಿಸಿ ಕ ಭಾಯ್ ಕಿಸಿ ಕಿ ಜಾನ್ ಮತ್ತು ಟೈಗರ್ 3 ಬಿಡುಗಡೆಯಾಗುತ್ತಿವೆ.
● 1996ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಚಿತ್ರ ಇಂಡಿಯನ್ (ಹಿಂದೂಸ್ತಾನಿ)ಯ ಸೀಕ್ವೆಲ್ ಇಂಡಿಯನ್-2 ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೂಲಕ ಕಮಲ್‌ಹಾಸನ್ ಮತ್ತು ನಿರ್ದೇಶಕ ಶಂಕರ್ ಮತ್ತೆ ಒಂದಾಗಿದ್ದಾರೆ.
● ಕಾರ್ತಿಕ್ ಆರ್ಯನ್ ನಟನೆಯ ಶೆಹಜಾದ ಮತ್ತೊಂದು ಬಹುನಿರೀಕ್ಷಿತ ಚಿತ್ರವಾಗಿದ್ದು, ಇದು ತೆಲುಗಿನ ಸೂಪರ್ ಹಿಟ್ ಚಿತ್ರ, ಅಲ್ಲು ಅರ್ಜುನ್ ನಟನೆ ಅಲಾ ವೈಕುಂಠಪುರಮ್‌ಲೊದ ರೀಮೇಕ್ ಆಗಿದೆ. ಅಜಯ್ ದೇವಗನ್ ನಟನೆಯ ಭೋಲಾ ಚಿತ್ರವು 2019ರ ತಮಿಳು ಚಿತ್ರ ಕೈದಿಯ ರೀಮೇಕ್ ಆಗಿದೆ.
● ಕನ್ನಡದ ಏಕೈಕ ಸಿನಿಮಾ ಈ ಪಟ್ಟಿಯಲ್ಲಿದೆ. ಈಗಾಗಲೇ ಟ್ರೈಲರ್ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿರುವ ಕಬ್ಜ ಈ ವರ್ಷ ರಿಲೀಸ್ ಆಗುತ್ತಿರುವ ನಿರೀಕ್ಷೆಯ ಪಟ್ಟಿಯಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಆರ್ ಚಂದ್ರು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
