Asianet Suvarna News Asianet Suvarna News

3ನೇ ಮಹಾಯುದ್ಧ ತಡೆದವರೇ ಮೋದಿ: ಉದಾಹರಣೆ ಸಹಿತ ವಿವರಿಸಿದ ಕಂಗನಾಗೆ ಭೇಷ್​ ಎಂದ ಫ್ಯಾನ್ಸ್

3ನೇ ಮಹಾಯುದ್ಧ ತಡೆದವರೇ ಮೋದಿ ಎಂದು ಉದಾಹರಣೆ ಸಹಿತ ವಿವರಿಸಿದ ಕಂಗನಾಗೆ ಭೇಷ್​ ಎಂದ ಫ್ಯಾನ್ಸ್​ 
 

Modi Stopped World War III Putin Ukraine Look Up To Him For Guidance Kangana Ranaut At Poll Rally suc
Author
First Published May 7, 2024, 5:55 PM IST

ಲೋಕಸಭಾ ಚುನಾವಣೆಯ ಮತದಾನದ ಇನ್ನೂ ನಾಲ್ಕು ಹಂತಗಳು ಬಾಕಿ ಇವೆ.  ರಾಜಕೀಯ ಮುಖಂಡರ ಭಾಷಣ ಬಿರುಸಿನಿಂದ ಸಾಗುತ್ತಿದೆ. ನಟಿ ಕಂಗನಾ ರಣಾವತ್ ಬಿಜೆಪಿಗೆ ಸೇರ್ಪಡೆಯಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.  3ನೇ ಮಹಾಯುದ್ಧ ತಡೆದವರೇ ಮೋದಿ ಎನ್ನುವ ಮೂಲಕ ಅಭಿಮಾನಿಗಳಿಂದ ಭೇಷ್​ ಭೇಷ್​ ಎನಿಸಿಕೊಂಡಿದ್ದಾರೆ. ತಮ್ಮ ಮಾತಿಗೆ ಪುಷ್ಟಿ ನೀಡುವ ಉದಾಹರಣೆಗಳನ್ನೂ ನೀಡುವ ಮೂಲಕ ಮೂರನೆಯ ಮಹಾಯುದ್ಧವನ್ನು ಪ್ರಧಾನಿಯವರು ಹೇಗೆ ತಡೆಗಟ್ಟಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ. 

ಪ್ರಧಾನಿ ಮೋದಿ ಅವರ ಕೆಲಸಗಳನ್ನು ನೋಡಿ ಜನ ನನಗೆ ಮತ ಹಾಕುತ್ತಾರೆ. ನಾನೂ ಅವರ ಅಭಿವೃದ್ಧಿ ಕಾರ್ಯಗಳ ಮೇಲೆಯೇ ವೋಟ್​ ಕೇಳುತ್ತೇನೆ ಎಂದಿದ್ದಾರೆ ನಟಿ.  ಪ್ರಧಾನಿ ಮೋದಿ ಅವರು ಜಗತ್ತಿನಲ್ಲಿ ಶಾಂತಿಯ ಪರವಾಗಿ ಮಾತನಾಡುತ್ತಾರೆ. ಇಂದಿನ ಭವ್ಯ ಭಾರತವನ್ನು ಹಿಂದೆ ಎಂದಿಯೂ ನಾವು ನೋಡಿಲ್ಲ. ಹಾಗಾಗಿ ನಾವು ಯಾರಿಗೆ ಮತ ಹಾಕಬೇಕು ಎಂದು ಇನ್ನೂ ಯೋಚಿಸಬೇಕೇ?" ಎಂದು ಚುನಾವಣಾ ರ್ಯಾಲಿಯಲ್ಲಿ ಮತದಾರರನ್ನು ಕೇಳಿದ್ದಾರೆ.

ಏನಮ್ಮಾ ಕಂಗನಾ ಇದು? ಮಾತಿನ ಆರ್ಭಟದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯಂಗೇ ಹೀಗೇ ಹೇಳೋದಾ?

ಇದಕ್ಕೂ ಮುನ್ನ ನಟಿ, ತಮ್ಮ ಭಾಷಣದಲ್ಲಿ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸುವ ಬದಲು ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಹೆಸರು ಪ್ರಸ್ತಾಪಿಸಿ ಟೀಕಾ ಪ್ರಹಾರ ನಡೆಸಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಸಂಪೂರ್ಣವಾಗಿ ಹಾಳಾದ ರಾಜಕುಮಾರರನ್ನು ಹೊಂದಿರುವ ಪಕ್ಷಗಳಿವೆ. ಅಲ್ಲಿ ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯುವ ರಾಹುಲ್‌ ಗಾಂಧಿ, ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಮತ್ತು ಅಸಂಬದ್ದ ಹೇಳಿಕೆ ನೀಡುವ ಅಖಿಲೇಶ್‌ ಯಾದವ್‌ ಇದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವ ಇಂತಹ ನಾಯಕರು ಹೇಗೆ ತಾನೇ ದೇಶವನ್ನು ನಡೆಸಬಲ್ಲರು ಎಂದು ಅವರು ವ್ಯಂಗ್ಯವಾಡಿದ್ದಾರೆ.   

ಇದೇ ವೇಳೆ,  ಚಿತ್ರರಂಗದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್‌ಗೆ ಸಮಾನವಾದ ಪ್ರೀತಿ ಮತ್ತು ಗೌರವವನ್ನು ನಾನು ಗಳಿಸಿದ್ದೇನೆ. ನಾನು ರಾಜಸ್ಥಾನ, ಪಶ್ಚಿಮ ಬಂಗಾಳ, ನವದೆಹಲಿಗೆ ಹೋದರೂ, ಮಣಿಪುರಕ್ಕೆ ಹೋದರೂ, ಇಡೀ ದೇಶವೇ ಆಶ್ಚರ್ಯ ಪಡುತ್ತದೆ. ನನ್ನ ಬಗ್ಗೆ ಜನರಿಗೆ ತುಂಬಾ ಪ್ರೀತಿ ಮತ್ತು ಗೌರವವಿದೆ ಎಂದು ಅನಿಸುತ್ತದೆ. ಅಮಿತಾಬ್ ಬಚ್ಚನ್ ನಂತರ ಯಾರಿಗಾದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಅಂತಹ ಪ್ರೀತಿ ಮತ್ತು ಗೌರವ ಸಿಕ್ಕಿದರೆ ಅದು ನನಗೆ ಮಾತ್ರ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ” ಎಂದು ಕಂಗನಾ ಹೇಳಿಕೊಂಡಿದ್ದರು. 

ಸಂಪೂರ್ಣ ಬೆತ್ತಲಾದ ರಣಬೀರ್​ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ

Latest Videos
Follow Us:
Download App:
  • android
  • ios