Asianet Suvarna News Asianet Suvarna News

ಕೆಲವರಿಗೆ ನನ್ನ ಕೈ ಸನ್ನೆ ಇಷ್ಟವಾಗಿಲ್ಲ; ವಿವಾದದ ಬಗ್ಗೆ ಮೌನ ಮುರಿದ ನಟಿ ರಶ್ಮಿಕಾ ಮಂದಣ್ಣ

ನನ್ನ ಕೈ ಸನ್ನೆ ಕೆಲವರಿಗೆ ಇಷ್ಟವಾಗಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

Mission Majnu actress Rashmika Mandanna opens up about receiving criticism and hate sgk
Author
First Published Jan 6, 2023, 3:57 PM IST

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಕಾಂತಾರ ಸಿನಿಮಾ ನೋಡಿಲ್ಲ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿ ಭಾರಿ ಟೀಕೆ ಎದುರಿಸಿದ್ದರು. ರಶ್ಮಿಕಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಇತ್ತೀಚಿಗೆ ರಶ್ಮಿಕಾ ವಿವಾದಗಳ ಬಗ್ಗೆ ನಟ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಸೆಲೆಬ್ರಿಟಿ ಆದ್ಮೇಲೆ ಹೂಮಾಲೆ, ಮೊಮ್ಮೆ, ಟೊಮೆಟೋ, ಕಲ್ಲು ಎಲ್ಲವೂ ಬರುತ್ತೆ. ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು ಎಂದು ಹೇಳಿದ್ದರು. ಅಂದಹಾಗೆ ರಶ್ಮಿಕಾ ಎಷ್ಟೇ ಟ್ರೋಲ್ ಆದರೂ, ಟೀಕೆಗಳು ಕೇಳಿಬಂದರೂ ಹೆಚ್ಚಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಇದೀಗ ಪುಷ್ಪಾ 2 ನಟಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತನ್ನ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಬಬಲ್‌‍ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ರಶ್ಮಿಕಾ, 'ನಾವು ಕಲಾವಿದರಾಗಿ ಜನ ನಮ್ಮನ್ನು ಮಾತ್ರ ಇಷ್ಟಪಡಬೇಕೆಂದು ಎಂದು ನಿರೀಕ್ಷಿಸಬಾರದು ಎನ್ನುವುದನ್ನು ತಿಳಿದುಕೊಂಡೆ. ದ್ವೇಷ, ಪ್ರೀತಿ ಎಲ್ಲಾ ಇರುತ್ತದೆ. ಆದರೆ ಜನರು ನಿಮ್ಮ ಬಗ್ಗೆ ಮಾತನಾಡುತ್ತಾರೆ. ನಾವು ಸಾರ್ವಜನಿಕ ವ್ಯಕ್ತಿಗಳು. ನಾವು ಸಾರ್ವಜನಿಕರ ಜೊತೆ ಮಾತನಾಡುತ್ತೇವೆ. ಸಂದರ್ಶನ ಮಾಡುತ್ತೇವೆ' ಎಂದು ಹೇಳಿದರು. 

ಮಾತು ಮುಂದುವರೆಸಿದ ರಶ್ಮಿಕಾ ಸನ್ನೆ ಮಾಡಿ ಟ್ರೋಲ್ ಆಗಿದ್ದ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು, 'ಬಹುಶಃ ನಾನು ಮಾತನಾಡುವ ರೀತಿ ಅಥವಾ ನಾನು ಕೈ ಸನ್ನೆಗಳನ್ನು ಮಾಡುವುದು ಕೆಲವರಿಗೆ ಇಷ್ಟವಾಗದಿರಬಹುದು ಅಥವ ನಾನು ತುಂಬಾ ಎಕ್ಸ್‌ಪ್ರೆಸಿಟಿವ್ ಆಗಿರುವುದು ಇಷ್ಟ ಆಗಿಲ್ಲ.  ನನ್ನನ್ನು ಇಷ್ಟಪಡದಿರಲು ಈ ಎಲ್ಲಾ ಕಾರಣಗಳು ಇರಬಹುದು. ಆದರೆ ಅದೇ ಸಮಯದಲ್ಲಿ ತುಂಬಾ ಪ್ರೀತಿ ಇದೆ, ಅದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ. 

ಸುದೀಪ್ ರಿಯಾಕ್ಷನ್ 

ಇತ್ತೀಚಿಗಷ್ಟೆ ತೆಲುಗು ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಸುದೀಪ್, 'ನಾವು ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು ಮತ್ತು ಮುಂದಕ್ಕೆ ಹೋಗ್ತಾ ಇರಬೇಕು. ನಾವು ಒಮ್ಮೆ ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ' ಎಂದು ಹೇಳಿದ್ದರು.   

ರಶ್ಮಿಕಾ ಬಳಿ ಇರುವ ಸಿನಿಮಾಗಳು 

ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹಿಂದಿಯ ಮಿಷನ್ ಮಜ್ನು ಸಿನಿಮಾದ ಪ್ರಮೋಷನಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಮತ್ತೊಂದು ಹಿಂದಿ ಸಿನಿಮಾ ಅನಿಮಲ್ ಕೂಡ ಮುಗಿಸಿದ್ದಾರೆ. ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. ಇನ್ನು ದಕ್ಷಿಣದಲ್ಲಿ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ವಾರಿಸು ಮತ್ತು ತೆಲುಗಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

Follow Us:
Download App:
  • android
  • ios