ಯಾವುದೇ ಸ್ಕೂಬಾ ಡೈವಿಂಗ್ ಗೇರ್ ಇಲ್ಲದೇ ಬಾಲಿವುಡ್ ನಟ ಮಿಲಿಂದ್ ಸೋಮನ್ ಮೀನಿನಂತೆ ಈಜಿದ್ದಾರೆ, ಮಾಲ್ಡೀವ್ಸ್‌ನಲ್ಲಿರುವ ನಟ ಸಲೀಸಾಗಿ ನೀರಿನಡಿಯಲ್ಲಿ ಈಜಾಡಿರೋ ವಿಡಿಯೋ ಸೂಪರ್ ಆಗಿದೆ.

ಇನ್‌ಸ್ಟಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ ಮಿಲಿಂದ್ ಸೋಮನ್ ಫ್ರೀ ಡೈವಿಂಗ್, ಫ್ರೀ, ಹೊರಗೆ ಮತ್ತು ನೀರಿನ ಒಳಗೂ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ವಿಡಿಯೋ ಮಿಲಿಂದ್ ಹಾಗೂ ಪತ್ನಿ ಅಂಕಿತಾ ಕೊನ್ವಾರ್ ಅವರ ಮಾಲ್ಡೀವ್ಸ್ ವೆಕೇಷನ್‌ನದ್ದು ಎನ್ನಲಾಗಿದೆ.

1989 ಮಾಡೆಲಿಂಗ್ ಫೋಟೋ ಶೇರ್ ಮಾಡಿದ ನಟ: ಆಗಿನ ಪೇಮೆಂಟ್ ಎಷ್ಟು ಗೊತ್ತಾ..?

ವೆಬ್ ಸಿರೀಸ್‌ ಪೌರಷ್‌ಪುರ್‌ನಲ್ಲಿ ತೃತೀಯಲಿಂಗಿಯಾಗಿ ನಟಿಸುತ್ತಿರುವ ಮಿಲಿಂದ್ ಇದೇ ಮೊದಲಬಾರಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಡೆಲಿಂಗ್ ಮೂಲಕ ಮಿಂಚಿದ ನಟ ನಂತರ ನಟನೆ ಆರಂಭಿಸಿದ್ದರು.

ಫಿಟ್ನೆಸ್ ಫ್ರೀಕ್ ಮಿಲಿಂದ್ ಅವರ ತಾಯಿಯೂ ತಮ್ಮ ಫಿಟ್ನೆಸ್‌ಗೆ ಫೇಮಸ್. ಅವರ ಫ್ಯಾಮಿಲಿಯೇ ಫಿಟ್ನೆಸ್‌ನಿಂದಲೇ ಗುರುತಿಸಲ್ಪಡುತ್ತಿದ್ದು, ನಟ ಮಿಲಿಂದ್ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿರುತ್ತಾರೆ.