ಬಾಲಿವುಡ್‌ ನಟಿ ಕತ್ರೀನಾ ಕೈಫ್ ಪ್ರಸ್ತುತ ತಮ್ಮ ತೆರೆಕಾಣಲು ಸಿದ್ಧವಾಗಿರುವ ಮೇರಿ ಕ್ರಿಸ್‌ಮಸ್ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿದ್ದಾರೆ. ಈ ವೇಳೆ ಅವರು ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಬಾಲಿವುಡ್‌ ನಟಿ ಕತ್ರೀನಾ ಕೈಫ್ ಪ್ರಸ್ತುತ ತಮ್ಮ ತೆರೆಕಾಣಲು ಸಿದ್ಧವಾಗಿರುವ ಮೇರಿ ಕ್ರಿಸ್‌ಮಸ್ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿದ್ದಾರೆ. ಈ ವೇಳೆ ಅವರು ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಶ್ರೀರಾಮ್ ರಾಘವನ್ ಅವರ ಮೇರಿ ಕ್ರಿಸ್‌ಮಸ್ ಸಿನಿಮಾದ ತಾರಾಗಣದ ಬಗ್ಗೆ ನಿರ್ದೇಶಕರು ಇವರಿಗೆ ಹೇಳಿದಾಗ, ಕತ್ರೀನಾ ಅವರು ಯಾರು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. 

ಮೇರಿ ಕ್ರಿಸ್ಮಸ್ ಸಿನಿಮಾದಲ್ಲಿ ಕತ್ರೀನಾ ಜೊತೆ ದಕ್ಷಿಣ ಭಾರತದ ಸೂಪರ್ ಸ್ಟಾರ್‌ ವಿಜಯ್ ಸೇತುಪತಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ತೊಡಗಿದೆ. ಶೂಟಿಂಗ್ ಸೇರಿದಂತೆ ತಂಡದೊಂದಿಗೆ ಕೆಲಸದ ಅನುಭವವನ್ನು ಚಿತ್ರತಂಡ ಸಂದರ್ಶನದಲ್ಲಿ ತೆರೆದಿಟ್ಟಿದೆ. ಇದೇ ವೇಳೆ ಟೈಗರ್ 3 ನಟಿ ಕತ್ರೀನಾ ಕೈಫ್ ಅವರು ವಿಜಯ್ ಸೇತುಪತಿ ಅವರನ್ನು ಅವರ 96 ಸಿನಿಮಾವನ್ನು ನೋಡಿದ್ದರೂ ಈ ಸಿನಿಮಾಕ್ಕಾಗಿ ಅವರನ್ನು ಮೊದಲ ಬಾರಿ ಭೇಟಿಯಾಗುವ ಮೊದಲು ಅವರ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. 

2ನೇ ವಿವಾಹ ವಾರ್ಷಿಕೋತ್ಸವ ಆಚರಿಸ್ತಿರುವ ಬಾಲಿವುಡ್ ಜೋಡಿಗೆ ಡಬ್ಬಲ್ ಖುಷಿ

ಬಾಲಿವುಡ್ ಹಂಗಾಮ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ ಕತ್ರೀನಾ ಕೈಫ್, ವಿಜಯ್ ಸೇತುಪತಿ ಅವರು ಮೇರಿ ಕ್ರಿಸ್ಮಸ್ ತಂಡದಲ್ಲಿ ಇದ್ದಾರೆ ಎಂದು ಹೇಳಿದಾಗ ಅವರಿಗೆ ಮೊದಲು ನನೆಪಾಗಿದ್ದು, 96 ಮೂವಿಯಂತೆ, ಆದರೆ ಸಂದರ್ಶನದಲ್ಲಿ ನಟಿ 96 ಬದಲು 83 ಎಂದು ಹೇಳಿ ಜೊತೆಯಲ್ಲಿದ್ದವರು ನಗುವಂತೆ ಮಾಡಿದ್ದಾರೆ. ಈ ವೇಳೆ ವಿಜಯ್ ಸೇತುಪತಿ ಹಾಗೂ ನಿರ್ದೇಶಕ ಅದು 83 ಅಲ್ಲ 96 ಎಂದು ಹೇಳಿ ಸರಿಪಡಿಸಿದ್ದಾರೆ. ಬಳಿಕ ಕ್ಷಮಿಸಿ 96 ಎಂದ ಕತ್ರೀನಾ ನಂತರ ವಿಜಯ್ ಸೇತುಪತಿ ಅವರ ಆ ಸಿನಿಮಾವನ್ನು ತಾನು ತುಂಬಾ ಇಷ್ಟಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. 

ಆ ಸಿನಿಮಾದಲ್ಲಿ ವಿಜಯ್ ಹಾಗೂ ತ್ರಿಶಾ ಅಭಿನಯ ತನಗಿನ್ನೂ ನೆನಪಿದೆ ಎಂದು ಹೇಳಿದ ಕತ್ರೀನಾ, ಆ ಇಬ್ಬರೂ ನಟರು ತುಂಬಾ ವಿಭಿನ್ನ ಹಾಗೂ ಅನನ್ಯವಾಗಿದ್ದರು ಆ ಸಿನಿಮಾದಿಂದ ನನಗೆ ಅವರ ಬಗ್ಗೆ ನನಗೆ ಗೊತ್ತಾಯಿತು ಎಂದು ಕತ್ರೀನಾ ಹೇಳಿದ್ದಾರೆ. 

ಬ್ರ್ಯಾಂಡ್ ಪ್ರಮೋಷನ್‌ಗೆ ಈ ನಟಿ ಕೇಳಿದಷ್ಟು ದುಡ್ಡು ಕೊಡುತ್ತೆ ಕಂಪನಿಗಳು!

ಇನ್ನು ಈ ಮೇರಿ ಕ್ರಿಸ್ಮಸ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಇದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದಾಗ ಮೊದಲು ತಾನು ಗೂಗಲ್‌ನಲ್ಲಿ ಅವರ ಬಗ್ಗೆ ಹುಡುಕಾಡಿದಾಗಿ ಹೇಳಿದರು. ಹಾಗೆಯೇ ಇನ್ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಮೊದಲ ಫೋಟೋದಲ್ಲಿ ಸಾಲ್ಟ್‌ ಪೆಪ್ಪರ್ ಹೇರ್ ಸ್ಟೈಲ್‌ನಲ್ಲಿ ಅವರ ಫೋಟೋ ಕಾಣಿಸಿತು. ನನಗದು ಇಷ್ಟವಾಯ್ತು ಎಂದು ಕತ್ರೀನಾ ಹೇಳಿದ್ದಾರೆ. ಇನ್ನು ಈ ಸಿನಿಮಾದ ಬಗ್ಗೆ ಕತ್ರೀನಾ ತನ್ನ ಸ್ನೇಹಿತರ ಗ್ಯಾಂಗ್‌ ಬಳಿ ಹೇಳಿದಾಗ ಚಿತ್ರತಂಡದಲ್ಲಿ ಯಾರು ಯಾರು ಇರಬಹುದು ಎಂಬುದರ ಬಗ್ಗೆ ಯೋಚಿಸಿ ಅವರು ಥ್ರಿಲ್ ಆಗಿದ್ದರು. ಇಬ್ಬರೂ ನಟರು ಒಟ್ಟಿಗೆ ಸೇರುವುದು ಸಿನಿಮಾದ ಕತೆ ವಿಶೇಷವಾಗಿದ್ದಾಗ ಮಾತ್ರ ಎಂದು ಅವರು ಹೇಳಿದ್ದರು.

ಇನ್ನು ವಿಜಯ್ ಸೇತುಪತಿ ಅವರು ನೆಗೆಟೀವ್ ರೋಲ್‌ನಲ್ಲೇ ಹೆಚ್ಚಾಗಿ ನಟಿಸಿದ್ದು, ಈ ಬಗ್ಗೆ ಮಾತನಾಡಿದ ಅವರು ನನಗೆ ಔಟ್ ಆಫ್ ಬಾಕ್ಸ್ ಥಿಂಕಿಂಗ್ ಮಾಡುವುದು ತುಂಬಾ ಇಷ್ಟ ವಿಲನ್ ಪಾತ್ರವನ್ನು ಮಾಡುವುದು ನನಗೆ ತುಂಬಾ ಸ್ವಾತಂತ್ರವಿದ್ದಂತೆ ಭಾಸವಾಗುತ್ತದೆ. ಅದರಲ್ಲಿ ನೀವು ಮನುಷ್ಯರನ್ನು ಕೊಲ್ಲುತ್ತೀರಿ ಕಿರುಕುಳ ನೀಡುತ್ತೀರಿ ಹಾಗೂ ಅದರಿಂದಲೇ ಖುಷಿ ಪಡುತ್ತೀರಿ ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲ ಎಂದು ಸೇತುಪತಿ ಹೇಳಿದ್ದಾರೆ. ಶ್ರೀರಾಮ್ ರಾಘವನ್ ನಿರ್ಮಾಣದ ಈ ಮೇರಿ ಕ್ರಿಸ್ಮಸ್ ಸಿನಿಮಾದಲ್ಲಿ ಕತ್ರೀನಾ ಕೈಫ್ ಹಾಗೂ ವಿಜಯ್ ಸೇತುಪತಿ, ತಿನ್ನು ರಾಜ್ ಆನಂದ್, ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರೀತಮ್ ಕನ್ನನ್ ರಾಧಿಕಾ ಅಪ್ಟೆ, ಅಶ್ವಿನಿ ಕಲ್ಸೇಕರ್ ಇದ್ದಾರೆ. ಜನವರಿ 13 ರಂದು ಈ ಸಿನಿಮಾ ಥಿಯೇಟರ್‌ನಲ್ಲಿ ತೆರೆ ಕಾಣಲಿದೆ.