Manisha Koirala: ನನ್ನ ಸೌತ್​ ಸಿನಿ ಪಯಣ ಹಾಳಾಗಿದ್ದೇ ರಜನೀಕಾಂತ್ ಚಿತ್ರದಿಂದ​

ಒಂದು ಕಾಲದಲ್ಲಿ ಬಹುಭಾಷಾ ನಟಿಯಾಗಿ ಬೇಡಿಕೆ ಹೊಂದಿದ್ದ ಮನಿಷಾ ಕೊಯಿರಾಲಾ ಅವರು ಈಗ ರಜನೀಕಾಂತ್​ ಅಭಿನಯದ ಚಿತ್ರವೊಂದರ ಕುರಿತು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಏನದು? 
 

Manisha Koirala says working in Rajinikanths Tamil film Baba ended her south career

1990-2000ರ ದಶಕದಲ್ಲಿ ಬಹು ಬೇಡಿಕೆಯ  ನಟಿಯರಲ್ಲಿ ಒಬ್ಬರಾಗಿದ್ದವರು ಮನಿಷಾ ಕೊಯಿರಾಲಾ (Manisha koirala). ನೇಪಾಳದ ಕಠ್ಮಂಡುವಿನಲ್ಲಿ ಜನಿಸಿದ ಇವರು ನೇಪಾಳದಲ್ಲಿ ರಾಜಕೀಯವಾಗಿ ಪ್ರಭಾವವಿರುವ `ಕೊಯಿರಾಲಾ' ಕುಟುಂಬಕ್ಕೆ ಸೇರಿದವರು.  1991 ರಲ್ಲಿ ಬಿಡುಗಡೆಯಾದ  `ಸೌದಾಗಾರ್' ಚಿತ್ರದಿಂದ ಸಿನಿಮಾರಂಗಕ್ಕೆ ಬಂದ ಇವರು  ಬಾಲಿವುಡ್​ನ ಖ್ಯಾತನಾಮ ನಟಿಯರ ಸಾಲಿಗೆ ಸೇರಿದರು. ಅತಿ ಶೀಘ್ರದಲ್ಲಿ ಬೇಡಿಕೆಯ ನಟಿ ಕೂಡ ಎನಿಸಿಕೊಂಡರು.  ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಕೆಲ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ `ಗೇಮ್' ಚಿತ್ರದಲ್ಲಿ ನಟಿಸಿದ್ದಾರೆ. ವರ್ಷ 52 ಆದರೂ ಇಂದಿಗೂ ಗ್ಲಾಮರಸ್​ ಲುಕ್​ ಉಳಿಸಿಕೊಂಡಿದ್ದಾರೆ ಈಕೆ. ಬಾಲಿವುಡ್​​ ಮಾತ್ರವಲ್ಲದೇ ಕಾಲಿವುಡ್​​, ಟಾಲಿವುಡ್​ನಲ್ಲಿಯೂ ಮೋಡಿ ಮಾಡಿದ್ದಾರೆ.  ‘ಬಾಂಬೆ’ (Bombay), ‘ಇಂಡಿಯನ್’‌, ‘ಮುದಲ್ವನ್’‌ ಸೇರಿ ಅನೇಕ ಬ್ಲಾಕ್‌ ಬಸ್ಟರ್‌ ಹಿಟ್‌ಗಳನ್ನು ನೀಡಿದ್ದಾರೆ.

ಇಂತಿಪ್ಪ ನಟಿ ಈಗ ನೀಡಿರುವ ಹೇಳಿಕೆಯೊಂದು ಬಹುದೊಡ್ಡ ಹಂಗಾಮಾ ಸೃಷ್ಟಿಸಿದೆ. ಏಕೆಂದರೆ ಇವರು ಶಾಕಿಂಗ್​ ಹೇಳಿದೆ ನೀಡಿದ್ದಾರೆ.  ತಮ್ಮ ಸಿನಿಮಾ ಕರಿಯರ್‌ ಹಾಳಾಗಿದ್ದೇ ಸೌತ್‌ನ ಸಿನಿಮಾವೊಂದರಿಂದ ಎಂಬ ಮಾತನ್ನು ಹೇಳಿಕೊಂಡಿರುವ ನಟಿ ಮನಿಷಾ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಅವರು ಮಾಡುತ್ತಿರುವ ಆರೋಪ ಎಂದರೆ ಅದು ಬಾಬಾ (Baba) ಸಿನಿಮಾ. 2002ರಲ್ಲಿ ಈ ಚಿತ್ರ ತೆರೆ ಕಂಡಿತ್ತು. ಇದರಲ್ಲಿ ರಜನಿಕಾಂತ್‌ ನಾಯಕನಾಗಿ ನಟಿಸಿದ್ದರು.  ಸುರೇಶ್‌ ಕೃಷ್ಣ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿತ್ತು. ರಜನಿಕಾಂತ್‌ಗೆ (Rajanikanth) ಮನಿಷಾ ಅವರು ನಾಯಕಿಯಾಗಿದ್ದರು. ಬಹಳ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ  ಬಾಕ್ಸ್‌ ಆಫೀಸ್‌ನಲ್ಲಿ (Box Office) ಹೀನಾಯವಾಗಿ ಸೋತಿತ್ತು.

Sushmita Sen: ಮ್ಯಾಸೀವ್​ ಹಾರ್ಟ್​ ಅಟ್ಯಾಕ್​ಗೆ ಒಳಗಾಗಿದ್ದ ನಟಿ ಸುಶ್ಮಿತಾ ಸೇನ್​ ಹೇಳಿದ್ದೇನು?
 
ಬಹಳ ಹಿಟ್​ ಸಿನಿಮಾ ಕೊಟ್ಟಿರುವಾಗ ಒಂದು ಚಿತ್ರ ಸೋತರೆ ಏನಂತೆ ಎಂದುಕೊಳ್ಳುವವರೇ ಹೆಚ್ಚು. ಬಹುತೇಕ ಎಲ್ಲಾ ನಟ-ನಟಿಯರೂ ಇಂಥದ್ದೊಂದು ಸಮಸ್ಯೆ ಎದುರಿಸಿಯೇ ಇರುತ್ತಾರೆ. ಹಲವು ನಟ-ನಟಿಯರ ಚಿತ್ರಗಳು ಫ್ಲಾಪ್​ ಆಗುತ್ತವೆ. ಕೆಲವೊಮ್ಮೆ ಸಕ್ಸಸ್​ ಕಾಣುತ್ತವೆ. ಹೀಗೆಯೇ ಚಿತ್ರ ಓಡುತ್ತದೆ ಎಂದು ಹೇಳುವುದೇ ಕಷ್ಟ. ಇದು ಎಲ್ಲರಿಗೂ ಗೊತ್ತಿದ್ದ ಸತ್ಯವೇ. ಆದರೆ ಮನಿಷಾ ಅವರ ಜೀವನದಲ್ಲಿ ಬಾಬಾ ಚಿತ್ರ ಬಹುದೊಡ್ಡ ಅನನುಕೂಲ ಸೃಷ್ಟಿ ಮಾಡಿತ್ತಂತೆ. ತಮ್ಮ ಇಡೀ ಸಿನಿ ಪಯಣಕ್ಕೆ ಇದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು ಎಂದಿದ್ದಾರೆ.  ‘ಬಾಬಾ’ ಚಿತ್ರ ನನಗೆ  ದೊಡ್ಡ ಪೆಟ್ಟು ನೀಡಿತು ಎಂದು ಸಂದರ್ಶನದಲ್ಲಿ (Interview) ನಟಿ ಹೇಳಿದ್ದಾರೆ.
 
'ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ತೆರೆಕಂಡ ನನ್ನ ಕೊನೆಯ ದೊಡ್ಡ ಸಿನಿಮಾ ‘ಬಾಬಾ’. ಆ ದಿನಗಳಲ್ಲಿ ಅದು ದಯನೀಯವಾಗಿ ಸೋತಿತು. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ಸೋತಾಗ, ನನಗೆ ಸೌತ್ ಚಿತ್ರಗಳಿಂದ ಆಫರ್‌ಗಳೇ ಇಲ್ಲದಂತಾದವು.ಇದು ನನ್ನ ಸಿನಿಮಾ  ಕರಿಯರ್​​ ಮೇಲೆ ಬಹಳ ದೊಡ್ಡ ಪೆಟ್ಟು ತಂದಿತು' ಎಂದು ಹೇಳಿದ್ದಾರೆ ಮನಿಷಾ. ಆದರೆ ಕುತೂಹಲದ ಸಂಗತಿ ಎಂದರೆ ಇದೇ ಚಿತ್ರ 20 ವರ್ಷಗಳ ಬಳಿಕ ಅಂದರೆ ಕಳೆದ ವರ್ಷ ಡಿಸೆಂಬರ್​ನಲ್ಲಿ ಮರುಬಿಡುಗಡೆಯಾಗಿತ್ತು. ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ  ಡಿಸೆಂಬರ್‌ 12ರಂದು  ಮತ್ತೊಮ್ಮೆ  ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆಲವೊಂದು  ತಾಂತ್ರಿಕ ಬದಲಾವಣೆ ಮಾಡಲಾಗಿತ್ತು. ಆಗ ಚಿತ್ರ  ಒಳ್ಳೆಯ ಗಳಿಕೆಯನ್ನೇ ಕಂಡಿತ್ತು. 

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!

ಈ ಬಗ್ಗೆಯೂ  ಮನೀಶಾ ಹೇಳಿದ್ದಾರೆ. ಇದು ಖುಷಿಯ ವಿಷಯವೇ. ಆದರೆ 20 ವರ್ಷಗಳ ಹಿಂದೆ ಈ ಚಿತ್ರದಿಂದ ನಾನು ಉಂಡ ನೋವು ಅಷ್ಟಿಷ್ಟಲ್ಲ. ಸೌತ್​ ಇಂಡಸ್ಟ್ರಿ (South Industry) ಬಾಗಿಲು ಇದೇ ಸಿನಿಮಾದ ಕಾರಣದಿಂದ ನನಗೆ ಮುಚ್ಚಿಹೋಯಿತು ಎಂದಿದ್ದಾರೆ. ಮನಿಷಾ ಅವರ ಈಚಿನ ಚಿತ್ರಗಳ ಕುರಿತು ಮಾತನಾಡುವುದಾದರೆ ಅವರು  ಶೆಹಜಾದಾ (Shehajada) ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅವರ ತಾಯಿಯಾಗಿ  ಕಾಣಿಸಿಕೊಂಡಿದ್ದರು. ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Latest Videos
Follow Us:
Download App:
  • android
  • ios