Asianet Suvarna News Asianet Suvarna News

ದೃಶ್ಯಂ 3ನಲ್ಲಿ ಮೋಹನ್‌ಲಾಲ್ ಜೊತೆ ಮಮ್ಮುಟ್ಟಿ: ಫ್ಯಾನ್ಸ್ ಥ್ರಿಲ್

  • ದೃಶ್ಯಂ 3 ಸಿನಿಮಾದಲ್ಲಿ ಮೋಹನ್‌ಲಾಲ್ ಜೊತೆ ಮಮ್ಮುಟ್ಟಿ ?
  • ಮೋಹನ್‌ಲಾಲ್‌ಗೆ ಜೊತೆಯಾಗಲಿದ್ದಾರಾ ಮೆಗಾಸ್ಟಾರ್ ?
  • ಸಿನಿಮಾ ಕುರಿತು ಅಪ್ಡೇಟ್ ಕೊಟ್ಟ ನಿರ್ದೇಶಕ ಜಿತು ಜೋಸೆಫ್
Mammootty To Join Mohanlals Drishyam 3 Here is What Jeethu Joseph said dpl
Author
Bangalore, First Published May 27, 2021, 9:44 AM IST

ಹಿಂದಿ ಸೇರಿದಂತೆ ಭಾರತದ 5 ಭಾಷೆಗಳಲ್ಲಿ ಯಶಸ್ವಿ ಸರಣಿ ಸಿನಿಮಾ ಎಂದರೆ ದೃಶ್ಯಂ. ಈಗ ಇದರ ಮೂರನೇ ಭಾಗ ಸೆಟ್ಟೇರುತ್ತಿದ್ದು, ಇದರಲ್ಲಿ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಜನಪ್ರಿಯ ನಟ-ನಿರ್ದೇಶಕ ಜೋಡಿಯಾಗಿರುವ ಮೋಹನ್ ಲಾಲ್ ಮತ್ತು ಜಿತು ಜೋಸೆಫ್ ಅವರ ದೃಶ್ಯಂ ಸರಣಿಯ ಮೂರನೇ ಸಿನಿಮಾ ಸೆಟ್ಟೇರಿದೆ. ದೃಶ್ಯಂ 3 ಎಂದು ಹೆಸರಿಸಲಾಗಿರುವ ಸಿನಿಮಾದಲ್ಲಿ ಮೆಗಾಸ್ಟಾರ್ ಮಮ್ಮುಟ್ಟಿ ಸಹ ನಟಿಸುತ್ತಿದ್ದಾರೆ ಎಂಬುದು ಲೇಟೆಸ್ಟ್ ಅಪ್ಡೇಟ್.

ದೃಶ್ಯಂ ನಿರ್ದೇಶಕನಿಗೆ ಬಾಹುಬಲಿ ಡೈರೆಕ್ಟರ್ ರಾಜಮೌಳಿಯ ದೀರ್ಫ ಪತ್ರ.

ದೃಶ್ಯಂ 3 ಸಿನಿಮಾಗಾಗಿ ನಟರಾದ ಮೋಹನ್‌ಲಾಲ್ ಮತ್ತು ಮೆಗಾಸ್ಟಾರ್ ಮಮ್ಮುಟ್ಟಿ ಜೊತೆಯಾಗುತ್ತಿದ್ದಾರೆ. ನಿರ್ದೇಶಕ ಜಿತು ಜೋಸೆಫ್ ಈ ಸ್ಟಾರ್ ನಟರನ್ನು ಜೊತೆಯಾಗಿಸುತ್ತಿದ್ದಾರೆ.

ಮೂರನೆಯ ಭಾಗದಲ್ಲಿ ಮಮ್ಮುಟ್ಟಿ ತನಿಖಾ ಅಧಿಕಾರಿಯ ಪಾತ್ರ ಮಾಡಬಹುದೆಂದು ಹೇಳಲಾಗುತ್ತಿದೆ. ದೃಶ್ಯಂ 3 ರಲ್ಲಿ ಮಮ್ಮುಟ್ಟಿ ಅವರ ಅತ್ಯಂತ ಪ್ರಸಿದ್ಧ ಪಾತ್ರವಾದ ಸಿಬಿಐ ಅಧಿಕಾರಿ ಸೇತುರಾಮ ಅಯ್ಯರ್ ಪಾತ್ರದಲ್ಲಿ ನಟಿಸಬಹುದೆಂದು ಹೇಳಲಾಗಿದೆ.

ದೃಶ್ಯಂ 2 ಸಿನಿಮಾದ ಮೋಹನ್‌ಲಾಲ್ ತುಂಟ ಮಗಳು ಇವಳೇ .

ದೃಶ್ಯಂ 2 ಫೆಬ್ರವರಿ ತಿಂಗಳಲ್ಲಿ ಓಟಿಟಿ ಮೂಲಕ ಬಿಡುಗಡೆಯಾಗಿತ್ತು. ಈಗ ಮೂರನೇ ಭಾಗ ಯಾವಾಗ ಸೆಟ್ಟೇರುತ್ತದೆ ಎನ್ನುವ ಕುತೂಹಲ ಮೂಡಿದೆ. ಈಗ ಕನ್ನಡದಲ್ಲೂ ಇದರ ಮುಂದುವರಿದ ಕತೆ ಯಾವಾಗ ತೆರೆ ಮೇಲೆ ಬರಲಿದೆ ಎಂಬ ಕುತೂಹಲ ಇದೆ.

ಮಲಯಾಳಂ ಹಿಟ್ ಸಿನಿಮಾ ದೃಶ್ಯಂ 2 ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದ ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಷನಲ್ ತನ್ನ ವಿರುದ್ಧ ದಾಖಲಾದ ಹಕ್ಕುಸ್ವಾಮ್ಯ ಮೊಕದ್ದಮೆ ಬಾಕಿ ಇತ್ಯರ್ಥ ಆಗುವವರೆಗೂ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿದೆ. ವಯೋಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಈ ಚಿತ್ರದ ಯಾವುದೇ ಸೀಕ್ವೆಲ್ ಹಿಂದಿ ಭಾಷೆಯಲ್ಲಿ ನಿರ್ಮಿಸದಂತೆ ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಷನಲ್‌ನಲ್ಲಿ ತಡೆಯಾಜ್ಞೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

Follow Us:
Download App:
  • android
  • ios