ಮಾಲಿವುಡ್‌ ಮಲರ್ ಸಾಯಿ ಪಲ್ಲವಿ 2016ರಲ್ಲಿಯೇ ಜಾರ್ಜಿಯಾದ ಬಿಲಿಸಿ ಸ್ಟೇಟ್  ವೈದ್ಯಕೀಯ ಕಾಲೇಜಿನಲ್ಲಿ ಪದವಿ ವ್ಯಾಸಂಗ  ಪೂರ್ಣಗೊಳ್ಳಿಸಿದ್ದಾರೆ. ನಂತರ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಕಾರಣ ಫುಲ್ ಬ್ಯುಸಿಯಾದರು. ವಿದೇಶಿ ಕಾಲೇಜಿನಲ್ಲಿ ಓದಿರುವ ಕಾರಣ ಭಾರತದಲ್ಲಿ ವೈದ್ಯಕೀಯ ಪ್ರಾಕ್ಟೀಸ್ ಮಾಡಲು ಅತ್ಯಗತ್ಯವಾದ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ (The Foreign Medical Graduate Examination or FMGE)  ಬರೆಯುವುದು ಅನಿವಾರ್ಯ. ಈ ಪರೀಕ್ಷೆ ಬರೆಯಲು ಪ್ರೇಮಂ ನಟಿ ತಿರುಚಿಯಲ್ಲಿರುವ ಎಂಎಎಂ ಎಂಜಿನೀಯರಿಂಗ್ ಕಾಲೇಜಿಗೆ ಆಗಮಿಸಿದ್ದರು. 'ಮನುಷ್ಯ ಸದಾ ತನ್ನ ದೇಹವನ್ನು ಗೌರವಿಸಬೇಕು ಹಾಗೂ ಅದರ ಆರೋಗ್ಯದ ಕಡೆ ಗಮನಿಸಬೇಕು,' ಎಂಬ ಬಗ್ಗೆ ಜಾಗೃತಿ ಮೂಡಿಸುವ ಸಾಯಿ ಪಲ್ಲವಿ, ವೈದ್ಯ ಪದವಿ ಪಡೆಯಲು ಕಾರಣವೇನೆಂದು ವಿವರಿಸುತ್ತಾರೆ. 

ಮಾಸ್ಕ್‌ ಧರಿಸಿ ಮುಖಕ್ಕೆ ಮುಸುಕು ಹಾಕಿಕೊಂಡಿದ್ದರೂ, ಸುತ್ತಲ್ಲಿದ್ದ ಜನರು ಸಾಯಿ ಪಲ್ಲವಿಯನ್ನು ಗುರುತಿಸಿದರು. ಪರೀಕ್ಷೆ ಕೊಠಡಿ  ಪ್ರವೇಶಿಸುವ ಮುನ್ನ ಹಾಲ್‌ ಟಿಕೇಟ್‌ ಚೆಕ್‌ ಮಾಡುವ ವೇಳೆ ನಟಿ ಸಾಯಿ ಪಲ್ಲವಿ ಎಂದು ಎಲ್ಲರಿಗೂ ಕನ್ಫರ್ಮ್ ಆಗಿದೆ.

ಪ್ರೇಮಂ ನಟಿಗೆ ಸೀರೆ ಮೇಲೆ ಸಿಕ್ಕಾಪಟ್ಟೆ ಲವ್ ಅನ್ನೋದಕ್ಕೆ ಈ ಪೋಟೋಗಳೇ ಸಾಕ್ಷಿ..!

ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಪೋಸ್ಟ್ :
ಸಾಯಿ ಪಲ್ಲವಿ ಜೊತೆ ಸೆಲ್ಫೀ ಕ್ಲಿಕಿಸಿಕೊಂಡ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಡೌನ್‌ ಟು ಅರ್ಥ್‌ ವ್ಯಕ್ತಿ ಎಂದು ಕಾಮೆಂಟ್‌ ಮಾಡಿದ್ದಾರೆ.  

ಸದ್ಯಕ್ಕೆ ಸಾಯಿ ಪಲ್ಲವಿ ಎರಡು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ರಾಣಾ ದಗ್ಗುಬಾಟಿ ಮತ್ತು ಪ್ರಿಯಾಮಣಿ ಜೊತೆ 'ವಿರಾಟಾ ಪರ್ವಂ' ಎಂಬ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಿರುವುದಿಂದ, ಹಾಲಿವುಡ್ ಸ್ಟಂಟ್ ನಿರ್ದೇಶಕ ಸ್ಟೀಫನ್ ರಿಚ್ಟರ್ ಜೊತೆ ಕೆಲಸ ಮಾಡಿ, ಅಗತ್ಯ ವಿದ್ಯೆಯನ್ನು ಸಾಯಿ ಪಲ್ಲವಿ ಕಲಿತಿದ್ದಾರೆ. ಇದರಲ್ಲಿ ಸಾಯಿ ಅವರದ್ದು ನಕ್ಸಲೈಟ್ ಪಾತ್ರವಂತೆ.

ಸಾಯಿ ಪಲ್ಲವಿ ದಿನವೂ ನಗುತ್ತಾ ಎದ್ದೆಳಲು ಕಾರಣವೇ ಇದಂತೆ!

'ಲವ್‌ ಸ್ಟೋರಿ' ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳೂ ಜೊತೆಯಾಗಿಯೇ ನಡೆಯುತ್ತಿದೆ. ನಾಗ ಚೈತನ್ಯ ಅವರೊಂದಿಗೆ ನಟಿಸಿದ ಈ ಚಿತ್ರ ಹಳ್ಳಿಯ ಯುವಕ, ಯುವತಿ ಪಟ್ಟಣಕ್ಕೆ ಬರುವ ಕಥಾ ಹಂದರ ಹೊಂದಿದ್ದು, ನಾಗ ಚೈತನ್ಯ ಈ ಚಿತ್ರದಲ್ಲಿ ತೆಲಂಗಾಣ ಶೈಲಿಯಲ್ಲಿ ಮಾತನಾಡಲು ವಿಶೇಷ ತರಬೇತಿ ಪಡೆದಿದ್ದರಂತೆ. ಎ.ಆರ್.ರೆಹಮಾನ್ ಸಂಗೀತ ಶಾಲೆಯ ಪವನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಏಪ್ರಿಲ್ 2ರಂದು ರೀಲಿಸ್ ಆಗಲು ಸಿದ್ಧಗೊಂಡಿದ್ದ ಈ ಚಿತ್ರ ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಮುಂದೆ ಹೋಗಿದೆ. ಬಾಕಿ ಉಳಿದ ಕೆಲವು ದೃಶ್ಯಗಳ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, 15 ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದೆ ಎಂದು ಚಿತ್ರತಂಡ ಹೇಳುತ್ತಿದೆ. ಚಿತ್ರ ಮಂದಿರದಲ್ಲಿಯೇ ಈ ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಿದ್ದು, ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ. 

ಸೂರಿಯಾ ಜೊತೆ ಸಾಯಿ ಪಲ್ಲವಿ ಕಡೆಯದಾಗಿ ತೆರೆ ಕಂಡ ತಮಿಳು ಚಿತ್ರ NGKಕೆಯಲ್ಲಿ ತೆರೆ ಹಂಚಿ ಕೊಂಡಿದ್ದು, ರಕುಲ್ ಪ್ರೀತ್ ಸಿಂಗ್ ಸಹ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಒಟ್ಟಿನಲ್ಲಿ ಪಕ್ಕದ್ಮನೆ ಹುಡುಗಿಯಂತೆ ಫೀಲ್ ಆಗುವ ಸಾಯಿಗೆ ವಿಭಿನ್ನ ಪಾತ್ರಗಳ ಆಫರ್‌ಗಳು ಒಂದಾದ ಮೇಲೊಂದು ಬರುತ್ತಿದ್ದು, ತಮ್ಮ ಆದರ್ಶಗಳನ್ನು ಬಿಡದೇ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸಾಯಿ ಪಲ್ಲವಿ ಸಾಮಾನ್ಯವಾಗಿ ಮುಖಕ್ಕೆ ಹೆಚ್ಚು ಮೇಕ್ ಅಪ್ ಮಾಡಿಕೊಳ್ಳದೇ ಹಾಗೂ ಅಶ್ಲೀಲ ಬಟ್ಟೆ ಹಾಗೂ ವಸ್ತ್ರಗಳಲ್ಲಿ ಕಾಣಿಸಿಕೊಳ್ಳಲು ಒಪ್ಪದ ಪ್ರತಿಭಾನ್ವಿತ ನಟಿ.