Asianet Suvarna News Asianet Suvarna News

ಎಷ್ಟು ತಬ್ಬಿಕೊಂಡ್ರೂ ಸಾಲಲ್ಲ; ಮಹೇಶ್ ಬಾಬು ಪುತ್ರಿ ಸಿತಾರಾ ಫೋಟೋ ವೈರಲ್

ಮಹೇಶ್ ಬಾಬು ತನ್ನ ಕುಟುಂಬದ ಜೊತೆ ವಿದೇಶಿ ಪ್ರವಾಸಕ್ಕೆ ಹಾರಿದ್ದಾರೆ. ಖಾಸಗಿ ಜೆಟ್‌ನಲ್ಲಿ ಹೋಗುತ್ತಿರುವ ಫೋಟೋಗಳು ವೈರಲ್ ಆಗಿದ್ದು ಮಗಳು ಸಿತಾರಾ ತಬ್ಬಿಕೊಂಡಿರುವ ಫೋಟೋ ಗಮನ ಸೆಳೆಯುತ್ತಿದೆ. 

Mahesh Babu daughter Sitara hugging him and their private jet travel pic viral sgk
Author
First Published Jul 23, 2023, 12:17 PM IST | Last Updated Jul 23, 2023, 12:17 PM IST

ಪಕ್ಕದ ಟಾಲಿವುಡ್‌ನಲ್ಲಿ ಸದ್ಯ ತೆಲುಗು ಸ್ಟಾರ್ ಮಹೇಶ್ ಬಾಬು ಮತ್ತು ನಮ್ರತಾ ಪುತ್ರಿಯದ್ದೆ ಸುದ್ದಿ. ಮಹೇಶ್ ಬಾಬು ಮುದ್ದಿನ ಮಗಳು ಸಿತಾರಾ ಘಟ್ಟಮನೇನಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲೇ ಸಿತಾರಾ ಸ್ಟಾರ್ ಆಗಿ ಮರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಿತಾರಾ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸಿತಾರಾ ಚಿಕ್ಕ ವಯಸ್ಸಿನಲ್ಲೇ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿತಾರಾ ಜ್ಯುವೆಲ್ಲರಿ ಜಾಹೀರಾತಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. ಸಿತಾರಾ ಜಾಹೀರಾತಿನ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಸಿತಾರಾ ಮತ್ತಷ್ಟು ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಅದು ಅವರ ತಂದೆ ಜೊತೆ ಇರುವ ಫೋಟೋಗಳು. 

ಸಿತಾರಾಗೆ ತಂದೆ ಮಹೇಶ್ ಬಾಬು ಎಂದರೆ ಸಿಕ್ಕಾಪಟ್ಟೆ ಇಷ್ಟ. ಮಹೇಶ್ ಬಾಬು ಅವರಿಗೂ ಮಗಳೆಂದರೆ ತುಂಬಾ ಪ್ರೀತಿ. ಮಹೇಶ್ ಬಾಬು ಎಷ್ಟೇ ಬ್ಯುಸಿ ಇದ್ದರೂ ತನ್ನ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಸದ್ಯ ಮಹೇಶ್ ಬಾಬು ತನ್ನ ಕುಟುಂಬದ ಜೊತೆ ವಿದೇಶಿ ಪ್ರವಾಸಕ್ಕೆ ಹಾರಿದ್ದಾರೆ. ಮಹೇಶ್ ಬಾಬು ಅವರ ನೆಚ್ಚಿನ ಸ್ಥಳಗಳಾದ ಪ್ಯಾರಿಸ್, ಸ್ವಿಟ್ಜರ್ಲೆಂಡ್‌ಗೆ ಹಾರಿದ್ದಾರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಆದರೆ ಖಾಸಗಿ ವಿಮಾನದಲ್ಲಿ ಹೋಗುತ್ತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. 

ನಮ್ರತಾ ಶಿರೋಡ್ಕರ್ ಖಾಸಗಿ ಜೆಟ್‌ನಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಹೇಶ್ ಬಾಬು ಪುತ್ರಿ ಸಿತಾರಾ ಮತ್ತು ಮಗ ಗೌತಮ್ ಜೊತೆ ಇರುವ ಸುಂದರ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಮಗಳು ಸಿತಾರಾ ಮಹೇಶ್ ಬಾಬು ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ತಂದೆ ಮಗಳ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಮೆರಿಕಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿತಾರಾ: ಮಗಳ ನೋಡಿ ಮಹೇಶ್ ಬಾಬು ಭಾವುಕ

 ಇತ್ತೀಚೆಗಷ್ಟೆ ಸಿತಾರಾ ಅವರ ಜ್ಯುವೆಲ್ಲರಿ ಜಾಹೀರಾತಿನ ಫೋಟೋಗಳು ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿರುವ ಟೈಮ್ಸ್ ಸ್ಕ್ರೇರ್‌ನಲ್ಲಿ ರಾರಾಜಿಸಿತ್ತು. ಚಿಕ್ಕ ವಯಸ್ಸಿನಲ್ಲೇ ಜ್ಯುವೆಲ್ಲರಿ ಬ್ರಾಂಡ್ ಒಂದರ ಪ್ರಚಾರ ರಾಯಭಾರಿ ಆಗಿರುವ ಸಿತಾರಾ ಸಾಧನೆಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿತ್ತು. ಮಹೇಶ್ ಬಾಬು ಭಾವಕರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಜಾಹೀರಾತಿನಲ್ಲಿ ನಟಿಸಲು ಸಿತಾರಾ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು.  ತನ್ನ ಮೊದಲ ಸಂಭಾವನೆಯನ್ನು ಸಿತಾರಾ ದಾನ ಮಾಡಿದ್ದಾರೆ. ಜಾಹೀರಾತಿನಿಂದ ಬಂದ ದೊಡ್ಡ ಮೊತ್ತದ ಹಣವನ್ನು ಚಾರಿಟಿಗೆ ನೀಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಮೊದಲ ಸಂಭಾವನೆ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ: ಫ್ಯಾನ್ಸ್ ಮೆಚ್ಚುಗೆ

ಮಹೇಶ್ ಬಾಬು ಸಿನಿಮಾ ಬಗ್ಗೆ

ಮಹೇಶ್ ಬಾಬು ಸದ್ಯ ಗುಂಟೂರು ಕಾರಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗುಂಟೂರು ಕಾರಂ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಈ ಮೊದಲು ಪೂಜಾ ಹೆಗ್ಡೆ ಸಿನಿಮಾದಿಂದ ಹೊರ ನಡೆದಿದ್ದರು. ಇದೀಗ ಈ ಸಿನಿಮಾದಿಂದ  ಛಾಯಾಗ್ರಾಹಕ ಪಿಎಸ್ ವಿನೋದ್ ಔಟ್ ಆಗಿದ್ದಾರೆ ಎನ್ನಲಾಗಿದೆ. ಛಾಯಾಗ್ರಾಹಕ ಪಿಎಸ್ ವಿನೋದ್ ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಡುವೆ ಅನೇಕ ವರ್ಷಗಳ ಒಡನಾಟವಿತ್ತು. ಆದರೀಗ ವಿನೋದ್ ತ್ರಿವಿಕ್ರಮ್ ಜೊತೆಗಿನ ಒಡನಾಟ ಕೊನೆಗೊಳಿಸಿದ್ದಾರೆ. 

ಗಂಟೂರು ಕಾರಂ ಸಿನಿಮಾದ ಸ್ಕ್ರಿಪ್ಟ್ ವಿಚಾರದಲ್ಲಿ ಅನೇಕ ಬದಲಾವಣೆ ಮಾಡಲಾಗಿದೆ. ಹಾಗಾಗಿಯೇ ಸಿನಿಮಾ ತಡವಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಪೂಜಾ ಹೆಗ್ಡೆ ಬಿಟ್ಟುಹೋದ ಜಾಗಕ್ಕೆ ಮೀನಾಕ್ಷಿ ಚೌಧರಿ ಎಂಟ್ರಿ ಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios