Asianet Suvarna News Asianet Suvarna News

ಮಹಾಭಾರತದ ಕೃಷ್ಣ ಪತ್ನಿಗೆ ಹೀಗೆಲ್ಲಾ ದೌರ್ಜನ್ಯ ಎಸಗಿದ್ರಾ? ಐಎಎಸ್​ ಅಧಿಕಾರಿ ಹೇಳಿದ್ದೇನು?

ಮಹಾಭಾರತದ ಕೃಷ್ಣ ಪತ್ನಿಗೆ ಹೀಗೆಲ್ಲಾ ದೌರ್ಜನ್ಯ ಎಸಗಿದ್ರಾ? ಐಎಎಸ್​ ಅಧಿಕಾರಿಯಾಗಿರುವ ಪತ್ನಿ ಸ್ಮಿತಾ  ಹೇಳಿದ್ದೇನು? 
 

Mahabharat Actor Nitish Bharadwajs IAS Wife Says He Is Playing Victim Never Even Paid Kids School Fee suc
Author
First Published Feb 20, 2024, 12:42 PM IST

ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಮಾಡುವ ಮೂಲಕ ಎಲ್ಲರ ಭಕ್ತಿ ಭಾವಕ್ಕೆ ಪಾತ್ರರಾಗಿದ್ದ, ಸಾಕ್ಷಾತ್‌ ಕೃಷ್ಣನಂತೆಯೇ ಹಲವರಿಂದ ಪೂಜೆಗೂ ಒಳಗಾಗಿದ್ದ ನಿತೀಶ್‌ ಭಾರಧ್ವಾಜ್‌ ಅವರು ತಮ್ಮ ಪತ್ನಿಯ ವಿರುದ್ಧ ಮಾನಸಿಕ ದೌರ್ಜನ್ಯದ ಕೇಸ್‌ ದಾಖಲಿಸಿದ್ದಾರೆ!  ಪತ್ನಿ ಸ್ಮಿತಾ  ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಅಂದಹಾಗೆ, ಸ್ಮಿತಾ ಅವರು ಐಎಎಸ್‌ ಅಧಿಕಾರಿಯಾಗಿದ್ದು, ಇವರ ವಿರುದ್ಧ ಮಾನಸಿಕ ದೌರ್ಜನ್ಯ ಕೇಸ್‌ ದಾಖಲಿಸಿದ್ದಾರೆ ಮಹಾಭಾರತದ ಕೃಷ್ಣ.  ಭೋಪಾಲದ ಪೊಲೀಸ್ ಆಯುಕ್ತರಿಗೆ ಪತ್ನಿ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಅಂದಹಾಗೆ ನಿತೀಶ್​ ಅವರಿಗೆ ಸ್ಮಿತಾ ಎರಡನೆಯ ಪತ್ನಿ.  1991ರಲ್ಲಿ ಮೊದಲು ಅವರು ಮೊನಿಶಾ ಪಾಟೀಲ್ ಎನ್ನುವವರ ಜೊತೆ ಮದ್ವೆಯಾಗಿದ್ದರು. ಆದರೆ  2005ರಲ್ಲಿ ಡಿವೋರ್ಸ್​ ಪಡೆದುಕೊಂಡರು.  ಇದಾದ ನಂತರ ಐಎಎಸ್​ ಅಧಿಕಾರಿಯಾಗಿರುವ ನಿತೀಶ್ ಸ್ಮಿತಾ ಅವರನ್ನು ವಿವಾಹವಾದರು. ಈ ಮದುವೆಯೂ ಮುರಿದು ಬಿದ್ದಿದೆ. ಇವರ ಡಿವೋರ್ಸ್​ ಕೇಸ್​,  2019ರಿಂದ  ಮುಂಬೈ ಕೌಟುಂಬಿಕ ಕೋರ್ಟ್​ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ ಎನ್ನಲಾಗಿದೆ. ಇದೀಗ ನಿತೀಶ್​ ಅವರು ದೌರ್ಜನ್ಯದ ಕೇಸ್​ ದಾಖಲಿಸಿದ್ದಾರೆ. 

 ನಿತೀಶ್‌ ಭಾರದ್ವಾಜ್‌ ಅವರು ಪತ್ನಿ ಸ್ಮಿತಾ ಅವರಿಂದ ಇದಾಗಲೇ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಇವರು ಅವಳಿ-ಜವಳಿ ಮಕ್ಕಳು. ಮಕ್ಕಳಿಗೆ ಈಗ ಹನ್ನೊಂದು ವರ್ಷ. ಈ ಹಂತದಲ್ಲಿ, ಪತ್ನಿ ವಿರುದ್ಧ ದೂರು ದಾಖಲಿಸಲು ಕಾರಣ ಏನೆಂದರೆ, ಹೆಣ್ಣು ಮಕ್ಕಳನ್ನು ಭೇಟಿ ಮಾಡಲು ಕೊಡುತ್ತಿಲ್ಲ ಎನ್ನುವುದು ಅವರ ಆರೋಪ. ಇದರ ಜೊತೆಗೆ, ಪತ್ನಿ  ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ದೂರಿನಲ್ಲಿ ನಿತೀಶ್‌ ಆರೋಪಿಸಿದ್ದಾರೆ. ಅದರೆ, ಇದೀಗ ಪತಿಯ ವಿರುದ್ಧ  ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು, ಕ್ರೀಡೆ ಮತ್ತು ಯುವ ವ್ಯವಹಾರಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಸ್ಮಿತಾ ಅವರೇ ಪ್ರತ್ಯಾರೋಪ ಮಾಡಿದ್ದಾರೆ. ಫ್ರೀ ಪ್ರೆಸ್ ಜರ್ನಲ್‌ನೊಂದಿಗೆ ಮಾತನಾಡಿರುವ ಅವರು,   ತಮ್ಮ ಪತಿ ಕಿರುಕುಳದ ಆರೋಪಗಳನ್ನು 'ಸುಳ್ಳು, ದುರುದ್ದೇಶಪೂರಿತ ಮತ್ತು ಯಾವುದೇ ಸತ್ಯಗಳಿಲ್ಲದ' ಎಂದು ಹೇಳಿದ್ದಾರೆ. 

ಇನ್ನೇನು 50 ಆಗ್ತಿದೆ, ಈಗ ಸುಂದರಿಯ ವರಿಸಿದ ಮತ್ತೊಬ್ಬ ಖಾನ್ ನಟ, ಯುವಕರಲ್ಲಿ ತಲ್ಲಣ!
  .
"ನಾನು ನನ್ನ ಕೆಲಸವನ್ನು ಬಿಡಬೇಕೆಂದು ನಿತೀಶ್ ಬಯಸಿದ್ದರು, ನಾನು ಒಪ್ಪದಿದ್ದಾಗ, ಅವರು ವಿಚ್ಛೇದನವನ್ನು ಕೇಳಿದ್ದರು. ಆಗ ನಾನು ವಿಚ್ಛೇದನಕ್ಕೆ ಸಿದ್ಧವಾದೆ. ಆಗ ಇಬ್ಬರೂ ಒಪ್ಪಿಕೊಂಡು ಡಿವೋರ್ಸ್​ ಪಡೆಯಬೇಕು ಎಂದು ಹಣ ನೀಡಬೇಕು ಎಂದು ತಾಕೀತು ಮಾಡಿದರು. ಆದರೆ ಅದನ್ನು ನಾನು ನಿರಾಕರಿಸಿದೆ. ಇದಾದ ನಂತರ ನನ್ನ ಮೇಲೆ ದೌರ್ಜನ್ಯ ಎಸಗಲು ಶುರು ಮಾಡಿದರು. ಅಷ್ಟೇ ಅಲ್ಲದೇ,  ಮಕ್ಕಳ ಶಾಲಾ ಶುಲ್ಕವನ್ನೂ ಪಾವತಿಸಿಲ್ಲ ಎಂದಿದ್ದಾರೆ. ಮಕ್ಕಳು ಹುಟ್ಟಿದಾಗಿನಿಂದಲೂ ಮಕ್ಕಳಿಗಾಗಿ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ. ಇದೀಗ ಮಕ್ಕಳ ಹಕ್ಕು ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಅಂದಹಾಗೆ, ನಿತೀಶ್ ಹಾಗೂ ಐಎಎಸ್ ಅಧಿಕಾರಿ ಸ್ಮಿತಾ ಪರಸ್ಪರ ಪ್ರೀತಿಸಿ 2009 ರಲ್ಲಿ ಮಧ್ಯ ಪ್ರದೇಶದಲ್ಲಿ   ವಿವಾಹವಾಗಿದ್ದರು. 12 ವರ್ಷಗಳ ದಾಂಪತ್ಯದ ಬಳಿಕ 2019ರಲ್ಲಿ ಈ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, 2022ರಲ್ಲಿ ಇವರಿಗೆ ವಿಚ್ಛೇದನ ದೊರಕಿತು. ಡಿವೋರ್ಸ್‌ ಬಳಿಕ ತಮ್ಮ ಮಕ್ಕಳ ಜೊತೆ ಸ್ಮಿತಾ ಅವರು  ಇಂದೋರ್‌ನಲ್ಲಿ  ನೆಲೆಸಿದ್ದಾರೆ. ಇದೀಗ ನಿತೀಶ್ ಭಾರಧ್ವಜ್​ರ ದೂರಿನ ಪ್ರಕಾರ, ತಮ್ಮ ಪತ್ನಿ ಸ್ಮಿತಾ ತಮ್ಮ ಮಕ್ಕಳನ್ನು ಭೇಟಿ ಆಗಲು ಅವಕಾಶ ನೀಡುತ್ತಿಲ್ಲವಂತೆ.

ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ಸ್ಯಾಂಡಲ್​ವುಡ್​ ನಟನ ವಿರುದ್ಧ ಯುವತಿ ದೂರು

Follow Us:
Download App:
  • android
  • ios