ಬೆಂಗಳೂರು (ಮಾ. 23): ವಿವೇಕ್ ಒಬೆರಾಯ್ ಅಭಿನಯದಲ್ಲಿ ಮೂಡಿ ಬರುತ್ತಿರುವ ’ಪಿಎಂ ನರೇಂದ್ರ ಮೋದಿ ಬಯೋಪಿಕ್ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಒಂದಲ್ಲಾ ಒಂದು ವಿವಾದವನ್ನು ಸುತ್ತಿಕೊಳ್ಳುತ್ತಲೇ ಇದೆ. 

‘ಪಿಎಂ ಮೋದಿ’ ಟ್ರೈಲರ್ ಚೀಪ್ ಟ್ರಿಕ್ ಎಂದ ನಟ!

ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಈ ಚಿತ್ರಕ್ಕೆ ಹಾಡು ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಜಾವೇದ್ ಪ್ರತಿಕ್ರಿಯೆ ಕೊಟ್ಟಿದ್ದು ನಾನು ಬರೆದಿಲ್ಲ ಎಂದಿದ್ದಾರೆ. ‘ಪೋಸ್ಟರ್ ನಲ್ಲಿ ನನ್ನ ಹೆಸರು ನೋಡಿ ಶಾಕ್ ಆಯ್ತು. ನಾನು ಈ ಚಿತ್ರಕ್ಕೆ ಹಾಡು ಬರೆದಿಲ್ಲ’ ಎಂದಿದ್ದಾರೆ. 

 

ಇದು ಇಷ್ಟಕ್ಕೆ ಮುಗಿದಿಲ್ಲ. ಗೀತ ರಚನೆಕಾರ ಸಮೀರ್ ಅವರ ಹೆಸರು ಕೇಳಿ ಬಂದಿದೆ. ಅವರೂ ಕೂಡಾ ಇದನ್ನು ಅಲ್ಲಗಳೆದಿದ್ದಾರೆ. ನಾನು ಕೂಡಾ ಈ ಚಿತ್ರಕ್ಕೆ ಹಾಡು ಬರೆದಿಲ್ಲ. ನನಗ್ಯಾಕೆ ಕ್ರೆಡಿಟ್ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಸಮೀರ್ ಹೇಳಿದ್ದಾರೆ.