ನವದೆಹಲಿ (ಮಾ. 31):  ಲಾಕ್‌ಡೌನ್‌ನಿಂದಾಗಿ ಕಳೆದ 10 ದಿನಗಳಿಂದ ದೇಶದಲ್ಲಿ ಒಟಿಟಿ (ಅಮೆಜಾನ್‌, ನೆಟ್‌ಫ್ಲಿಕ್ಸ್‌) ಫ್ಲಾಟ್‌ಫಾರಂಗಳ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಶೇ.20 ರಷ್ಟು ಹೆಚ್ಚಳವಾಗಿದೆ.

ಮಕ್ಕಳ ಇಷ್ಟದ ಪ್ರಸಿದ್ಧ ಶಕ್ತಿಮಾನ್‌ ಧಾರಾವಾಹಿ ಮತ್ತೆ ಪ್ರಸಾರ!

ಇದರಲ್ಲಿ ದೆಹಲಿ, ಮುಂಬೈ ಹಾಗೂ ಬೆಂಗಳೂರಿಗರ ಕೊಡುಗೆ ಅಧಿಕ ಎಂದು ತಿಳಿದು ಬಂದಿದೆ. ಜನ ಮನೆಯಲ್ಲೇ ಉಳಿದುಕೊಂಡಿದ್ದರಿಂದ ಮೊಬೈಲ್‌ನಲ್ಲಿಯೇ ಸಿನಿಮಾ, ರಿಯಾಲಿಟಿ ಶೋಗಳನ್ನು ವೀಕ್ಷಿಸುತ್ತಿದ್ದಾರೆ.

ಬೆಳಿಗ್ಗೆ 8-11.30ರ ವರೆಗೆ ಮಧ್ಯಾಹ್ನ 1-3 ಗಂಟೆ ವರೆಗೆ ಹಾಗೂ ಸಂಜೆ ಆರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೆ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೊಸ ಬಳಕೆದಾದರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ.