ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಪ್ರಿಯದರ್ಶನ್ ಅವರ ಭೂಲ್ ಬುಲಯಾ ಸಿನಿಮಾದ ಥ್ರೋ ಬ್ಯಾಕ್ ಈ ಸಿನಿಮಾ ಎಂದು ಹೇಳಲಾಗ್ತಿದೆ. ಅಕ್ಷಯ್ ಜೊತೆ ಕೈರಾ ಅಡ್ವಾಣಿ, ತುಷಾರ್ ಕಪೂರ್, ಶರದ್ ಕೆಲ್ಕಾರ್, ತರುಣ್ ಅರೋರಾ ಹಾಗೂ ಅಶ್ವಿನಿ ಕಲ್ಸೇಕರ್ ನಟಿಸಿದ್ದಾರೆ.

ರಾಘವ ಲಾರೆನ್ಸ್ ನಿರ್ದೇಶನದ ತಮಿಳಿನ ಮುನಿ 2: ಕಾಂಚನಾ ಸಿನಿಮಾದ ರಿಮೇಕ್ ಆಗಿದೆ ಲಕ್ಷ್ಮೀ ಬಾಂಬ್. ಹಿಂದಿಯಲ್ಲೂ ಅವರೇ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ದೇಹಕ್ಕೆ ಹೆಣ್ಣಿನ ಆತ್ಮವೊಂದು ಸೇರಿಕೊಳ್ಳುತ್ತದೆ.

ಗೂಢಾಚಾರಿ ಪಾತ್ರದಲ್ಲಿ ಅಕ್ಷಯ್ ಕುಮಾರ್: ಬೆಲ್‌ಬಾಟಂ ಟೀಸರ್ ರಿಲೀಸ್

ಸಿನಿಮಾದಲ್ಲಿ ಕಾಮೆಡಿ ಮತ್ತು ಹಾರರ್ ಎರಡನ್ನೂ ಬ್ಯಾಲೆನ್ಸ್ ಮಾಡಲಾಗಿದೆ. ನವೆಂಬರ್ 9ರಿಂದ ಸಿನಿಮಾ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.  ಅಕ್ಷಯ್ ಕುಮಾರ್ ಈ ಸಿನಿಮಾ ಮಾತ್ರವಲ್ಲದೆ ಸದ್ಯ ಬೆಲ್‌ಬಾಟಂ ಸಿನಿಮಾಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ತಂಡ ಚಿತ್ರೀಕರಣ ಪೂರ್ತಿಗೊಳಿಸಿತ್ತು.