ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬೆಲ್‌ಬಾಟಂ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಯುಕೆಯಲ್ಲಿ ಸಿನಿಮಾ ಶೂಟಿಂಗ್ ಮುಕ್ತಾಯವಾದ ಬೆನ್ನಲ್ಲೇ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ರಂಜಿತ್ ಎಂ ತಿವಾರಿ ನಿರ್ದೇಶನದ ಸಿನಿಮಾದಲ್ಲಿ ಹುಮಾ ಖುರೇಷಿ, ಲಾರಾ ದತ್ತಾ, ವಾಣಿ ಕಪೂರ್ ಅಭಿನಯಿಸಿದ್ದಾರೆ.

ನಿಜ ಘಟನೆಗಳ ಆಧರಿಸಿದ ಸಿನಿಮಾದಲ್ಲಿ ಅಕ್ಷಯ್ ಗೂಢಾಚಾರಿಯ ಪಾತ್ರ ಮಾಡಿದ್ದಾರೆ. ರಾ ಏಜೆಂಟ್ ಆಗಿ ಕಾಣಿಸ್ಕೊಂಡಿರೋ ನಟ ಅಕ್ಷಯ್ ಪಾತ್ರ ಕುತೂಹಲ ಹೆಚ್ಚಿಸುವಂತಿದೆ.

ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಕಾಜಲ್ ಅಗರ್ವಾಲ್: ಡೇಟ್ ಫಿಕ್ಸ್

ಕೊರೋನಾ ಮಧ್ಯೆಯೇ ಯುಕೆಗೆ ತೆರಳಿದ ಚಿತ್ರತಂಡ ಅಲ್ಲಿ ಶೂಟಿಂಗ್ ಮುಗಿಸಿದೆ. ಏರ್ ಬೇಸ್‌ನಲ್ಲಿ ಸೂಟ್ ಕೇಸ್ ಹಿಡಿದು ನಡೆಯುವ ಅಕ್ಷಯ್ ಲುಕ್ ಡಿಫರೆಂಟ್ ಆಗಿ ಮೂಡಿ ಬಂದಿದೆ.

ಇದೊಂದು ಟೀಂ ವರ್ಕ್ ಆಗಿತ್ತು. ಕೊರೋನಾ ಮಧ್ಯೆ ಕೆಲಸ ಮಾಡಿ, ಈ ರೀತಿಯಾಗಿ ಕೆಲಸ ಮಾಡಿದ ಹೊಸ ಅನುಭವ ಸಿಕ್ಕಿದೆ ಎಂದಿದ್ದಾರೆ ಅಕ್ಷಯ್. ವಾಶು ಭಗ್ನಾನಿ, ಜಾಕಿ ಭಗ್ನಾನಿ, ದೀಪ್ಶಿಕಾ ದೇಶ್‌ಮುಖ್ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ಮುಂದಿನ ವರ್ಷ ಎಪ್ರಿಲ್‌ನಲ್ಲಿ ರಿಲೀಸ್ ಆಗಲಿದೆ