2013ರಲ್ಲಿ ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ 'ಚೆನ್ನೈ ಎಕ್ಸ್‌ಪ್ರೆಸ್‌' ಸಿನಿಮಾ ದೊಡ್ಡ ಸುದ್ದಿ ಮಾಡಿತ್ತು. ಒಂದು ಶಾರುಖ್‌- ದೀಪಿಕಾ ಕಾಂಬಿನೇಷನ್‌ಗೆ. ಆದರೆ, ಮತ್ತೊಂದು ಕಾರಣ ಚಿತ್ರದ ಹೆಸರು ಚೆನ್ನೈ ಆಗಿದ್ದು, ಲುಂಗಿ ಡ್ಯಾನ್ಸ್‌ನಲ್ಲಿ ರಜನಿಕಾಂತ್ ಹೆಸರು ಇಲ್ಲದ ಕಾರಣ. ವಾದ-ವಿವಾದಗಳ ನಡುವೆಯೂ ಸಿನಿಮಾ ಹಿಟ್ ಆಯ್ತು. ಆದರೆ ನಯನತಾರಾ ವಿಚಾರ ಮಾತ್ರ ಈಗ ಕೇಳಿ ಬರುತ್ತಿದೆ....

ನಯನತಾರಾನೇ ನನ್ನ ಮುಂದಿನ ಮಕ್ಕಳ ತಾಯಿ; ನಿರ್ದೇಶಕನ ಪೋಟೋದಿಂದ ಫುಲ್‌ ಶಾಕ್‌!

ದೀಪಿಕಾ-ನಯನತಾರಾ:
ಚಿತ್ರದ ನಾಯಕಿಯಾಗಿ ದೀಪಿಕಾ ಆಯ್ಕೆಯಾಗಿದ್ದು, ವಿಶೇಷ ಹಾಡಿನಲ್ಲಿ ಅಭಿನಯಿಸುವುದಕ್ಕೆ ನಯನತಾರಾಗೆ ಆಫರ್ ಮಾಡಲಾಗಿತ್ತು. ಇಡೀ ಸಾಂಗ್‌ನಲ್ಲಿ ಶಾರುಖ್‌ ಜೊತೆ ತಪ್ಪಾಂಗುಚ್ಚಿ ಸ್ಟೆಪ್‌ ಹಾಕಬೇಕಿತ್ತು. ಶಾರುಖ್‌ ಜೊತೆ ಹಿಟ್ ಆಗುವ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಸಣ್ಣ ಆಫರ್‌ ಸಿಕ್ಕರೂ ಸಾಕೆಂದು ಅನೇಕ ನಟಿಯರು ಕಾಯುತ್ತಿರುತ್ತಾರೆ.  ಅಂಥದ್ರಲ್ಲಿ ನಯನತಾರಾ ನಿರಾಕರಿಸಿರುವುದು ಅಚ್ಚರಿಯ ವಿಚಾರವೇ ಹೌದು!

ಪ್ರಭುದೇವ್ ಇದ್ದರಂತೆ:
'ಚೆನ್ನೈ ಎಕ್ಸ್‌ಪ್ರೆಸ್‌'ಚಿತ್ರದ ವಿಶೇಷ ಹಾಡನ್ನು ಪ್ರಭುದೇವ್‌ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ, ಎಂಬ ಕಾರಣಕ್ಕೆ ನಯನತಾರಾ ರೆಜೆಕ್ಟ್‌ ಮಾಡಿದ್ದರಂತೆ. ನಯನತಾರಾ ಒಪ್ಪದ ಕಾರಣ ಬಹುಭಾಷಾ ನಟಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ.  '1234 ಸ್ಟೆಪ್‌ ಆನ್‌ ದಿ ಡ್ಯಾನ್ಸ್‌ ಫ್ಲೂರ್‌' ಹಾಡಿನಲ್ಲಿ ಹೆಚ್ಚೆ ಹಾಕುವ ಮೂಲಕ ಪ್ರಿಯಾಮಣಿ ಬಾಲಿವುಡ್‌ಗೆ ಎಂಟ್ರಿ ನೀಡುವಂತಾಯಿತು. 

ನಯನತಾರಾ ಮತ್ತು ಪ್ರಭುದೇವ ಹಲವು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ನಿರ್ಧರಿಸಿದ್ದರು. ಆದರೆ ಕಾರಣಾಂತರಗಳಿಂದ ಸಂಬಂಧ ಮುರಿದು ಬಿತ್ತು. ಅಲ್ಲಿಂದ ನಯನತಾರಾ ಮತ್ತು ಪ್ರಭುದೇವ್ ಯಾವ ಸಿನಿಮಾವನ್ನೂ ಒಟ್ಟಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 'ದಕ್ಷಿಣ ಭಾರತದ ಬೇಡಿಕೆಯ ನಟಿ ಸಿನಿಮಾ ನಿರಾಕರಿಸಿರುವುದು ಅಚ್ಚರಿ ಏನಿಲ್ಲ' ಎಂದು ಹೇಳಿದ್ದಾರೆ.