ಕಾಲಿವುಡ್ ನಿರ್ದೇಶಕ ಹರಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಶೂಟಿಂಗ್ ಸೆಟ್‌ನಲ್ಲಿ ಕೊರೋನಾ ಸೋಂಕು ತಲುಗಿದ ವ್ಯಕ್ತಿ ಸಂಪರ್ಕವೇ ಎಂದು ಪ್ರಶ್ನೆ ಮಾಡುತ್ತಿರುವ ಅಭಿಮಾನಿಗಳು...
ಕಾಲಿವುಡ್ ಬಹುನಿರೀಕ್ಷಿತ AV33 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಹರಿ ಅವರಿಗೆ ಎರಡು, ಮೂರು ದಿನಗಳಿಂದ ತೀವ್ರ ಜ್ವರ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಗ್‌ಬಾಸ್ 14 ಟಾಪ್ 3 ಫೈನಲಿಸ್ಟ್ ನಿಕ್ಕಿ ತಂಬೋಲಿಗೆ ಕೊರೋನಾ
ಕೆಲವು ದಿನಗಳ ಹಿಂದೆ AV33 ಶೂಟಿಂಗ್ ಶೆಟ್‌ನಲ್ಲಿ ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಿತ್ರೀಕರಣದ ವೇಳೆ ಅವರ ಸಂಪರ್ಕದಲ್ಲಿದ್ದ ಹರಿ ಅವರಿಗೂ ಕೊರೋನಾ ಇರಬಹುದು ಎಂದು ಟೆಸ್ಟ್ ಮಾಡಲಾಗಿತ್ತು. ಕೋವಿಡ್19 ನೆಗೆಟಿವ್ ಎಂಬ ವರದಿ ಬಂದಿದೆ. ನಿರ್ದೇಶಕರಿಗೆ ಹೈ ಫೀವರ್ ಹಾಗೂ ಕೆಮ್ಮಿದೆ. ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
![]()
ಸಿಂಗಂ, ಸಿಂಗಂ 2, ಅರುಳ್,ಅಯ್ಯ, ಸಾಮಿ 2 ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಹರಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. AV33 ಚಿತ್ರದಲ್ಲಿ ಪ್ರಿಯಾ ಭವಾನಿ, ಪ್ರಕಾಶ್ ರಾಜ್, ರಾಧಿಕಾ ಶರತ್‌ಕುಮಾರ್, ಗರುಡ ರಾಮ್ ಹಾಗೂ ಯೋಗಿ ಬಾಬು ಅಭಿನಯಿಸುತ್ತಿದ್ದಾರೆ.
