Asianet Suvarna News Asianet Suvarna News

Maanadu Simbu: ನೀವಿಲ್ಲದೇ ನಾನಿಲ್ಲ ಎಂದು ಟ್ವೀಟ್ ಮಾಡಿದ ಕಾಲಿವುಡ್​ ನಟ

ವೈರಲ್ ಸೋಂಕಿನಿಂದ ಬಳಲುತ್ತಿದ್ದ ಕಾಲಿವುಡ್​ ನಟ ಸಿಂಬು ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ತಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

kollywood actor simbu thanks the fans who prayed for his recovery gvd
Author
Bangalore, First Published Dec 13, 2021, 8:54 PM IST

ವೈರಲ್ ಸೋಂಕಿನಿಂದ ಬಳಲುತ್ತಿದ್ದ ಕಾಲಿವುಡ್​ ನಟ ಸಿಂಬು (Simbu) (ಸಿಲಂಬರಸನ್​) ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ತಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಡಿಸೆಂಬರ್ 11ರಂದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಆಸ್ಪತ್ರೆಗೆ ಅನಾರೋಗ್ಯ ಹಿನ್ನಲೆಯಲ್ಲಿ ಸಿಂಬು ಅವರನ್ನು ದಾಖಲಿಸಲಾಗಿತ್ತು. ಕೋವಿಡ್​ (CoronaVirus) ಕಾಣಿಸಿಕೊಂಡಿರಬಹುದು ಎಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವರದಿ ನೆಗೆಟಿವ್ (Negative)​ ಬಂದಿತ್ತು. ಆ ಬಳಿಕ ಅವರಿಗೆ ವೈರಲ್​ ಇನ್​ಫೆಕ್ಷನ್​ ಆಗಿದೆ ಹಾಗೂ ಎಂದು ವೈದ್ಯರು ತಿಳಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.

ಈ ಬಗ್ಗೆ ಟ್ವೀಟ್​ (Tweet) ಮಾಡಿರುವ ನಟ ಸಿಂಬು ಅವರು, ನಾನೀಗ ಮನೆಗೆ ಬಂದಿದ್ದೇನೆ. 'ನೀವಿಲ್ಲದೇ ನಾನಿಲ್ಲ' ಎಂದು ಹೃದಯಸ್ಪರ್ಶಿ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನಂತರದಲ್ಲಿ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಸಿಂಬು ಅವರು ತಮ್ಮ ಮುಂಬರುವ ಚಿತ್ರ 'ವೆಂದು ತನಿಂಧತು ಕಾಡು' (Vendhu Thanindhathu Kaadu) ಚಿತ್ರೀಕರಣದಲ್ಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ಸಿಂಬು ಅಭಿನಯದ 'ವೆಂದು ತನಿಂಧತು ಕಾಡು' ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಗೌತಮ್ ವಾಸುದೇವ್ ಮೆನನ್ (Gautham Vasudev Menon) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್ ಥ್ರಿಲ್ಲರ್ ಹೊಂದಿರುವ ಈ ಚಿತ್ರವು ಇಶಾರಿ ಕೆ ಗಣೇಶ್ ಮತ್ತು ಅಶ್ವಿನ್ ಕುಮಾರ್ ಅವರು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ (A.R.Rahman) ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Maanadu:ವೇದಿಕೆ ಮೇಲೆ ಗಳ-ಗಳನೆ ಅತ್ತ ನಟ ಸಿಂಬು!

ಸಿಂಬು ಪಾಲಿಟಿಕಲ್ ಫಿಕ್ಷನ್ 'ಮಾನಾಡು' (Maanaadu) ಚಿತ್ರದಲ್ಲಿ ಮುಸ್ಲಿಂ ಯುವಕ ಅಬ್ದುಲ್ ಖಾಲಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ 'ಮಾನಾಡು' ಪ್ರೆಸ್‌ಮೀಟ್‌ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ನನ್ನನ್ನು ನೋಡಿಕೊಳ್ಳಬೇಕು. ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವೆ ನೀವೇ ನನ್ನನ್ನು ಬೆಳಸಬೇಕು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಂಬು ಅಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸಿಂಬು ವೃತ್ತಿ ಜೀವನದಲ್ಲಿ ಇಂತಹ ಅದ್ಭುತ ಸಿನಿಮಾ ಮಾಡಿರಲಿಲ್ಲ ಖಂಡಿತ  100 ದಿನಗಳು ಉಳಿಯುತ್ತದೆ ಎಂದು ನೆಟ್ಟಿಗರು ಟ್ವಿಟರ್‌ನಲ್ಲಿ (Twitter) ವಿಮರ್ಶೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬಂಡವಾಳ ಹಾಕಿದ್ದಾರೆ.

Maanadu ನಟ ಸಿಂಬುಗೆ ವೈರಲ್ ಸೋಂಕು: ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು

ಇನ್ನು ನಿರ್ದೇಶಕ ವೆಂಕಟ್ ಪ್ರಭು (Venkat Prabhu) 'ಮಾನಾಡು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್‌ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿ, ಸಿನಿರಸಿಕರಿಂದ ಹಾಗೂ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಯುವನ್ ಶಂಕರ್ ರಾಜ (Yuvan Shankar Raja) ಸಂಗೀತವಿರುವ ಈ ಚಿತ್ರದಲ್ಲಿ ಭಾರತಿರಾಜ, ಕರುಣಾಕರನ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ಪ್ರೇಮ್ಗಿ ಅಮರನ್, ಸೇರಿದಂತೆ ಪೊಲೀಸ್ ಪಾತ್ರದಲ್ಲಿ ಎಸ್‌ಜಿ ಸೂರ್ಯ ನಟಿಸಿದ್ದಾರೆ. 'ಮಾನಾಡು' ಯಶಸ್ಸಿನಲ್ಲಿರುವ ಸಿಂಬು ಮತ್ತು ನಿರ್ದೇಶಕ ವೆಂಕಟ್ ಪ್ರಭು ಕಾಂಬಿನೇಷನ್‌ನಲ್ಲಿ 'ಮಾನಾಡು 2' ಚಿತ್ರವನ್ನು ಶುರು ಮಾಡುತ್ತಾರೆ ಎಂದು ವರದಿಯಾಗಿದೆ.
 

Follow Us:
Download App:
  • android
  • ios