ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದ ಕಾಲಿವುಡ್‌ ವರ್ಸಟೈಲ್‌ ನಟ ಬಾಲಾ ಸಿಂಗ್ (69) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚೆನ್ನೈ (ನ. 28): ಕಮಲ್ ಹಾಸನ್‌ ನಿರ್ದೇಶನದ 'ವಿರುಮಂಡಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿ ಆ ನಂತರ ಧನುಷ್ ಚಿತ್ರದ 'ಪುದುಪೆಟೈ'ನಲ್ಲಿ ಕಮಾಲ್ ಮಾಡಿರುವ ನಟ ಬಾಲಾ ಸಿಂಗ್ ತುಂಬಾ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕೆಲದಿನಗಳ ಹಿಂದೆ ಜ್ವರ ಜಾಸ್ತಿಯಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ (ನ.27) ಕೊನೆಯುಸಿರೆಳೆದಿದ್ದಾರೆ.

ನ್ಯಾಷನಲ್‌ ಸ್ಕೂಲ್ ಆಫ್ ಡ್ರಾಮಾದಲ್ಲಿ ನಟನೆ ಕಲಿತು ರಂಗಭೂಮಿಯಿಂದ ಜೀವನ ಆರಂಭಿಸಿದ ಬಾಲಾ ಸಿಂಗ್ 1983ಲ್ಲಿ ಮಲಯಾಳಂ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದರು. ಆ ನಂತರ ಕಾಲಿವುಡ್‌ನಲ್ಲಿ ಹೆಸರು ತಂದು ಕೊಟ್ಟಿದ್ದು ನಸರ್‌ ನಿರ್ದೇಶನದ 'ಅವತಾರಂ' ಚಿತ್ರ.

ವಿಜಯ್ ಅಂತ್ಯಸಂಸ್ಕಾರವನ್ನು ತವರೂರಾದ ನಗೇರಿಕೊಳ್ಳಿಯಲ್ಲಿ ನೆರವೇರಿಸಲಾಯಿತು.