ಹುಟ್ಟೂರು ಅಂದ್ರೆ ಅದು ಸ್ವರ್ಗ.. ಒಬ್ಬ ವ್ಯಕ್ತಿಯ ಮೂಲ. ಹುಟ್ಟೂರು ಅಂದ್ರೆ ನಮ್ಮ ಮನದಾಳದ ನೆಮ್ಮದಿ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ಈಗ ಹುಟ್ಟೂರನ್ನೇ ಬಿಟ್ಟು ಹೊರಟಿದ್ದಾರೆ ತಮಿಳು ನಟ ತಲಾ ಅಜಿತ್.. ಯಾಕೆ ಗೊತ್ತಾ? ಈ ಸಟ್ಓರಿ ನೋಡಿ.. 

ಹುಟ್ಟೂರನ್ನೇ ಬಿಟ್ಟು ಹೋದ ತಮಿಳು ನಟ ಅಜಿತ್!

ಕಾಲಿವುಡ್​ ನಟ ಅಜಿತ್​(Ajith Kumar) ಭಾರತ ದೇಶ ಬಿಟ್ಟಿದ್ದಾರೆ. ಹುಟ್ಟಿ ಬೆಳೆದ ಭಾರತಾಂಬೆಯ ನಾಗರೀಕತೆ ತ್ಯಜಿಸಿ ಹೊರ ದೇಶದ ಸಿಟಿಜನ್​ಶಿಪ್​ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ತಲಾ ಅಜಿತ್ ಜೀವನ ಕೊಟ್ಟ ದೇಶ ಬಿಟ್ಟು ಪರದೇಶದ ನಾಗರೀಕನಾಗಿದ್ದೇಕೆ..? ಅದಕ್ಕೆ ಕಾರಣ ಅಜಿತ್ ಅವರೇ ರಿವಿಲ್ ಮಾಡಿದ್ದಾರೆ..

ಹುಟ್ಟೂರು ಅಂದ್ರೆ ಅದು ಸ್ವರ್ಗ.. ಒಬ್ಬ ವ್ಯಕ್ತಿಯ ಮೂಲ. ಹುಟ್ಟೂರು ಅಂದ್ರೆ ನಮ್ಮ ಮನದಾಳದ ನೆಮ್ಮದಿ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ಈಗ ಹುಟ್ಟೂರನ್ನೇ ಬಿಟ್ಟು ಹೊರಟಿದ್ದಾರೆ ತಮಿಳು ನಟ ತಲಾ ಅಜಿತ್..

ಸ್ವದೇಶದ ಮೇಲೆ ಬೇಸರ ವಿದೇಶದ ಮೇಲೆ ಮೋಹ..!

ಭಾರತೀಯ ಚಿತ್ರರಂಗದ ಕೆಲ ಸ್ಟಾರ್​ ನಟರು ಇಲ್ಲಿ ನೇಮು ಫೇಮು ಪಡೆದ ನಂತರ ಇಲ್ಲಿನ ನಾಗರೀಕತೆಯನ್ನೂ ತೊರೆದು ಪರದೇಶದ ಸಿಟಿಜಬ್​ ಶಿಪ್​ ಪಡೆದು ಸೆಟಲ್​ ಆಗಿ ಬಿಡುತ್ತಾರೆ. ಆ ಸಾಲಿಗೆ ಈಗ ಕಾಲಿವುಡ್​ ನಟ ಅಜಿತ್ ಕೂಡ ಸೇರಿದ್ದಾರೆ. ತಮಿಳು ನಟ ತಲಾ ಅಜಿತ್​ಗೆ ನನ್ನ ಹುಟ್ಟೂರಿನ ಮೇಲೆ ಬೇಸರ ಹುಟ್ಟಿ ವಿದೇಶದ ಮೇಲೆ ಮೋಹ ಹೆಚ್ಚಾಗಿ ಹೊರಟಿದ್ದಾರೆ.

ಭಾರತದ ನಾಗರೀಕತೆ ತ್ಯಜಿಸಿ ದುಬೈ ನಿವಾಸಿ ಆದ ಅಜಿತ್..!

ತಲಾ ಅಜಿತ್ ಈಗ ಭಾರತದ ಪ್ರಜೆ ಅಲ್ಲ.. ದುಬೈ ನಿವಾಸಿ. ಭಾರತದ ನಾಗರೀಕತೆ ತ್ಯಜಿಸಿದ್ದಾರೆ. ಸಿನಿಮಾ ಶೂಟಿಂಗ್ ಅಥವಾ ಬೇರೆ ಯಾವುದೇ ಕೆಲಸ ಇದ್ರೆ ಮಾತ್ರ ಭಾರತಕ್ಕೆ ಬರುತ್ತಾರೆ. ಇಲ್ಲಿ ಕೆಲ ಸಮಯ ತಂಗಿದ್ದು ಮತ್ತೆ ದುಬೈಗೆ ಹೋಗ್ತಾರೆ. ಸಿನಿಮಾಗಳಲ್ಲಿ ದೇಶಭಕ್ತಿ ಸಾರುವ ಅಜಿತ್, ನಿಜ ಜೀವನದಲ್ಲಿ ಹುಟ್ಟಿ ಬೆಳದು ಹೆಸರು ಮಾಡಲು ಜಾಗ ಕೊಟ್ಟ ಭಾರತವನ್ನೇ ತ್ಯಜಿಸಿ ಹೋಗಿದ್ದು ಏಕೆ..? ಇದಕ್ಕೆ ಕಾರಣ ಅವರ ಅಭಿಮಾನಿಗಳೇ..

ಭಾರತದಲ್ಲಿ ಕಲಾವಿದರಿಗೆ ಅನವಶ್ಯಕ ಪ್ರಾಧಾನ್ಯತೆ; ಸ್ಟಾರ್ ಡಮ್‌ನಿಂದ ದೂರಾಗಲೆಂದು ದುಬೈಗೆ ಹೋದೆ!

ಸಂದರ್ಶನಗಳನ್ನೇ ನೀಡದ, ಸಿನಿಮಾ ಪ್ರಚಾರಗಳನ್ನೂ ಮಾಡದ ಅಜಿತ್ ಇತ್ತೀಚೆಗಷ್ಟೆ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್​​ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಅಲ್ಲಿ ಮಾತನಾಡುತ್ತಾ ನಟರುಗಳಿಗೆ ವಿಶೇಷ ಪ್ರಾಧಾನ್ಯತೆ ಭಾರತದಲ್ಲಿ ಸಿಗುತ್ತೆ. ಜನ ಬಂದು ಗದ್ದಲ ಮಾಡುತ್ತಾರೆ. ಅದೆಲ್ಲದರಿಂದ ದೂರಾಗಲೆಂದು ನಾನು ದೂರ ಹೋಗಿದ್ದೇನೆ, ಇದರಿಂದ ದೂರ ಹೋಗದೇ ಇದ್ದರೆ ನಾನೂ ಸಹ ಇಂಥಹ ಅನವಶ್ಯಕ ಪ್ರಾಮುಖ್ಯತೆಗೆ ಸಿಕ್ಕಿ ಬೀಳುತ್ತೇನೆ. ನಾನು ದುಬೈಗೆ ಹೋಗಿದ್ದು ಸಹ ಇದೇ ಕಾರಣಕ್ಕೆ ಎಂದಿದ್ದಾರೆ ಅಜಿತ್..

ಸುತ್ತ ಹೆಚ್ಚು ಜನ ಇದ್ರೆ ಅಷ್ಟೇ ತೊಂದರೆ ಎಂದ ಅಜಿತ್.!

ಸೂಪರ್ ಸ್ಟಾರ್​ಗಳು ಬಂದ್ರೆ ಲಕ್ಷಾಂತರ ಜನ ಸೇರುತ್ತಾರೆ. ಜನ ಜಂಗುಳಿಯಿಂದ ಪ್ರಾಣ ಬಿಟ್ಟವರೂ ಇದ್ದಾರೆ. ದಳಪತಿ ವಿಜಯ್ ವಿಷಯದಲ್ಲೂ ಇದೇ ಆಗಿದ್ದು. ಆದ್ರೆ ಅಂತಹ ಘಟನೆಗಳ ಸಹವಾಸವೇ ಬೇಡ ಅಂತ ದೂರ ಇರೋ ಅಜಿತ್ ಸುತ್ತ ಹೆಚ್ಚು ಜನ ಇದ್ದಷ್ಟು ತೊಂದರೆ ಜಾಸ್ತಿ ಎಂದಿದ್ದಾರೆ. ಹೀಗಾಗೆ ಅಜಿತ್​ ದೇಶ ಬಿಟ್ಟು ದುಬೈ ಪ್ರಜೆಯಾಗಿದ್ದು, ಕೆಲಸ ಇದ್ರೆ ಮಾತ್ರ ಭಾರತಕ್ಕೆ ಬರುತ್ತಾರಂತೆ. ಸೋ ಅಜಿತ್ ಫ್ಯಾನ್ಸ್​ಇನ್ಮುಂದೆ ಚಿತ್ರಮಂದಿರದಲ್ಲಿ ಮಾತ್ರ ತಲಾನನ್ನ ಕಣ್ತುಂಬಿಕೊಳ್ಳಬೇಕಷ್ಟೆ..