ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಯ್ತು ಮಹಾಸಮುದ್ರಂ ಟ್ರೇಲರ್. ಎಲ್ಲಿ ನೋಡಿದರೂ ಗರುಡನ ಹವಾ...
ತೆಲುಗು ಚಿತ್ರರಂಗ (Tollywood)ದ ಬಹುನಿರೀಕ್ಷಿತ ಸಿನಿಮಾ ಮಹಾಸಮುದ್ರಂ (Mahasamudram) ಟ್ರೇಲರ್ ಬಿಡುಗಡೆ ಮಾಡಲಾಗಿದೆ. ನಟ ಸಿದ್ಧಾರ್ಥ್, ಶಿರ್ವಾನಂದ್, ಅದಿತಿ ರಾವ್ ಹೈದರ್, ಅನು ಇಮಾನ್ಯುಯೆಲ್, ಜಗಪತಿ ಬಾಬು, ರಾವ್ ರಮೇಶ್, ಗರುಡ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ.
ಕೆಜಿಎಫ್ (KGF) ಗರುಡ ಖ್ಯಾತಿಯ ರಾಮಚಂದ್ರ ರಾಜು ಟ್ರೇಲರ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಚಿತ್ರದಲ್ಲಿ ನಟನಿಗೆ ನೀಡಿರುವ ಮಹತ್ವವನ್ನು ವಿಲನ್ ಪಾತ್ರಕ್ಕೂ ನೀಡಿದ್ದಾರೆ ಎನ್ನಬಹುದು. ಇದೊಂದು ಎಪಿಕ್ ಲವ್- ಆ್ಯಕ್ಷನ್ ಸಿನಿಮಾ (Action Movie) ಆಗಿದ್ದು ಪ್ರತಿಯೊಂದೂ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ. ನಿರ್ದೇಶಕ ಅಜಯ್ ಭೂಪತಿ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಚೈತನ್ ಭಾರದ್ವಾಜ್ ಸಂಗೀತ ನೀಡಿದ್ದಾರೆ. ಅಕ್ಟೋಬರ್ 14ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ.
'ಇದೊಂದು ವಿಭಿನ್ನ ಕಥೆ ಆಗಿದ್ದು, ಪ್ರಮುಖ ಪಾತ್ರಧಾರಿಗಳನ್ನು ಆಯ್ಕೆ ಮಾಡುವುದಕ್ಕೆ ತುಂಬಾ ಸಮಯ ತೆಗೆದುಕೊಂಡೆ. ಮಹಾ ನಟಿಯ ಹೆಸರು. ಆದರೆ ಯಾರು ಮಹಾ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಎಂದು ಹೇಳಲಾರೆ. ಸಮುದ್ರಂ ಚಿತ್ರದಲ್ಲಿ ಎರಡು ಕ್ಯಾರೆಕ್ಟರ್‌ಗಳಿವೆ. ಒಬ್ಬ ತುಂಬಾನೇ ಸೈಲೆಂಟ್ ಮತ್ತೊಬ್ಬ ಕೋಪಿಷ್ಠ. ಸಿನಿಮಾ ನೋಡಿ ಇನ್ನುಳಿದ ಮಾಹಿತಿ ನೀವು ತಿಳಿದುಕೊಳ್ಳಬೇಕು,' ಎಂದು ನಿರ್ದೇಶಕ ಅಜಯ್ ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳಿದ್ದಾರೆ.
ಯಶ್ ಬಾಡಿಗಾರ್ಡ್ ಆಗಿದ್ದ ಗರುಡಗೆ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಅವಕಾಶ!
ಸಾಮಾನ್ಯವಾಗಿ ಬಹು ಕಲಾವಿದರು ಅಭಿನಯಿಸಿರುವ ಚಿತ್ರಗಳು ವೀಕ್ಷಕರ ನಿರೀಕ್ಷೆ ಹೆಚ್ಚಿಸುತ್ತವೆ. ಈ ಮಹಾ ಸಮುದ್ರಮ್‌ನಲ್ಲಿಯೂ ಶರ್ವಾನಂದ್ ಮತ್ತು ಸಿದ್ಧಾರ್ಥ್ ಪಾತ್ರಗಳು ಹಾಗೂ ಟ್ರೇಲರ್ ಕಾಣುವ ನಟನೆ ಚಿತ್ರ ರಸಿಕರ ಕುತೂಹಲವನ್ನು ಕೆರಳಿಸಿದೆ. ಸಿದ್ಧಾರ್ಥ ಹಾಗೂ ಶಿರ್ವಾನಂದ್ ವಿಭಿನ್ನ ಪಾತ್ರಗಳಂತೆ ತೋರುತ್ತಿದ್ದು, ಇಬ್ಬರನ್ನು ಟ್ರೈಲರ್‌ನಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ. ಪಾತ್ರಗಳ ವೈವಿಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸಮುದ್ರ (Oceasn) ಎಂದರೆ ಒಂದು ರೀತಿಯ ಕುತೂಹಲ. ಅದರಲ್ಲಿ ಅಡಗಿರುವ ಗುಟ್ಟುಗಳೆಷ್ಟೋ? ಈ ಚಿತ್ರಕ್ಕೂ ಸಾಗರಕ್ಕೂ ಎಂಥದ್ದೋ ಆವಿನಾಭಾವ ಸಂಬಂಧವಿರುವಂತೆ ಟ್ರೈಲರ್‌ನಲ್ಲಿ ಸುಳಿವು ಸಿಗುತ್ತದೆ. ಆದರೆ, ದಿಗ್ರ್ಬಮೆಗೊಳಿಸುವ ಮತ್ತಷ್ಟು ಸತ್ಯಗಳೂ ಚಿತ್ರಗಳಲ್ಲಿವೆ ಎಂಬುದನ್ನೂ ಸುಲಭವಾಗಿಯೇ ಅರ್ಥ ಮಾಡಿಕೊಳ್ಳಬಹುದು. ಆದರೆ, ಟ್ರೈಲರ್ ಆ ಗುಟ್ಟನ್ನು ಗುಟ್ಟಾಗಿಯೇ ಇಡಲಾಗಿದೆ. ಅದಿತಿ ರಾವ್ ಹೈದರಿ ಹಾಗೂ ಅನು ಎಮ್ಮಾನುಯೆಲ್ ಅವರವರ ಪಾತ್ರಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಏನೋ ಒಟ್ಟಿನಲ್ಲಿ ಮತ್ತೊಂದು ಎಪಿಕ್ ಲವ್ ಮತ್ತು ಆ್ಯಕ್ಷನ್ ಮೂವಿ ತೆಲಗು ಚಿತ್ರರಂಗದಲ್ಲಿ ಬಿಡುಗಡೆಯಾಗಲಿದೆ.

