ಮೂವರು ಎಲ್‌ಇಟಿ ಭಯೋತ್ಪಾದಕರ ಗುಂಡಿಗೆ ಕಿರುತೆರೆ ನಟಿ ಕಮ್ ಟಿಕ್‌ಟಾಕ್ ನಟಿ ಅಮರೀನಾ ಭಟ್ ಸಾವು
ಕಾಶ್ಮೀರದಲ್ಲಿ ವಾಸಿಸುತ್ತಿರುವ ಕಿರುತೆರೆ ನಟಿ ಕಮ್ ಟಿಕ್‌ಟಾಕ್ ಸ್ಟಾರ್ ಅಮರೀನಾ ಭಟ್‌ರನ್ನು (Amreena Bhat) ಮೂರವರು ಎಲ್‌ಇಟಿ ಭಯೋತ್ಪಾದಕರು ಗುಂಡಿಟ್ಟು ಸಾಯಿಸಿದ್ದಾರೆ. ಅಮರೀನಾ ಅವರ ಜೊತೆಗಿದ್ದ 10 ವರ್ಷದ ಅಣ್ಣನ ಮಗನಿಗೆ ಗಂಭೀರವಾಗಿ ಗಾಯವಾಗಿದೆ. ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರದ ಹಿಶ್ರೂ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಪೊಲೀಸರು ಜಿಎನ್‌ಎಸ್ ನ್ಯೂಸ್ ಏಜೆನ್ಸಿಗೆ ಮಾಹಿತಿ ಕೊಟ್ಟಿರುವ ಪ್ರಕಾರ ಅಮರೀನಾ ಗುಂಡೇಟಿಗೆ ಸ್ಥಳದಲ್ಲಿ ಸಾವನ್ನಪಿದ್ದಾರೆ ಆದರೆ ಅವರ ಜೊತೆಗಿರುವ 10 ವರ್ಷದ ಹುಡುಗ (ಅಣ್ಣನ ಮಗನಿಗೆ) ಗಂಭೀರವಾಗಿ ಗಾಯವಾದರಿಂದ ಮೊದಲು ಚಂದೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಆನಂತರ ಎಸ್‌ಎಮ್‌ಹೆಚ್‌ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.ನಾಲ್ಕೈದು ಕಿರುತೆರೆ ಧಾರಾವಾಹಿಗಳಲ್ಲಿ ಅಮರೀನಾ ಭಟ್ ಅಭಿನಯಿಸಿದ್ದಾರೆ. ಅಲ್ಲದೆ ಟಿಕ್‌ಟಾಕ್‌ನಲ್ಲಿ ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಲಕ್ಷಗಟ್ಟಲೆ ಫಾಲೋವರ್ಸ್ ಹೊಂದಿದ್ದರು.
Viral Video: ಸಿಂಹದ ಜತೆ ತಮಾಷೆ ಮಾಡಲು ಹೋಗಿ ಬೆರಳು ಕಳೆದುಕೊಂಡ ವ್ಯಕ್ತಿ
'ಸುಮಾರು 19.55 ಗಂಟೆ ಸಮಯದಲ್ಲಿ ಭಯೋತ್ಪಾದಕರು ಮಹಿಳೆ ಅಮರೀನಾ ಭಟ್ D/o ಖಾಜಿರ್ ಮೊಹಮ್ಮದ್ ಭಟ್ R/o ಹುಶ್ರೂ ಚದೂರ ಅವರ ಮನೆಯಲ್ಲಿ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಸ್ಥತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ' ಎಂದು ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ.
'ಅಮರೀನಾ ಆಸ್ಪತ್ರೆಗೆ ದಾಖಲು ಆಗುವ ಮುನ್ನವೆ ಉಸಿರು ಬಿಟ್ಟಿದ್ದರು. ಮೃತದೇಹ ಆಸ್ಪತ್ರೆಗೆ ಬಂದಿತ್ತು' ಎಂದು ಚಂದೂರು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಅಮರೀನಾ ವೃತ್ತಿ ಮತ್ತು ವೈಯಕ್ತಿಕ ಜೀವನಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಅಮರೀನಾ ಭಟ್ ಆತ್ಮಕ್ಕೆ ಶಾಂತಿ ಸಿಗಲಿ.
