ಬಾಹುಬಲಿ ಕಳಿಸಿದ ಬಿರಿಯಾನಿ ಸೂಪರ್ ಎಂದ ಬೇಬೋ
- ಬಾಲಿವುಡ್ ಸುಂದರಿಗೆ ಬಿರಿಯಾನಿ ಕಳಿಸಿದ ಪ್ರಭಾಸ್
- ಬಾಹುಬಲಿ ಬಿರಿಯಾನಿ ಕಳಿಸಿದ್ರೆ ಸೂಪರಾಗಿರುತ್ತೆ ಎಂದು ಕರೀನಾ
ಟಾಲಿವುಡ್ ಬಾಹುಬಲಿ(Baahubali) ಸ್ಟಾರ್ ನಟ. ರುಚಿ ರುಚಿಯಾದ ಬಿರಿಯಾನಿ ಅಂದ್ರೆ ಪ್ರಭಾಸ್‌ಗೆ(Prabhas) ಇಷ್ಟ. ಹಾಗೆ ತಾವು ತಿನ್ನುವುದು ಮಾತ್ರವಲ್ಲ ತಮ್ಮ ಪ್ರಿಯರಿಗೂ ಪ್ರೀತಿಯಿಂದ ಕೊಡಿಸುತ್ತಾರೆ. ಪ್ರಭಾಸ್ ಕೊಡಿಸಿದ ಬಿರಿಯಾನಿ(Biriyani) ಮೆಚ್ಚಿ ಈ ಹಿಂದೆಯೂ ಕೆಲವು ನಟ, ನಟಿಯರು ಹೊಗಳಿದ್ದಾರೆ. ಈಗ ಬಾಲಿವುಡ್ ಬೇಬೋ ಸರದಿ.
ಹೌದು. ಸಲಾರ್ ನಟ ಬಾಲಿವುಡ್ ನಟಿ ಸೈಫಲ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಖಾನ್‌ಗೆ ಬಿಸಿಬಿಸಿಯಾದ ಬಿರಿಯಾನಿ ಕೊಡಿಸಿದ್ದಾರೆ. ಗರಂ ಬಿರಿಯಾನಿ ಕೊಡಿಸಿದ ನಟನಿಗೆ ಥ್ಯಾಂಕ್ಸ್ ಹೇಳಿದ್ದಾರೆ ಬೇಬೋ. ನಟಿ ಕರೀನಾ ಕಪೂರ್ ಖಾನ್ ಅವರು ಬಿರಿಯಾನಿಯನ್ನು ತೋರಿಸಿದ್ದಾರೆ. ಅದನ್ನು ಪ್ರಭಾಸ್ ಕಳುಹಿಸಿದ್ದಾರೆ. ಅವಳು ಇನ್‌ಸ್ಟಾಗ್ರಾಮ್‌ನಲ್ಲಿ ಬಾಬುಬಲಿ ಕಳಿಸಿದ ತನ್ನ ರುಚಿಯಾದ ಊಟದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬಿರಿಯಾನಿ ಫೈಟ್: ಮನೆ ಬಿಟ್ಟು ಹೋದ ಗರ್ಭಿಣಿ ಪತ್ನಿ!
ಮೊದಲ ಬಾರಿಗೆ ಸೈಫ್ ಜೊತೆ ಕೆಲಸ ಮಾಡುವ ಬಗ್ಗೆ, ಪ್ರಭಾಸ್ ಹೇಳಿಕೆಯಲ್ಲಿ, ಸೈಫ್ ಅಲಿ ಖಾನ್ ನಂತಹ ಪ್ರತಿಭಾವಂತ ನಟನ ಜೊತೆ ಕೆಲಸ ಮಾಡಲು ನಾನು ಉತ್ಸುಕವಾಗಿದ್ದೇನೆ. ಬೆಳ್ಳಿ ಪರದೆಯ ಮೇಲೆ ಅಂತಹ ಮಹಾನ್ ನಟನ ಜೊತೆಯಲ್ಲಿ ಕಾಣಿಸಿಕೊಳ್ಳುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಈ ದೇಗುಲದಲ್ಲಿ 'ಮಟನ್ ಬಿರಿಯಾನಿ'ಯೇ ಪ್ರಸಾದ!
ತನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ನ ಓಂ ರಾವತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಪ್ರಭಾಸ್ ಮಾತನಾಡಿ, ಪ್ರತಿಯೊಂದು ಪಾತ್ರವು ತನ್ನದೇ ಸವಾಲುಗಳನ್ನು ಎದುರಿಸುತ್ತದೆ. ನಮ್ಮ ಮಹಾಕಾವ್ಯದ ಈ ಪಾತ್ರವನ್ನು ವಿಶೇಷವಾಗಿ ಓಂ ವಿನ್ಯಾಸಗೊಳಿಸಿದ ರೀತಿಯಲ್ಲಿ ಚಿತ್ರಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಮ್ಮ ದೇಶದ ಯುವಕರು ನಮ್ಮ ಸಿನಿಮಾಗೆ ತಮ್ಮೆಲ್ಲರ ಪ್ರೀತಿಯನ್ನು ನೀಡುತ್ತಾರೆ ಎಂದು ನನಗೆ ನಂಬಿಕೆ ಇದೆ ಎಂದಿದ್ದರು.