ಗಣೇಶನನ್ನು ಎಲ್ಲರೂ ಭಕ್ತಿಯಿಂದ ಮನೆಗೆ ಸ್ವಾಗತಿಸುತ್ತಿರುವ ಸಂದರ್ಭದಲ್ಲಿ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಪುತ್ರ ತೈಮೂರ್ ಕೂಡಾ ಗಣೇಶನನ್ನು ಕೂರಿಸಿ, ಮಂಟಪವನ್ನೂ ನಿರ್ಮಿಸಿದ್ದಾರೆ.

ಕ್ಯೂಟ್ ತೈಮೂರ್‌ನ ಫೋಟೋಗಳನ್ನು ಕರೀನಾ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.  ಕರೀನಾ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ.

ರಾಖಿ ಹಬ್ಬದ ಸ್ಪೆಷಲ್‌ - ಕಸಿನ್‌ ಇನಾಯಾ ಜೊತೆ ಪೋಸ್‌ ನೀಡಿರುವ ತೈಮೂರ್

ಗಣಪತಿ ಹಬ್ಬ ಈ ಬಾರಿ ಸ್ವಲ್ಪ ಭಿನ್ನವಾಗಿರಬಹುದು. ನಮಗೆಲ್ಲರಿಗಾಗಿ ತೈಮೂರು ಚಂದದ ಗಣೇಶ ರಚಿಸಿದ್ದಾನೆ. ಹ್ಯಾಪಿ ಗಣೇಶ ಚತುರ್ಥಿ ಎಂದು ಕರೀನಾ ಫೋಟೋ ಶೇರ್ ಮಾಡಿದ್ದಾರೆ.

ಕರೀನಾ ಹಾಗೂ ಸೈಫ್ ಇತ್ತೀಚೆಗಷ್ಟೇ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಬಹಿರಂಗಪಡಿಸಿದ್ದರು. ಇತ್ತೀಚೆಗಷ್ಟೇ ಸೈಫ್ 50ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಆಚರಿಸಿಕೊಂಡಿದ್ದರು.