ದೇಶದಲ್ಲಿ ಮತ್ತು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮಾಸ್ಕ್ ಧರಿಸಿ ಸೆಲ್ಫಿ ಶೇರ್ ಮಾಡಿದ್ದಾರೆ. ಕೋವಿಡ್ -19 ರ ಹರಡುವಿಕೆಯನ್ನು ತಡೆಯಲು ಅದೇ ರೀತಿ ಮಾಸ್ಕ್ ಧರಿಸಬೇಕೆಂದು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಬೊ ತನ್ನ ಸೆಲ್ಫಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಬಿಳಿ ಪ್ರಚಾರ ಎನ್ನುವ ಅರ್ಥದ ಪದ ಬರೆದಿರುವ ಟಾಪ್ ಧರಿಸಿ ಬ್ಲಾಕ್ ಮಾಸ್ಕ್‌ ಧರಿಸಿದ್ದಾರೆ. ಪ್ರಚಾರವಿಲ್ಲ, ಸುಮ್ನೆ ಮಾಸ್ಕ್ ಹಾಕ್ಕೊಳ್ಳಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.

ದುಬಾರಿ ಬ್ಲಾಕ್ Lamborghini ಖರೀದಿಸಿದ ನಟ ಕಾರ್ತಿಕ್ ಆರ್ಯನ್

ನಟಿ ಲೂಯಿ ವಿಟಾನ್ ಮಾಸ್ಕ್ ಧರಿಸಿದ್ದಳು. ಅದರಲ್ಲಿ ಬಿಳಿ ಎಲ್ವಿ ಚಿಹ್ನೆ ಕಸೂತಿ ಮಾಡಲಾಗಿದೆ. ಈ ಮಾಸ್ಕ್ ಮರುಬಳಕೆ ಮಾಡಬಹುದಾಗಿದೆ ಮತ್ತು ತನ್ನದೇ ಆದ ರೇಷ್ಮೆ ಬ್ಯಾಗ್‌ ಕೂಡಾ ಹೊಂದಿದೆ.

ಮಾಸ್ಕ್ ತುಂಬಾ ಸರಳ ಮತ್ತು ಸಿಂಪಲ್ ಎಂದು ಕಂಡರೂ ಅದರ ಬೆಲೆ ದುಬಾರಿ. ಈ ಮಾಸ್ಕ್ ಬೆಲೆ 25,994 ರೂಪಾಯಿ. ಕರೀನಾ ಅವರಲ್ಲದೆ, ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳ ಮುಖಗಳಲ್ಲಿ ಮುಖವಾಡವನ್ನು ಗುರುತಿಸಲಾಗಿದೆ.