ಬಾಲಿವುಡ್‌ ನ ಪ್ರಸಿದ್ಧ ಜೋಡಿ ಶಾಹಿದ್‌ ಕಪೂರ್‌ ಹಾಗೂ ಕರೀನಾ ಕಪೂರ್ ಬಹಳ ವರ್ಷಗಳ ನಂತ್ರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರನ್ನು ನೋಡಿದ ನೆಟ್ಟಿಗರ ಮನದಲ್ಲೊಂದು ಹೊಸ ಆಸೆ ಚಿಗುರಿದೆ.

ಒಂದು ಕಾಲದಲ್ಲಿ ಬಾಲಿವುಡ್ನ ಫೇವರಿಟ್ ಲವ್ಬರ್ಡ್ಸ್ ಆಗಿದ್ದ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಬರೋಬ್ಬರಿ 19 ವರ್ಷಗಳ ಬಳಿಕ ಇಬ್ಬರೂ ಹೀಗೆ ಭೇಟಿಯಾಗಿ ಅಪ್ಪಿಕೊಂಡಿದ್ದನ್ನು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಶಾಹಿದ್‌ ಹಗ್‌ ಮಾಡಿದ ಕರೀನಾ

ಇತ್ತೀಚೆಗೆ ನಡೆದ IIFA ಪ್ರೆಸ್ ಕಾನ್ಫರೆನ್ಸ್ನಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ವರುಣ್ ಧವನ್ ಸೇರಿದಂತೆ ಹಲವು ಸ್ಟಾರ್ಗಳು ಭಾಗವಹಿಸಿದ್ದರು. ಆದ್ರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಕರೀನಾ ಮತ್ತು ಶಾಹಿದ್ ಭೇಟಿಯ ಕ್ಷಣ. ಶಾಹಿದ್ ಕಪೂರ್ ಅಲಿ ಫಜಲ್ ಸೇರಿದಂತೆ ಇತರರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಕರೀನಾ ಅವರೇ ಮುಂದೆ ಬಂದು ಶಾಹಿದ್ ಜೊತೆ ಮಾತನಾಡಿದ್ದಾರೆ. ಬಳಿಕ ಇಬ್ಬರೂ ನಗುನಗುತ್ತಾ ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗೀತ್-ಆದಿತ್ಯ ಮತ್ತೆ ಒಂದಾಗ್ತಾರಾ?

2007ರಲ್ಲಿ ತೆರೆಕಂಡ ಜಬ್ ವಿ ಮೆಟ್ ಸಿನಿಮಾದಲ್ಲಿ ಕರೀನಾ ಕಪೂರ್ ಗೀತ್ ಆಗಿ, ಶಾಹಿದ್ ಕಪೂರ್ ಆದಿತ್ಯ ಆಗಿ ಮೋಡಿ ಮಾಡಿದ್ದರು. ಇವರಿಬ್ಬರ ಕೆಮಿಸ್ಟ್ರಿ ಅಂದಿಗೂ ಇಂದಿಗೂ ಫ್ಯಾನ್ಸ್ಗೆ ಫೇವರಿಟ್. ಆದ್ರೆ ಇದೇ ಸಿನಿಮಾ ಮಾಡುತ್ತಿದ್ದ ಸಮಯದಲ್ಲಿ ಇಬ್ಬರ ಬ್ರೇಕಪ್ ಸುದ್ದಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆಮೇಲೆ ಇಬ್ಬರೂ ಮತ್ತೆ ರೊಮ್ಯಾಂಟಿಕ್ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಈಗ ಇಷ್ಟು ವರ್ಷಗಳ ಬಳಿಕ ಇಬ್ಬರೂ ಖುಷಿಯಿಂದ ಮಾತನಾಡಿ, ಅಪ್ಪಿಕೊಂಡಿದ್ದನ್ನು ನೋಡಿ ಫ್ಯಾನ್ಸ್ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಜಬ್ ವಿ ಮೆಟ್ 2 ಬೇಕೇ ಬೇಕು ಅಂತಿದ್ದಾರೆ ಫ್ಯಾನ್ಸ್

ಕರೀನಾ ಮತ್ತು ಶಾಹಿದ್ ಭೇಟಿಯ ವಿಡಿಯೋಗೆ ಅಭಿಮಾನಿಗಳು ಸಖತ್ ಇಂಟರೆಸ್ಟಿಂಗ್ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಇವರಿಬ್ಬರನ್ನು ಒಟ್ಟಿಗೆ ನೋಡಿ ನಾನೇಕೆ ಇಷ್ಟು ಎಮೋಷನಲ್ ಆಗುತ್ತಿದ್ದೇನೆ ಗೊತ್ತಿಲ್ಲ ಅಂತ ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, ಇಷ್ಟು ವರ್ಷದ ನಂತ್ರ ಇಬ್ಬರು ಮಾತನಾಡಿದ್ದನ್ನು ನೋಡಿ ಖಷಿಯಾಗಿದೆ ಅಂತ ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರಂತೂ ಇವರಿಬ್ಬರ ನಡುವೆ ಏನೋ ಸ್ಪೆಷಲ್ ಕೆಮಿಸ್ಟ್ರಿ ಇದೆ ಅಂತಿದ್ದಾರೆ. ಕೆಲ ಬಳಕೆದಾರರು ಜಬ್ ವಿ ಮೆಟ್ 2 ಸಿನಿಮಾ ಮಾಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಅಂದಹಾಗೆ, ಶಾಹಿದ್ ಅವರ ಪತ್ನಿ ಮೀರಾ ರಾಜ್ಪೂತ್ ಕೂಡ ಈ ಹಿಂದೆ ಕರೀನಾ ಅವರ ವಾಟ್ ವುಮೆನ್ ವಾಂಟ್ ಶೋನಲ್ಲಿ ಭಾಗವಹಿಸಿದ್ದರು. ಇಬ್ಬರೂ ಫೋಟೋಗಳನ್ನು ಹಂಚಿಕೊಂಡು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಟ್ನಲ್ಲಿ, ಕರೀನಾ-ಶಾಹಿದ್ ಅವರ ಈ ಒಂದು ಹಗ್ ಈಗ ಅಭಿಮಾನಿಗಳಲ್ಲಿ ಹಳೆಯ ಪ್ರೀತಿಯ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ.

View post on Instagram