ಮುಂಬೈ,  ಬೆಂಗಳೂರು (ಜ.  07) ' ಕಳೆದ ಆಗಸ್ಟ್ ನಲ್ಲಿ ಕಿಂಗ್ ಖಾನ್ ಶಾರುಖ್ ಸಂದರ್ಶನವೊಂದರಲ್ಲಿ ಮಾತನಾಡುತ್ತ ಝೀರೋ ನಂತರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು.  ಇದನ್ನು ಕೇಳಿದ್ದ ನನಗೆ  ಅಚ್ಚರಿ ಆಗಿತ್ತು.. ಆಗಲೇ ಶಾರುಖ್ ಖಾನ್ ಅವರ ಕುರಿತಾಗಿ ಪೋಸ್ಟರ್ ಒಂದನ್ನು ಸಿದ್ಧಮಾಡಿದೆ. ಸಿದ್ಧಮಾಡಿದ್ದು ಮಾತ್ರವಲ್ಲದೇ ಅದನ್ನು ಶಾರುಖ್ ಖಾನ್ ಗೆ ಟ್ಯಾ ಗ್ ಮಾಡಿದೆ'

ಕನ್ನಡದ ಕತೆಗಾರನೊಬ್ಬ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಖಾನ್ ಜತೆ ಸಿನಿಮಾದ ಆಸೆಯನ್ನು ಎಳೆಎಳೆಯಾಗಿ ಹಂಚಿಕೊಳ್ಳುತ್ತಿದ್ದಾರೆ.  ಕನ್ನಡದ ಕತೆಗಾರ ವಿನೀತ್ ಆಚಾರ್ಯ ಶಾರುಖ್ ಮನೆ ಮುಂದೆ  ಪೋಸ್ಟರ್ ಹಿಡಿದು ನಿಂತಿದ್ದಾರೆ.

ಬಡತನದಿಂದ ಕೀರ್ತಿ ಶಿಖರ ಏರಿದ ನಟರು

ಶಾರುಖ್ ಖಾನ್ ತಮ್ಮ ಚಿತ್ರಕ್ಕೆ ಸಹಿ ಮಾಡುವವರೆಗೂ ಕಾಯುತ್ತೇನೆ ಎಂದು ವಿನೀತ್ ಹೇಳುತ್ತಾರೆ. ಒಂದು  ಮೊಟ್ಟೆಯ ಕತೆ ರಾಜ್ ಬಿ ಶೆಟ್ಟಿ  ಜತೆ ಕೆಲಸ ಮಾಡಿದ ಅನುಭವವೂ ಇದೆ. ಕಥಾ ಸಂಗಮದಲ್ಲಿಯೂ ಕತೆಗಾರರಾಗಿ ಗುರುತಿಸಿಕೊಂಡಿದ್ದಾರೆ.

ರಂಗ ಕ್ಷೇತ್ರದಲ್ಲಿಯೂ ವಿನೀತ್ ಹೆಸರು ಮಾಡಿದ್ದು ಶಾರುಖ್ ಮನೆ ಮುಂದೆ ಪೋಸ್ಟರ್ ಹಿಡಿದು ನಿಂತಿದ್ದು ಸಿನಿಮಾ ಜಗತ್ತಿನಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಲು ಕಾಯುತ್ತಿದ್ದಾರೆ.