ಪ್ರಸಾರ ನಿಲ್ಲಿಸಲಿದೆ ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮ್ ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ. ಟಿ ಆರ್ ಪಿ ಕಾರಣಕ್ಕೆ ರಾಧೆ ಶ್ಯಾಮ್ ಧಾರಾವಾಹಿ ಮುಕ್ತಾಯವಾಗುತ್ತಿದೆ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಇದಕ್ಕೆ ಮುಖ್ಯ ಕಾರಣ ಟಿ ಆರ್ ಪಿ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಪೈಪೋಟಿ ಜೋರಾಗಿದೆ. ಪ್ರೇಕ್ಷಕರನ್ನು ಮೆಚ್ಚಿಸುವ, ಅವರ ಗಮನ ಸೆಳೆಯುವ ಧಾರಾವಾಹಿಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವಾಗಿದೆ. ಪ್ರಾರಂಭದಲ್ಲಿ ಧಾರಾವಾಹಿಗಳು ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿರುತ್ತವೆ. ಆದರೆ ಅದನ್ನು ಹೀಗೆ ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪಯಣ ಮುಗಿಸಿದ ಧಾರಾವಾಹಿಗಳ ಸಂಖ್ಯೆ ಹೆಚ್ಚಿಸಿದೆ. ಅದರಲ್ಲಿ ಇಂತಿ ನಿಮ್ಮ ಆಶಾ, ಮತ್ತೆ ವಸಂತ, ಜೀವ ಹೂವಾಗಿದೆ ಹೀಗೆ ಮುಂತಾದ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿವೆ.
ಇದೀಗ ಇವುಗಳ ಲಿಸ್ಟ್ ಗೆ ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ ಸೇರಿಕೊಳ್ಳುತ್ತಿದ್ದಾರೆ. ಅದು ಮತ್ಯಾವುದು ಅಲ್ಲ ರಾಧೆ ಶ್ಯಾಮ್(Radhe Shyam Serial). 200 ಸಂಚಿಕೆಗಳನ್ನು ಪೂರ್ಣಗೊಳಿಸುವ ಮೊದಲೇ ರಾಧೆ ಶ್ಯಾಮ್ ಪ್ರಸಾರ ನಿಲ್ಲಿಸುತ್ತಿದೆ. ಈ ಬಗ್ಗೆ ಮೂಲಗಳು ಮಾಹಿತಿ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಟಿ ಆರ್ ಪಿ ಲಿಸ್ಟ್ ನಲ್ಲಿ ಉತ್ತಮ ಸ್ಕೋರ್ ಮಾಡಲು ವಿಫಲವಾದ ಕಾರಣ ರಾಧೆ ಶ್ಯಾಮ್ ಪ್ರಸಾರ ನಿಲ್ಲಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗಿ ಸ್ಟಾರ್ ವಾಹಿನಿ ರಾಧೆ ಶ್ಯಾಮ್ ಧಾರಾವಾಹಿಯನ್ನು ಮುಗಿಸಲು ನಿರ್ಧಾರ ಮಾಡಿದೆ. ಹಾಗಾಗಿ ಧಾರಾವಾಹಿ ಈಗಾಗಲೇ ಕ್ಲೈಮ್ಯಾಕ್ಸ್ ಚಿತ್ರೀರಣ ಮಾಡಿ ಮುಗಿಸಿ ಎನ್ನುವ ಮಾಹಿತಿ ತಿಳಿದುಬಂದಿದೆ. ಚಿತ್ರೀಕರಣ ಪೂರ್ಣ ಮಾಡಿರುವ ಧಾರಾವಾಹಿ ತಂಡ ಫೋಟೋವನ್ನು ಶೇರ್ ಮಾಡಿದ್ದಾರೆ. ಕೊನೆಯ ದಿನದ ಚಿತ್ರೀಕರಣದ ಫೋಟೋ ವೈರಲ್ ಆಗಿದೆ.
ಅಂದಹಾಗೆ ರಾಧೆ ಶ್ಯಾಮ್ ಧಾರಾವಾಹಿಯಲ್ಲಿ ಕಿರುತೆರೆಯ ಖ್ಯಾತ ನಟಿ ಅಶ್ವಿನಿ ಗೌಡ ನಟಿಸುತ್ತಿದ್ದರು. ಆದರೆ ಇತ್ತೀಚಿಗಷ್ಟೆ ಅಶ್ವಿನಿ ಧಾರಾವಾಹಿಯಿಂದ ಹೊರನಡೆಯುವ ಮೂಲಕ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದರು. ಈ ಧಾರಾವಾಹಿಯಲ್ಲಿ ಅಶ್ವಿನಿ ಗೌಡ, ಪ್ರತಿಮಾ ದೇವಿ ಎನ್ನುವ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ವೈಯಕ್ತಿಕ ಕಾರಣಗಳಿಂದ ಮಧ್ಯದಲ್ಲಿಯೇ ಧಾರಾವಾಹಿ ತೊರೆದು ಹೊರನಡೆದಿದ್ದರು. ಆದರೆ ಈ ಬಗ್ಗೆ ಅಶ್ವಿನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಧಾರಾವಾಹಿಯ ಪ್ರಸಾರವೇ ನಿಂತುಹೋಗುತ್ತಿದೆ.
Kannadathi: ನಿಶ್ಚಿತಾರ್ಥ ಮಂಟಪದಲ್ಲಿ ಭುವಿ ಹರ್ಷನಿಗೆ ತೊಡಿಸಬೇಕಿದ್ದ ರಿಂಗೇ ನಾಪತ್ತೆ! ಹಿಂಗ್ಯಾಕಾಯ್ತು ಶಿವಾ..
ಅಶ್ವಿನಿ ಜಾಗಕ್ಕೆ ಮತ್ತೋರ್ವ ಖ್ಯಾತ ನಟಿಯನ್ನು ಕರೆತಂದಿತ್ತು ವಾಹಿನಿ. ಅದು ಮತ್ಯಾರು ಅಲ್ಲ ಅಭಿನಯ. ಸದ್ಯ ಪ್ರತಿಮಾ ದೇವಿ ಪಾತ್ರದಲ್ಲಿ ಅಭಿನಯ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅಭಿನಯ ಎಂಟ್ರಿ ಕೊಟ್ಟು ಕೆಲವೇ ದಿನಗಳಲ್ಲಿ ಧಾರಾವಾಹಿ ಮುಕ್ತಾಯವಾಗುತ್ತಿರುವುದು ಪ್ರೇಕ್ಷಕರಿಗೆ ಬೇಸರದ ಸಂಗತಿಯಾಗಿದೆ. ಇನ್ನು ಧಾರಾವಾಹಿ ಬಗ್ಗೆ ಹೇಳುವುದದಾರೇ, ರಾಧೆ ಮತ್ತು ಶ್ಯಾಮ್ ಇಬ್ಬರ ಕಥೆಯಾಗಿದೆ. ರಾಧೆ ಸಾಮಾಜಿಕ ಪ್ರಜ್ಞೆ ಮತ್ತು ನೇರ ನುಡಿಯ ಹುಡುಗಿ. ಎಂತಹ ಸಂದರ್ಭದಲ್ಲೂ ನ್ಯಾಯದ ಪರವಾಗಿ ನಿಲ್ಲುವ, ಭ್ರಷ್ಟಾಚಾರ ವಿರೋಧಿಸುವ ಯುವತಿ. ಆದರೆ ರಾಧೆ ಬದುಕು ಮದುವೆಯಾದ ಬಳಿಕ ಸಂಪೂರ್ಣ ತಿರುವು ಪಡೆದುಕೊಳ್ಳುತ್ತದೆ. ಹೆಚ್ಚು ಓದಿರುವ ವಿಚಾರವನ್ನು ಮುಚ್ಚಿಟ್ಟು ಗಂಡನ ಮನೆಯಲ್ಲಿ ಹೇಗೆ ಜೀವನ ನಡೆಸುತ್ತಾಳೆ ಎನ್ನುವ ಕಥೆ ಹೊಂದಿದ್ದ ಧಾರಾವಾಹಿ ಇದಾಗಿತ್ತು. ಆದರೆ ಯಾಕೋ ಪ್ರೇಕ್ಷಕರ ಸೆಳೆಯುವಲ್ಲಿ ವಿಫಲವಾಗಿತ್ತು.
ನಮ್ಮ ಪಿಜಿಯಲ್ಲಿದ್ದ ಹೆಣ್ಮಗಳು ಹೂವಿ; 'ಬೆಟ್ಟದ ಹೂ' ನಟಿಯ ಹಿನ್ನಲೆ ಬಹಿರಂಗ ಪಡಿಸಿದ ಶಂಕರ್ ಅಶ್ವಥ್
ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ತಾನ್ವಿ ರಾವ್ ಮತ್ತು ರವಿ ಭಟ್ ನಟಿಸುತ್ತಿದ್ದರು. ಇನ್ನು ಉಳಿದಂತೆ ಅಭಿನಯ, ಸುಚಿತ್ರ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದರು. ಇದೀಗ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದಿದೆ. ಅಂದಹಾಗೆ ಯಾವಾಗ ಮುಗಿಸುತ್ತಾರೆ ಎನ್ನುವ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಆದರೆ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಕೆಲವು ಕೆಲವೇ ದಿನಗಳಲ್ಲಿ ಪ್ರಸಾರ ನಿಲ್ಲಿಸಿದೆ. ರಾಧೆ ಶ್ಯಾಮ್ ಜಾಗಕ್ಕೆ ಯಾವ ಧಾರಾವಾಹಿ ಎಂಟ್ರಿ ಕೊಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.